newsics.com
ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಾಪಡಿಯ ಕಾರ್ತುಂಬಿಯಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯರು ಸೇರಿ ಛತ್ರಿ ತಯಾರಿಸುತ್ತಿರುವ ವಿಚಾರವನ್ನು ಮೋದಿ ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದರು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯರು ಇನ್ನೂ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ ಅವರು, ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. #cheer4bharat ಹ್ಯಾಷ್ ಟ್ಯಾಗ್ ಉಪಯೋಗಿಸಿ ದೇಶದ ಕ್ರೀಡಾಪಟುಗಳನ್ನು ಉತ್ತೇಜಿಸುವಂತೆ ಜನರಿಗೆ ಅವರು ಕರೆ ನೀಡಿದರು.
ಕುವೈತ್ ರೇಡಿಯೋದ ಹಿಂದಿ ಕಾರ್ಯಕ್ರಮ
ಕುವೈತ್‌ನ ನ್ಯಾಷನಲ್ ರೇಡಿಯೋದಲ್ಲಿ ಪ್ರತಿ ಭಾನುವಾರ ಅರ್ಧ ಗಂಟೆ ಹಿಂದಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯ ಸ್ಥಳೀಯ ಜನರೂ ಈ ಕಾರ್ಯಕ್ರಮ ಇಷ್ಟಪಡುತ್ತಿದ್ದಾರೆ. ಇದಕ್ಕಾಗಿ ಕುವೈತ್ ಸರ್ಕಾರಕ್ಕೆ ಅಭಿನಂದನೆ ಹೇಳುತ್ತೇನೆ ಎಂದು ಮೋದಿ ಹೇಳಿದರು.
ತುರ್ಕ್ಮೆನಿಸ್ತಾನ್‌ನಲ್ಲಿ ವಿಶ್ವದ 24 ಕವಿಗಳ ಪ್ರತಿಮೆ ನಿರ್ಮಿಸಲಾಗಿದೆ. ಇದರಲ್ಲಿ ಭಾರತದ ಗುರು ರವೀಂದ್ರನಾಥ್ ಠಾಗೂರ್ ಅವರ ಪ್ರತಿಮೆಯೂ ಇದೆ. ಸುರಿನಾಮ್ ಮತ್ತು ಸೆಂಟ್ ವಿನ್ಸೆಂಟ್ಮತ್ತು ಗ್ರಿನಾಡೆಸ್ನಲ್ಲಿ ಭಾರತೀಯ ಪರಂಪರೆಯನ್ನು ಆಚರಿಸಲಾಗುತ್ತದೆ ಎಂದೂ ಮೋದಿ ಪ್ರಸ್ತಾಪಿಸಿದರು.
ಈ ತಿಂಗಳು 10ನೇ ಯೋಗದಿನವನ್ನು ಉತ್ಸಾಹದಿಂದ ಆಚರಿಸಲಾಯಿತು. ಕಾಶ್ಮೀರದಲ್ಲಿ ನಾನೂ ಪಾಲ್ಗೊಂಡಿದ್ದೆ. ಅಲ್ಲಿನ ಯುವಕರು, ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸೌದಿ ಅರೇಬಿಯಾದಲ್ಲಿ ಒಬ್ಬ ಮಹಿಳೆ ಯೋಗ ಸೆಷನ್ ಮುನ್ನಡೆಸಿದರು. ಇಂಥದ್ದು ಅಲ್ಲಿ ಇದೇ ಮೊದಲು. ಈಜಿಪ್ಟ್ನಲ್ಲಿ ನೈಲ್ ನದಿ ತೀರದಲ್ಲಿ, ಪಿರಾಮಿಡ್ ಸಮೀಪದಲ್ಲಿ ಯೋಗ ಪ್ರದರ್ಶನ ಮಾಡಲಾಯಿತು ಎಂದು ಅವರು ತಿಳಿಸಿದರು.
ಬಹರೇನ್, ಶ್ರೀಲಂಕಾ, ಅಮೆರಿಕ, ಮಾರ್ಷಲ್ ಐಲೆಂಡ್ಸ್, ಭೂತಾನ್ ಮೊದಲಾದ ದೇಶಗಳಲ್ಲಿ ಯೋಗ ದಿನ ಆಚರಣೆ ನಡೆದಿರುವುದನ್ನು ಪ್ರಸ್ತಾಪಿಸಿದ ಅವರು, ಒಂದು ದಿನ ಯೋಗ ಮಾಡುವುದಲ್ಲ, ಅದು ನಿಮ್ಮ ಜೀವನದ ನಿತ್ಯ ಭಾಗವಾಗಿರಲಿ ಎಂದು ಕರೆನೀಡಿದರು.
ಜೂನ್ 30 ಜಾರ್ಖಂಡ್ನ ಸಿಧು ಮತ್ತು ಕಾನ್ಹು ಬಲಿದಾನಗೊಂಡ ದಿನ. ಇವರನ್ನು ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಸ್ಮರಿಸಿದರು. 1855ರಲ್ಲಿ ಬ್ರಿಟಿಷರ ವಿರುದ್ಧ ಇವರು ಶಸ್ತ್ರಾಸ್ತ್ರ ಹೋರಾಟ ನಡೆಸಿದ್ದರು ಎಂಬುದನ್ನು ಮೋದಿ ಹೇಳಿದರು. ಸಂತಾಲಿ ಭಾಷೆಯಲ್ಲಿ ಅವರಿಬ್ಬರ ಬಗ್ಗೆ ಒಂದು ಹಾಡಿನ ತುಣುಕು ಕೂಡ ಪ್ರಸಾರವಾಯಿತು.
ನರೇಂದ್ರ ಮೋದಿ ತಮ್ಮ ಈ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಶ್ಮೀರದ ಹಿಮ ಬಟಾಣಿ ವಿವಿಧೆಡೆ ಜನಪ್ರಿಯವಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಜಗನ್ನಾಥ ಯಾತ್ರೆ, ಅಮರನಾಥ ಯಾತ್ರೆ, ಪಂಡರಾಪುರ ಜಾತ್ರೆ ನಡೆಯಲಿರುವುದನ್ನೂ ಉಲ್ಲೇಖಿಸಿದ ಅವರು ಭಕ್ತಾದಿಗಳಿಗೆ ಶುಭ ಕೋರಿದರು.
ಚಡ್ಡಿಯೊಳಗೆ ಅವಿತು ಕುಳಿತ ಹಾವು; ಎಚ್ಚರವಾದಾಗ ಯುವಕ ಮಾಡಿದ್ದೇನು ಗೊತ್ತಾ?
ವಾರ ಭವಿಷ್ಯ… 30 ಜೂನ್ 6 ಜುಲೈ 2024- ಮೀನಾಮೇಷ ಎಣಿಸದೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ
ಭಾರತ ವಿಶ್ವಕಪ್ ಗೆದ್ದಿದ್ದಕ್ಕೆ ನೆಟ್ಟಿಗರು ನಟ ದರ್ಶನ್‌ಗೆ ಥ್ಯಾಂಕ್ಸ್ ಹೇಳ್ತಿರೋದ್ಯಾಕೆ?
