newsics.com
ಬೆಂಗಳೂರು: ನಟ ದರ್ಶನ್ ಅವರು ಜೈಲು ಸೇರಿ ತಿಂಗಳಾಗುತ್ತಾ ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುವ ಮೊದಲು ಬಿಂದಾಸ್ ಆಗಿ ಜೀವನ ಸಾಗಿಸುತ್ತಿದ್ದ ದರ್ಶನ್ ಈಗ ಹಾಗಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇದರಿಂದ ದರ್ಶನ್ ಮತ್ತಷ್ಟು ಸೊರಗಿದ್ದಾರೆ.
ಜೈಲಿನಿಂದ ಹೊರಗಿದ್ದಾಗ ಮಾಂಸದೂಟ, ಜಿಮ್ನಲ್ಲಿ ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಆದರೆ, ಜೈಲಿನಲ್ಲಿ ಆ ರೀತಿ ಇಲ್ಲ. ಜೈಲಿನ ಇತರ ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು.
ಅಲ್ಲದೆ, ದರ್ಶನ್ ಅವರಿಗೆ ನಿತ್ಯ ಚಿಂತೆ ಕಾಡುತ್ತಿದೆ. ಯಾವಾಗ ಹೊರಗೆ ಬರುತ್ತೇನೋ ಎನ್ನುವ ಆತಂಕ ಮೂಡಿದೆ. ಹೀಗಾಗಿ ಅವರು ಜೈಲಿನಲ್ಲಿ ಸರಿಯಾಗಿ ಊಟ ಮಾಡುತ್ತಿಲ್ಲ.
ಈ ಕಾರಣದಿಂದಲೇ ಅವರು 25 ದಿನಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ಕರಾವಳಿಯಲ್ಲಿ ವ್ಯಾಪಕ ಮಳೆ: ತೀರಾ ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು! ವಿಡಿಯೋ ವೈರಲ್
ಷೇರು ಮಾರುಕಟ್ಟೆ ದಾಖಲೆ ಏರಿಕೆ: ಜೂನ್ ತಿಂಗಳೊಂದರಲ್ಲೇ 42 ಲಕ್ಷಕ್ಕೂ ಹೆಚ್ಚು ಡಿಮ್ಯಾಟ್ ಖಾತೆ ಓಪನ್!
ಕಮದಾಳು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಎದುರೇ ಚಿರತೆ ಹತ್ಯೆ: ತನಿಖೆಗೆ ರಾಜ್ಯ ಸರ್ಕಾರ ಆದೇಶ