Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಭಾವಲಹರಿ > ಭಾವಲಹರಿಯಲ್ಲಿ ಗುನುಗುಟ್ಟಿದ ಸಾಲಿಗೆ ಜೀವ ತುಂಬಿದಾಗ…
ಅನಾವರಣಭಾವಲಹರಿ

ಭಾವಲಹರಿಯಲ್ಲಿ ಗುನುಗುಟ್ಟಿದ ಸಾಲಿಗೆ ಜೀವ ತುಂಬಿದಾಗ…

Share
2 Min Read
SHARE

– ಜೀವಿತಾ

[email protected]

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ… ಎಲ್ಲಿರುವೇ… ಅಬ್ಬಾ! ಅದ್ಯಾಕೋ ಗೊತ್ತಿಲ್ಲ, ಅವತ್ತು ಬೆಳಗ್ಗೆಯಿಂದಲೇ ಈ ಹಾಡು ನನ್ನ ಬಾಯಲ್ಲಿ ಗುನುಗುತ್ತಿತ್ತು. ಆದರೆ ಅಂದು ನಿನ್ನ ಕಡೆಯಿಂದ ಯಾವ ಮೆಸೆಜ್‌ಗಳೂ ಬಂದಿರಲಿಲ್ಲ. ಕಾದೂ ಕಾದೂ ಸಾಕಾಗಿತ್ತು. ಆಗ ಫೋನು ರಿಂಗಣಿಸಿದ ಸದ್ದಾಯಿತು. ಫೋನಿನ ಪರದೆಯ ಮೇಲೆ ನಿನ್ನ ಹೆಸರು ನೋಡಿ ಪರಿವೆಯೇ ಇಲ್ಲದೆ ಮುಗುಳ್ನಗು ಮುಖದಲ್ಲಿ ಅಂಗಾತ ಮಲಗಿತ್ತು.

ಫೋನ್ ಎತ್ತಿ ಹಲೋ ಎನ್ನುವುದಕ್ಕಿಂತ ಮುನ್ನವೇ ಇವತ್ತು ನಮ್ಮ ಮೊದಲ ಭೇಟಿಯ ಜಾಗವಾದ ಕಾಫಿ ಶಾಪ್‌ನಲ್ಲಿ ಭೇಟಿಯಾಗೋಣ ಎಂಬ ಧ್ವನಿ ಕೇಳಿ ನನಗಾದ ಸಂತೋಷಕ್ಕೆ ಮಿತಿ ಇರಲಿಲ್ಲ.

ಆಗಮನದ ಸೂಚನೆಯೇ ನೀಡದೆ ಸತತ ಐದು ವರ್ಷಗಳ ನಂತರ ನೀನು ಅಮೆರಿಕದಿಂದ ಆಗಮಿಸಿದ್ದನ್ನು ಕೇಳಿ ನನ್ನ ಖುಶಿಗೆ ಮಿತಿ ಇರಲಿಲ್ಲ. ಯಾಕೋ ಬೆಳಗ್ಗೆಯಿಂದ ಭಾವ ಲಹರಿಯಂತೆ ಹರಿದಾಡುತ್ತಿದ್ದ ಹಾಡು ನಿಜವಾಗುವುದನ್ನು ನೆನೆದು ಅರಿವೇ ಇಲ್ಲದೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಅನುಭವವಾಗುತ್ತಿತ್ತು.

ಐದು ವರ್ಷದಿಂದ ಕಾದ ಸಮಯ ಸನ್ನಿಹಿತವಾಗಿತ್ತು. ಹಕ್ಕಿ ರೆಕ್ಕೆ ಬಿಚ್ಚಿ ಹಾರಿದ ಅನುಭವ. ಹೇಳಬೇಕೆಂದು ರಾಶಿ ಹಾಕಿದ್ದ ಮಾತುಗಳಿಗೆ ಜೀವ ಕೊಡುವ ಸಮಯ. ಬುದ್ಧನಂತೆ ಶಾಂತವಾಗಿ ಕುಳಿತು ನನ್ನೆಲ್ಲಾ ಮಾತುಗಳನ್ನು ಕೇಳುವ ಜೀವಕ್ಕೆ ಕೂಡಿಟ್ಟ ಭಾವನೆಗಳನ್ನು ಸರಮಾಲೆಯಂತೆ ಹೇಳುವ ಕಾತುರತೆ ನನ್ನಲ್ಲಿ ಮೂಡಿತ್ತು.

ಕೊನೆಗೂ ಹೇಳಿದ ಜಾಗಕ್ಕೆ ಅರ್ಧ ಗಂಟೆ ಮೊದಲೇ ನನ್ನ ಹಾಜರಿಯಾಗಿತ್ತು. ಮನದರಸನನ್ನು ಕಾಣುವ ಹಂಬಲ ಅರ್ಧ ಗಂಟೆ ಮುಂಚಿತವಾಗಿ ಬಂದೆ ಎನ್ನುವುದನ್ನೇ ಮರೆಸಿತ್ತು.

ಎಷ್ಟು ಕಾದರೂ ಸಮಯ ಮಾತ್ರ ಕಳೆಯುತ್ತಿರಲಿಲ್ಲ. ಸೆಕೆಂಡಿಗೊಮ್ಮೆ ವಾಚ್ ನೋಡುವುದೇ ನನ್ನ ಕೆಲಸವಾಗಿತ್ತು. ನಿಂತಲ್ಲಿ ನಿಲ್ಲದ ಕಾಲುಗಳು ಅತ್ತಿಂದಿತ್ತ ಚಕ್ರ ಕಟ್ಟಿದಂತೆ ಓಡಾಡುತ್ತಿತ್ತು. ಸಮಯ ಯಾಕೋ ನಿಧಾನಗತಿಯಲ್ಲಿ ಸಾಗುತ್ತದೆ ಎನ್ನುವ ಭಾವ. ಆದರೂ ವಾಚ್ ಏನಾದರೂ ಶೆಲ್ ಕಾಲಿಯಾಗಿ ನಿಂತು ಹೋಗಿದೆಯೇ ಎಂದು ತೆಗೆದು ತಿರುಗಿಸಿ ನೋಡಿದ್ದೂ ಆಯಿತು. ದಾರಿಯಲ್ಲಿ ಕಾಣುವವರನ್ನೆಲ್ಲಾ ಗಂಟೆ ಎಷ್ಟಾಯಿತೆಂದು ಕೇಳಿಯೂ ಆಯಿತು. ಆದರೆ ಅವನ ಸುಳಿವು ಮಾತ್ರ ಇರಲಿಲ್ಲ.

ಶಾಪ್‌ನ ಹೊರಗಡೆ ನಿಂತಿದ್ದ ನನ್ನ ಚಡಪಡಿಕೆ ನೋಡಿ ಪಕ್ಕದಲ್ಲಿದ್ದ ವಯಸ್ಸಾದ ಅಜ್ಜಿ, ಏನಾದರೂ ಕಳೆದುಕೊಂಡಿದ್ದಿಯನಮ್ಮಾ ಎಂದು ಕೇಳಿಯೇಬಿಟ್ಟರು. ಆದರೆ ಅವರಿಗೆ ಹೇಗೆ ಹೇಳಲಿ ನನ್ನ ಹೃದಯ ಕಳುವಾಗಿದೆ. ಕದ್ದವನ ಆಗಮಕ್ಕಾಗಿಯೇ ಈ ಕಾತರತೆಯ ಚಡಪಡಿಕೆ ಎಂದು. ಆ ಅರ್ಧ ಗಂಟೆ ಅವನಿಗಾಗಿ ಕಾದ ಸಮಯ ಐದು ವರ್ಷಕ್ಕಿಂತ ಹೆಚ್ಚಿನ ಸಮಯವಾದ ಅನುಭವ ನೀಡಿತ್ತು.

ತಲೆಬಗ್ಗಿಸಿ ಕೈಬೆರಳುಗಳನ್ನು ಮುಷ್ಟಿ ಕಟ್ಟಿ ತಿರುಗಿಸುತ್ತಿದ್ದ ನನ್ನ ಎದುರು ಕಪ್ಪು ಶೂಗಳ ತೊಟ್ಟ ಕಾಲುಗಳು. ತಲೆ ಎತ್ತಿ ನೋಡಿದರೆ, ಮೀಸೆಯಂಚಿನಲ್ಲಿ ನಗುವ ತುಂಬಿಕೊಂಡ ಮುಖ. ಆ ಕ್ಷಣ ಬೇಡವೆಂದರೂ ಕೆನ್ನೆ ಕೆಂಪೇರಿಸುವಷ್ಟು ನಗು ನನ್ನ ಮುಖವನ್ನು ಆವರಿಸಿಕೊಂಡಿತ್ತು.

ಯಾಕೆ ಇಷ್ಟು ತಡವಾಗಿ ಬಂದೆ, ಸಮಯ ಪ್ರಜ್ಞೆ ಇಲ್ಲವಾ ಎಂದು ಗದರಿದ್ದೆ. ಆದರೆ ಆತ ತನ್ನ ಮೊಬೈಲ್ ನೋಡಿ ಸರಿಯಾದ ಸಮಯಕ್ಕೆ ಬಂದಿದ್ದೇನಲ್ಲಾ ಎಂದ. ನನ್ನ ಕಾತರತೆಗೆ ಕಡಿವಾಣ ಹಾಕಲಾಗದೇ ಬೇಗ ಬಂದವಳು ನಾನೇ ಎಂದು ನೆನೆಸಿ ಮನದಲ್ಲಿ ನಕ್ಕಿದ್ದೆ.

ಅದೇ ಕ್ಷಣ ಮನದ ಮೂಲೆಯಲ್ಲಿ ರಾಶಿ ಹಾಕಿದ್ದ ಮಾತುಗಳು ಅವನ ನೋಡಿದ ಖುಶಿಗೆ ಬೆಚ್ಚಗೆ ಮಲಗಿಬಿಟ್ಟಿದ್ದವು. ಮನದರಸನಿಗೆ ಕಾದ ಅರ್ಧ ಗಂಟೆ ಪ್ರೀತಿಗಿದ್ದ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಬರುವಿಕೆಗಾಗಿ ಕಾದ ಐದು ವರ್ಷಕ್ಕಿಂತ ಅರ್ಧ ಗಂಟೆ ದೊಡ್ಡದಾಗಿತ್ತು.

ಪದ್ಯ- ಸಖ್ಯ ಸಂಧಾನ

ಸಂಬಂಧಕ್ಕೂ ಬಂತು ಹೊಸ ಟ್ರೆಂಡ್, ಅದೇ ಬೆಂಚಿಂಗ್ ರಿಲೇಶನ್‌ಶಿಪ್!

TAGGED:When a line hummed with emotion comes to life...
Share This Article
Facebook Twitter Copy Link Print
Previous Article ವಜಾಗೊಂಡ ಉದ್ಯೋಗಿಗಳ ಹಿಂದೆ ಬಿದ್ದ ಎಲಾನ್ ಮಸ್ಕ್: ಕಾರಣವೇನು ಗೊತ್ತಾ?
Next Article ಇಂದು ಬುಧ ಪ್ರದೋಷ ವ್ರತ: ಈ ರಾಶಿಯವರಿಗೆ ಶುಭ ಯೋಗ ಸಂಯೋಗ

Popular Posts

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

1 Min Read

You Might Also Like

ಅನಾವರಣದೇಶ

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ: ವಿಶ್ವವಿಖ್ಯಾತ ಭಕ್ತಿಯ ಮಹೋತ್ಸವದ ವಿಶೇಷತೆ ಮತ್ತು ಮಹತ್ವ

1 Min Read
ನೆನಪುಕರ್ನಾಟಕಮನರಂಜನೆವೈರಲ್

Harshika Poonacha’s Retro-Style Baby Bump Photoshoot ರೆಟ್ರೋ ಸ್ಟೈಲ್‌ನಲ್ಲಿ ಬೇಬಿ ಬಂಪ್ ಫೋಟೋಶೂಟ್: ಹರ್ಷಿಕಾ ಪೂಣಚ್ಚ ಹೊಸ ಅವತಾರಕ್ಕೆ ಅಭಿಮಾನಿಗಳ ಮೆಚ್ಚುಗ

1 Min Read
ವಿದೇಶಅನಾವರಣಪ್ರಮುಖವೈರಲ್

Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!

2 Min Read
ಅನಾವರಣದೇಶಪ್ರಮುಖ

Black magic village ದೇಶದ ಈ ಊರು ಮಾಟ- ಮಂತ್ರಗಳ‌ ರಾಜಧಾನಿ! ಪ್ರತಿ ಮನೆಯಲ್ಲೂ‌ ಇದ್ದಾರೆ ಮಾಟಗಾರರು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?