newsics.com
ಬೆಂಗಳೂರು: ಕರಿಮಣಿ ಸೇರಿದಂತೆ ಹಲವು ಧಾರಾವಾಹಿ, ಸಿನಿಮಾಗಳ ನಿರ್ದೇಶಕ ವಿನೋದ್ ವಿ. ಧೋಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಿರ್ದೇಶಕರಾದ ಪಿ. ಶೇಷಾದ್ರಿ ಹಾಗೂ ಟಿ. ಎನ್. ಸೀತಾರಾಮ್ ಗರಡಿಯಲ್ಲಿ ಪಳಗಿದ್ದ ನಿರ್ದೇಶಕ ವಿನೋದ್ ಧೋಂಡಾಲೆ ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ.
ವಿನೋದ್ ಧೋಂಡಾಲೆ ಅವರ ಪಾರ್ಥಿವ ಶರೀರವನ್ನು ಪೋಸ್ಟ್ ಮಾರ್ಟಂಗಾಗಿ ಈಗ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಧೋಂಡಾಲೆ ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರದ ನಿರ್ದೇಶಕರಾಗಿದ್ದರು ವಿನೋದ್ ದೋಂಡಾಲೆ. ಅವರ ನಿರ್ದೇಶನದ ‘ಅಶೋಕ್ ಬ್ಲೇಡ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ. ಈ ಮೊದಲು ‘ಮಿಥುನ, ನನ್ನರಸಿ ರಾಧೆ ಹಾಗೂ ಯಶೋಧೆ’ ಸೀರಿಯಲ್‌ಗಳನ್ನು ಸಹ ನಿರ್ದೇಶನ ಮಾಡಿದ್ದರು.
ವಿನೋದ್ ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ನಿರ್ಮಾಪಕರ ಜತೆ ಶೂಟಿಂಗ್ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದ್ದು, ಬೆಳಗ್ಗೆ ಅವರ ಸಾವಿನ ಸುದ್ದಿ ಹಬ್ಬಿದೆ.
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದ ನಿರ್ದೇಶಕ ವಿನೋದ್ ಧೋಂಡಾಲೆ ಸದ್ಯ ‘ಕರಿಮಣಿ’ ಸೀರಿಯಲ್‌ನ ನಿರ್ದೇಶಕರೂ ಆಗಿದ್ದರು.
ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಧೋಂಡಾಲೆ ಅವರು ಈ ಮೊದಲು ‘ಮೌನರಾಗ’ ಸೀರಿಯಲ್ ಸಹ ನಿರ್ದೇಶನ ಮಾಡಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಶಾಂತಂ ಪಾಪಂ’ ಶೋದಲ್ಲಿ ಕೂಡ ಹಲವು ಎಪಿಸೋಡ್ ನಿರ್ದೇಶನ ಮಾಡಿದ್ದರು.