newsics.com
ಬೆಂಗಳೂರು: ಚಂದನ್ ಶೆಟ್ಟಿ ಜತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ಇದೇ ಮೊದಲ ಬಾರಿಗೆ ನಿವೇದಿತಾ ಗೌಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ.
ಡಿವೋರ್ಸ್ ನಂತರ ನಿವೇದಿತಾ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಡಿವೋರ್ಸ್ ಬಳಿಕ ಹೊಸ ರೀಲ್ಸ್ ಅನ್ನು ನಿವೇದಿತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಗುತ್ತಿರುವ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಬಗೆ ಬಗೆಯ ಕಮೆಂಟ್‌ಗಳು ಹರಿದುಬರುತ್ತಿವೆ.
ಜೂನ್ 7ರಂದು ಕಾನೂನುಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧ ಕೊನೆಗೊಳಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಮತ್ತು ನಿವೇದಿತಾ ಪ್ರಕಟಿಸಿದ್ದರು.
https://www.instagram.com/reel/C8brqNzJgSD/?igsh=dDEzNmV5czMxd3Vw
ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ