newsics.com
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟನೆಯ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ನಟನೆ ಜತೆಗೆ ನಟಿ ಹೆಚ್ಚು ಸಮಯ ಕಳೆಯುವುದು ಕುಟುಂಬದ ಜತೆ. ಪತಿ ಮತ್ತು ಮಗಳು ಮಾಲತಿ ಮೇರಿ ಚೋಪ್ರಾ ಜೋನಾಸ್ ಜತೆಗೆ ಸಾಕಷ್ಟು ಸಮಯ ಕಳಯುತ್ತಾರೆ. ಆಗಾಗ ಫೋಟೊ ಹಾಗೂ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ನಿಕ್ ಒಳ್ಳೆಯ ಗಾಯಕ ಎನ್ನುವುದು ಗೊತ್ತೇ ಇದೆ. ಇದೀಗ ಪಿಗ್ಗಿ ಮಗಳಿಗೂ ಸಂಗೀತ ಅಂದರೆ ಭಾರಿ ಒಲವು ಇದ್ದಂತಿದೆ. ಸಾಕ್ಷಿಗೆ ಪಿಗ್ಗಿ ಹೊಸ ವಿಡಿಯೊ ಹಂಚಿಕೊಂಡಿದ್ದಾರೆ. ಸ್ಟ್ರೀಟ್‌ನಲ್ಲಿ ಹಾಡನ್ನು ಪ್ರದರ್ಶಿಸುತ್ತಿರುವ ವ್ಯಕ್ತಿಯನ್ನು ಮಾಲತಿ ನಿಂತು ಕೇಳಿ ಎಂಜಾಯ್ ಮಾಡಿದ್ದಾಳೆ. ಇದೀಗ ಈ ವಿಡಿಯೊ ಸಖತ್ ವೈರಲ್ ಆಗಿದೆ.
ವಿಡಿಯೊ ಹಂಚಿಕೊಂಡ ಪ್ರಿಯಾಂಕ ʻʻಅವಳು ಸಂಗೀತವನ್ನು ಪ್ರೀತಿಸುತ್ತಾಳೆ’ ಎಂದು ಬರೆದಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ʻಅಪ್ಪನ ಮಗಳುʼʼಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಅಪ್ಪನಂತೆ ಮ್ಯೂಸಿಕ್‌ನಲ್ಲಿ ಒಳ್ಳೆಯ ಹೆಸರು ಪಡೆಯುತ್ತಾಳೆʼʼಎಂದು ಕಮೆಂಟ್ ಮಾಡಿದ್ದಾರೆ.
ಮೇಲಂಗಿ ಧರಿಸಿ ಪ್ಯಾಂಟ್ ಹಾಕೋದು ಮರೆತುಬಿಟ್ಟ KGF ಶ್ರೀನಿಧಿ ಶೆಟ್ಟಿ: ಫೋಟೋ ವೈರಲ್