ಹಿರಿಯ ಪತ್ರಕರ್ತ, ಇತಿಹಾಸ ತಜ್ಞ ಈಚನೂರು‌ ಕುಮಾರ್ ಇನ್ನಿಲ್ಲ

newsics.com ಮೈಸೂರು: ಹಿರಿಯ ಪತ್ರಕರ್ತ, ಇತಿಹಾಸ ತಜ್ಞ ಈಚನೂರು ಕುಮಾರ್ ಶನಿವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲಿದ್ದ ಅವರು ಶನಿವಾರ (ಜು.20) ಬೆಳಗ್ಗೆ 11:30ರ ವೇಳೆಗೆ ಮೈಸೂರಿನ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಪುತ್ರಿ ಅಕ್ಷರಾ, ಅಜಿತ್ ಇದ್ದಾರೆ. ಮಕ್ಕಳಿಬ್ಬರೂ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ಐದು ದಶಕಗಳಿಂದ ಪತ್ರಕರ್ತರಾಗಿದ್ದ ಈಚನೂರು ಕುಮಾರ್ ಅಪಾರ ಅನುಭವ ಹೊಂದಿದ್ದರು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಈಚನೂರಿನವರಾದ ಕುಮಾರ್ ಮೈಸೂರಿನಲ್ಲೇ ಬಹುಕಾಲದಿಂದ ವಾಸವಾಗಿದ್ದರು. ಲೋಕವಾಣಿ, ನವಧ್ವನಿ, … Continue reading ಹಿರಿಯ ಪತ್ರಕರ್ತ, ಇತಿಹಾಸ ತಜ್ಞ ಈಚನೂರು‌ ಕುಮಾರ್ ಇನ್ನಿಲ್ಲ