newsics.com
ಬೆಂಗಳೂರು: 15 ದಿನಗಳಿಂಬ ಭಾರಿ ಮಳೆಯಾಗುತ್ತಿದ್ದು, ಕಾವೇರಿ ಕೊಳ್ಳಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ನಿರ್ಮಿಸಲಾದ ಎಲ್ಲ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿವೆ.
ಕಾವೇರಿ ನದಿಗೆ ಮೈಸೂರು ರಾಜರು ನಿರ್ಮಿಸಿದ ಅತೊದೊಡ್ಡ ಜಲಾಶಯ ಕೆಆರ್‌ಎಸ್ ಜಲಾಶಯವೂ ಈಗ ಭರ್ತಿಯಾಗಿದೆ. ಈ ಕೆಆರ್‌ಎಸ್ ಜಲಾಶಯದ ನೀರು ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಿಗೆ ಜೀವಜಲವನ್ನು ಒದಗಿಸಲಿದೆ. ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿಯಿದ್ದು, ಇಂದು ಶೇ.100ರಷ್ಟು ಭರ್ತಿಯಾಗಿದೆ.
ಜು.24ರ ಬುಧವಾರ ಸಂಜೆ ವೇಳೆಗೆ ಕೆಆರ್‌ಎಸ್ ಡ್ಯಾಮ್‌ಗೆ 41 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, ಅದನ್ನು ಸಂಗ್ರಹಣೆ ಮಾಡಲು ಸಾಧ್ಯವಾಗದೇ ಬಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಕೆಳ ಭಾಗದಲ್ಲಿರುವ ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 124.80 ಅಡಿ.
- ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
- ಇಂದಿನ ಸಾಮರ್ಥ್ಯ – 49.452 ಟಿಎಂಸಿ
- ಒಳ ಹರಿವು – 41,099 ಕ್ಯೂಸೆಕ್
- ಹೊರ ಹರಿವು – 41,099 ಕ್ಯೂಸೆಕ್