Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!
ವಿದೇಶಅನಾವರಣಪ್ರಮುಖವೈರಲ್

Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!

Share
2 Min Read
SHARE

newsics.com | ನ್ಯೂಸಿಕ್ಸ್

ಇಂದು ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಭಾರತದಲ್ಲಿಯೂ ಸಹ, ಆನ್ಲೈನ್ ಪೇಮೆಂಟ್ನಿಂದ ನಗದು ವಹಿವಾಟಿನ ಅಗತ್ಯವನ್ನು ಕಮ್ಮಿ ಮಾಡಿದೆ. ಆದರೆ ಈ ದೇಶದಲ್ಲಿ ಹಣ್ಣುತರಕಾರಿಗಳನ್ನು ರಸ್ತೆ ಪಕ್ಕದಲ್ಲಿಟ್ಟು ಮಾರಾಟ ಮಾಡುವಂತೆ ನೋಟುಗಳ ಬಂಡಲ್‌ಗಳನ್ನೇ ಮಾರಾಟ ಮಾಡುತ್ತಾರೆ.

ಉತ್ತರ ಆಫ್ರಿಕಾದ ಅಡೆನ್ ಕೊಲ್ಲಿಯ ಬಳಿ ಇರುವ ಸೊಮಾಲಿಲ್ಯಾಂಡ್ನಲ್ಲಿ ನೋಟುಗಳ ಮಾರುಕಟ್ಟೆಯನ್ನೇ ಹೊಂದಿದೆ. 1991ರಲ್ಲಿ, ಈ ಪ್ರದೇಶವು ಸೊಮಾಲಿಯಾದಿಂದ ಸ್ವತಂತ್ರವಾಗಿದೆ ಎಂದು ಘೋಷಿಸಿಕೊಂಡಿತು.

ಆದರೆ, ಇಂದಿಗೂ ವಿಶ್ವಸಂಸ್ಥೆ ಸೇರಿದಂತೆ ಹೆಚ್ಚಿನ ದೇಶಗಳು ಇದನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸುವುದಿಲ್ಲ.

ಸರಿಸುಮಾರು ನಾಲ್ಕು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶವು ತನ್ನನ್ನು ಸ್ವತಂತ್ರ ಗಣರಾಜ್ಯವೆಂದು ಪರಿಗಣಿಸುತ್ತದೆ ಮತ್ತು ತನ್ನದೇ ಆದ ಸರ್ಕಾರ ಮತ್ತು ಆಡಳಿತವನ್ನು ಹೊಂದಿದೆ.

ಸೊಮಾಲಿಲ್ಯಾಂಡ್‌ನ ಅಧಿಕೃತ ಕರೆನ್ಸಿ ಸೊಮಾಲಿಲ್ಯಾಂಡ್ ಶಿಲ್ಲಿಂಗ್. ಆದ್ರೆ, ಇಲ್ಲಿನ ಕರೆನ್ಸಿ ಮೌಲ್ಯ ತುಂಬಾ ಕಡಿಮೆಯಾಗಿದ್ದು, ಒಂದು ಯುಎಸ್ ಡಾಲರ್‌ಗೆ 9,000 ಶಿಲ್ಲಿಂಗ್ ಸಮವಾಗಿದೆ. ಇಲ್ಲಿ ಸಾಮಾನ್ಯ ಕರೆನ್ಸಿ 500 ಮತ್ತು 1,000 ಶಿಲ್ಲಿಂಗ್ ನೋಟುಗಳಾಗಿವೆ.

ಈ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹೀಗಾಗಿ ಇಲ್ಲಿನ ಜನರು ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಲು ಬಂಡಲ್ಗಟ್ಟಲೇ ನೋಟುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಇಷ್ಟು ಕಡಿಮೆ ಕರೆನ್ಸಿ ಮೌಲ್ಯದಿಂದಾಗಿ, ಹಣವನ್ನು ಸಾಗಿಸುವುದೇ ಜನರಿಗೆ ಪ್ರಮುಖ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಸೊಮಾಲಿಲ್ಯಾಂಡ್‌ನಲ್ಲಿ ಮೊಬೈಲ್ ಪಾವತಿಗಳು ಮತ್ತು ಡಿಜಿಟಲ್ ವಹಿವಾಟುಗಳು ವೇಗವಾಗಿ ಬೆಳೆಯುತ್ತಿವೆ. ಇಲ್ಲಿನ ಜನರು ಸಣ್ಣ ಖರೀದಿಗಳಿಂದ ಹಿಡಿದು ದೊಡ್ಡ ಮೊತ್ತದವರೆಗೆ ಮೊಬೈಲ್ ಮೂಲಕವೇ ಪಾವತಿಸಲು ಬಯಸುತ್ತಾರೆ.

ಜನಸಾಮಾನ್ಯರು ಮಾತ್ರವಲ್ಲದೇ ಇಲ್ಲಿನ ಭಿಕ್ಷುಕರು ಸಹ ನಗದು ಬದಲು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಾರಂತೆ. ಅದಕ್ಕಾಗಿಯೇ ಸೊಮಾಲಿಲ್ಯಾಂಡ್‌ನ ಹೆಚ್ಚಿನ ಭಾಗವು ನಗದುರಹಿತ ವಹಿವಾಟಿನ ಮೇಲೆ ಅವಲಂಬಿತವಾಗಿದೆ.

ಸೊಮಾಲಿಲ್ಯಾಂಡ್‌ನ ಸುಮಾರು ಅರ್ಧದಷ್ಟು ಭಾಗವು ಮರುಭೂಮಿಯಾಗಿದ್ದು, ಕೃಷಿಗೆ ಸೀಮಿತವಾಗಿದೆ. ಉದ್ಯೋಗಾವಕಾಶಗಳು ವಿರಳವಾಗಿದ್ದು, ಇಲ್ಲಿನ ಜೀವನೋಪಯಕ್ಕಾಗಿ ಮೀನುಗಾರಿಕೆ ಮತ್ತು ಸಣ್ಣ ವ್ಯವಹಾರಗಳ ಮೂಲಕ ಜೀವನ ಸಾಗಿಸುತ್ತಾರೆ. ಇದರ ಹೊರತಾಗಿಯೂ, ಆರ್ಥಿಕತೆಯನ್ನು ಇನ್ನೂ ದುರ್ಬಲವೆಂದು ಪರಿಗಣಿಸಲಾಗಿದೆ.

ಸೊಮಾಲಿಲ್ಯಾಂಡ್‌ನ ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಲ್ಲಿನ ಕಡಲತೀರಗಳು, ನಿಗೂಢ ಗುಹೆಗಳು ಮತ್ತು ನೈಸರ್ಗಿಕ ಪ್ರದೇಶಗಳು ಸಂಶೋಧಕರು ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇತಿಹಾಸ, ಭೌಗೋಳಿಕತೆ ಮತ್ತು ಪುರಾತತ್ತ್ವ ಶಾಸ್ತ್ರಜ್ಞರು ಸಹ ಸಂಶೋಧನೆಗಾಗಿ ಈ ದೇಶಕ್ಕೆ ಭೇಟಿ ನೀಡುತ್ತಾರೆ.

Everything is for dad ಅಪ್ಪನಿಗಾಗಿ 55 ಅಡಿ ಎತ್ತರದ ತಾಳೆ ಮರಕ್ಕೇ ಮೆಟ್ಟಿಲು ನಿರ್ಮಿಸಿದ ಮಗ! ಯಾಕೆ ಹೀಗೆ?

Moon quarantine center ಕೊರೋನಾ ತಂದ ಜಾಗತಿಕ ಭೀತಿ: ವೈರಸ್ ತಡೆಗೆ ಚಂದ್ರನಲ್ಲೇ ಕ್ವಾರಂಟೈನ್ ಕೇಂದ್ರ!

Ceremonial Code ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ಗಾಯನಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಕಡ್ಡಾಯ ಪಾಲನೆಗೆ ಸೂಚನೆ

Court Order ಗಾಂಜಾ ಸೇವಿಸಿದ ಯುವಕನಿಂದಲೇ ಶಾಲೆಯಲ್ಲಿ ಜಾಗೃತಿ ಪಾಠ! ಗಮನ ಸೆಳೆದ ಕೋರ್ಟ್ ಆದೇಶ

TAGGED:#currencymarket #world #sellmoney #somaliland #news #newsics
Share This Article
Facebook Twitter Copy Link Print
Previous Article Acquired Reddy’s land ರೆಡ್ಡಿ ಒಡೆತನದ 5 ಸಾವಿರ ಕೋಟಿ ಮೌಲ್ಯದ 14 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡ ಆಂಧ್ರ ಸರ್ಕಾರ
Next Article ASTRO ಇಂದು ಗಂಡ ಯೋಗ, ವೃದ್ಧಿ ಯೋಗ: ಈ ಐದು ರಾಶಿಗಳ ಜನರಿಗೆ ಬಂಪರ್ ಅದೃಷ್ಟ

Popular Posts

Babies ಮಕ್ಕಳಿಗೆ ಕನ್ನಡಿ ತೋರಿಸಿದ್ರೆ ಮಾತು ಬರಲ್ವಾ? ಹಿರಿಯರ ಆ ಮಾತಿನ ಹಿಂದಿರುವ ಅಸಲಿ ರಹಸ್ಯ ಮತ್ತು ವೈಜ್ಞಾನಿಕ ಸತ್ಯ ಇಲ್ಲಿದೆ

2 Min Read

Crime Case ಗುಂಡು ಹಾರಿಸಿಕೊಂಡು 24 ವರ್ಷದ ಯುವಕ ಸಾ*ವು

1 Min Read

Bollywood ಜುಲೈ 24 ಕ್ಕೆ ರಿಲೀಸ್‌ ಆಗಲಿದೆ ರಣಬೀರ್-ಯಶ್ ನಟನೆಯ ‘ರಾಮಾಯಣ’ ಟ್ರೇಲರ್

1 Min Read

Triple Crime ಮಾವ, ತಾಯಿ, ಅಜ್ಜಿಯನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹ*ತ್ಯೆಗೆ ಶರಣಾದ ಮಗ

2 Min Read

You Might Also Like

ಪ್ರಮುಖವಿದೇಶ

Plane Crash ಭೀಕರ ವಿಮಾನ ದುರಂತ: ಸ್ವಾತಂತ್ರ್ಯ ದಿನದಂದೇ 10 ಮಂದಿ ದುರ್ಮರಣ

1 Min Read
ಪ್ರಮುಖಕರ್ನಾಟಕ

Menstrual Leave ಆರೋಗ್ಯ ಇಲಾಖೆ ಮಹಿಳೆಯರಿಗೆ ಗುಡ್ ನ್ಯೂಸ್: ಸಿಗಲಿದೆ ವರ್ಷಕ್ಕೆ 12 ದಿನ ವೇತನಸಹಿತ ಋತುಚಕ್ರದ ರಜೆ

1 Min Read
ಪ್ರಮುಖಕರ್ನಾಟಕ

Air Show ಏರೋ ಇಂಡಿಯಾ 2027 ಡೇಟ್ಸ್ ಫಿಕ್ಸ್: ಯಲಹಂಕದಲ್ಲಿ ಮತ್ತೊಮ್ಮೆ ಭರ್ಜರಿ ಏರ್ ಶೋ ಸದ್ದು

1 Min Read
ಪ್ರಮುಖಜ್ಯೋತಿಷ್ಯ

Astrology ಈ 4 ರಾಶಿಯವರು ಸಾಲದ ವ್ಯವಹಾರ ಮಾಡಿದ್ರೆ ಕೈ ಸುಟ್ಟುಕೊಳ್ಳೋದು ಗ್ಯಾರಂಟಿ! ಜ್ಯೋತಿಷ್ಯದ ಮುನ್ನೆಚ್ಚರಿಕೆ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?