newsics.com
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಹಿರಿಯ ನಟ ದರ್ಶನ್ ಅಕ್ಟೋಬರ್ ಅಂತ್ಯದವರೆಗೂ ಸಂಕಷ್ಟಕ್ಕೊಳಗಾಗಲಿದ್ದಾರೆ. ಅಕ್ಟೋಬರ್ 28ರವರೆಗೂ ಜಾಮೀನು ಸಿಗುವುದು ಕಷ್ಟ ಎಂದು ಬಿಗ್ ಬಾಸ್‌ಗೆ ಅತಿಥಿಯಾಗಿ ಬಂದು ಖ್ಯಾತಿ ಪಡೆದಿರುವ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಅವರ ವೃತ್ತಿ ಬದುಕಿಗೆ ಕಪ್ಪು ಚುಕ್ಕೆಯಾಗಿದೆ. ಅವರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ 15 ವರ್ಷಗಳಲ್ಲಿ ದರ್ಶನ್ ಅವರು ಒಂದಲ್ಲಾ ಒಂದು ವಿವಾದ ಮಾಡಿಕೊಳ್ಳುತ್ತಿದ್ದಾರೆ. ಕೋಪ ಅನ್ನೋದು ಆಯುಧವೂ ಹೌದು, ದೌರ್ಬಲ್ಯವೂ ಹೌದು. ಆತುರಗಾರನಿಗೆ ಬುದ್ಧಿಮಟ್ಟ. ದರ್ಶನ್ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಾವು ಹೇಳಬಾರದು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರುತ್ತದೆ’ ಎಂದು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ದರ್ಶನ್ ಅವರ ಜನ್ಮದಿನ, ರಾಶಿ-ನಕ್ಷತ್ರ ಉಲ್ಲೇಖಿಸಿ ಮುಂದೇನಾಗಬಹುದು ಎಂಬುದನ್ನು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ವಿವರಿಸಿದ್ದಾರೆ.
‘2011ರಿಂದ ದರ್ಶನ್ ಅವರಿಗೆ ಗುರುದಶ ಶುರುವಾಗಿದೆ. ಅವರು ಆಗ ದೊಡ್ಡ ಅಪವಾದ ಅನುಭವಿಸಿದ್ದರು. ಹಲವು ದಿನ ಜೈಲಿನಲ್ಲಿದ್ದರು. ಹೊರಗೆ ಇರುವ ದರ್ಶನ್‌ಗೂ ಆಂತರ್ಯದಲ್ಲಿರುವ ದರ್ಶನ್‌ಗೂ ಸಾಕಷ್ಟು ವ್ಯತ್ಯಾಸ ಇದೆ. ಗುರುದಶ ಶುರುವಾದಾಗಿನಿಂದ ಅವರು ಮೇಲೆ ಹೋಗೋದು ಪಾತಾಳಕ್ಕೆ ಬೀಳೋದು ಆಗುತ್ತಿದೆ’ ಎಂದಿದ್ದಾರೆ ಸ್ವಾಮೀಜಿ.
2013ರ ನಂತರ ಬಿಡುಗಡೆಯಾದ ಯಾವ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. 2023 ನವೆಂಬರ್‌ನಿಂದ 2024ರ ಅಕ್ಟೋಬರ್‌ವರೆಗೆ ಕುಜ ಭುಕ್ತಿ ಇದೆ. ಕುಜ ತುಂಬಾ ಕೋಪದವನು. ಕಾರಾಗೃಹ ವಾಸವನ್ನು ಕೊಡ್ತಾನೆ. ಅಲ್ಲಿಯೇ ಕೇತು ಬೇರೆ ಇದ್ದಾನೆ. ಹೀಗಾಗಿ ಅಪನಿಂದನೆ ಆಗುತ್ತದೆ. ತುಂಬಾ ಜಾಗೃತಿಯಿಂದ ಇರಬೇಕಿತ್ತು. ದರ್ಶನ್ ಅರೆಸ್ಟ್ ಆದ ದಿನವನ್ನು ಗಮನಿಸಿ ಹೇಳುವುದಾದರೆ, ಮಂಗಳವಾರ ಅವರು ಅರೆಸ್ಟ್ ಆಗಿದ್ದಾರೆ. ಹುಟ್ಟಿದಾಗಲೂ, ಅರೆಸ್ಟ್ ಆದಾಗಲೂ ಗುರು ಇದ್ದಾನೆ. 2024ರ ಅಕ್ಟೋಬರ್‌ವರೆಗೂ ಅವರಿಗೆ ಕಠಿಣ ಪರಿಸ್ಥಿತಿ ಇದೆ. ಅಕ್ಟೋಬರ್ ನಂತರ ಅವರ ಜೀವನ ಬದಲಾಗುತ್ತದೆ. ದರ್ಶನ್‌ಗೆ ಅಕ್ಟೋಬರ್ 28ವರೆಗೂ ಜಾಮೀನು ಅಸಾಧ್ಯ’ ಎಂದು ಸ್ವಾಮೀಜಿ ಹೇಳಿದ್ದಾರೆ.
2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ
ರಾಜ್ಯದಲ್ಲಿ ಮುಂದುವರಿದ ಡೆಂಘೀ ಅಟ್ಟಹಾಸ: ಬೆಂಗಳೂರಲ್ಲಿ ಬಾಲಕ ಸಾವು, ಶಿವಮೊಗ್ಗದಲ್ಲಿ ಝೀಕಾಗೆ ವೃದ್ಧ ಬಲಿ