Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Acquired Reddy’s land ರೆಡ್ಡಿ ಒಡೆತನದ 5 ಸಾವಿರ ಕೋಟಿ ಮೌಲ್ಯದ 14 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡ ಆಂಧ್ರ ಸರ್ಕಾರ
ಕರ್ನಾಟಕದೇಶಪ್ರಮುಖ

Acquired Reddy’s land ರೆಡ್ಡಿ ಒಡೆತನದ 5 ಸಾವಿರ ಕೋಟಿ ಮೌಲ್ಯದ 14 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡ ಆಂಧ್ರ ಸರ್ಕಾರ

Share
2 Min Read
SHARE

newsics.com | ನ್ಯೂಸಿಕ್ಸ್

ಕಡಪ(ಆಂಧ್ರ ಪ್ರದೇಶ): ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಬ್ರಾಹ್ಮಣಿ ಸ್ಟೀಲ್ಸ್‌ಗೆ ಹಂಚಿಕೆ ಮಾಡಲಾಗಿದ್ದ ಸುಮಾರು 14 ಸಾವಿರ ಎಕರೆ ಭೂಮಿಯನ್ನು 18 ವರ್ಷಗಳ ಕಾನೂನು ಹೋರಾಟದ ನಂತರ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಎಸ್‌ಆರ್ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದ ಅಂಬಾವರಂನಲ್ಲಿ ಮಂಜೂರು ಮಾಡಲಾಗಿದ್ದ 14 ಸಾವಿರ ಎಕರೆ ಭೂಮಿಯನ್ನು ಉದ್ದೇಶಿತ ಕಾರ್ಯಕ್ಕೆ ಬಳಸದ ಕಾರಣ ಕಂದಾಯ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಭೂಮಿಯ ಪ್ರಸ್ತುತ ಮೌಲ್ಯ ಸುಮಾರು 5 ಸಾವಿರ ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಗುರುವಾರ ರಾತ್ರಿ ಜಿಲ್ಲಾಧಿಕಾರಿ ಚೆರುಕುರಿ ಶ್ರೀಧರ್ ಅವರು ಹೊರಡಿಸಿದ ಆದೇಶದ ನಂತರ ಸ್ವಾಧೀನ ಪ್ರಕ್ರಿಯೆಯು ಮುಕ್ತಾಯಗೊಂಡಿತು. ಇದು ಭವಿಷ್ಯದ ಕೈಗಾರಿಕಾ ಅಗತ್ಯಗಳಿಗಾಗಿ ಈ ಭೂಮಿಯನ್ನು ಬಳಸಲು ದಾರಿ ಮಾಡಿಕೊಟ್ಟಿತು.

2011ರಲ್ಲಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂದಿನ ಸರ್ಕಾರ ಆದೇಶ ಹೊರಡಿಸಿದ್ದರೂ, ಸ್ವಾಧೀನ ಪ್ರಕ್ರಿಯೆ ನಡೆಯಲಿಲ್ಲ. ನಂತರ ಜಿಲ್ಲಾಧಿಕಾರಿ ಕಾನೂನು ವಿವಾದಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಮ್ಮಲಮಡುಗು ಪ್ರದೇಶದಲ್ಲಿ ಮೆಗಾ ಸ್ಟೀಲ್ ಘಟಕ ಸ್ಥಾಪಿಸಲು ಈ ಭೂಮಿಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಬ್ರಾಹ್ಮಣಿ ಸ್ಟೀಲ್ಸ್‌ಗೆ 2007 ರಲ್ಲಿ ಆಂಧ್ರ ಸರ್ಕಾರ ಮಂಜೂರು ಮಾಡಿತ್ತು.

ಸ್ಟೀಲ್ ಪ್ಲಾಂಟ್​ಗೆ 10,700 ಎಕರೆ ಮೀಸಲಿಟ್ಟಿದ್ದರೆ, 3,115 ಎಕರೆಗಳನ್ನು ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಅಂದಿನ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ಅವರ ಹಠಾತ್ ನಿಧನ ಮತ್ತು ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳು, ಕಾನೂನು ವಿವಾದಗಳು ಮತ್ತು ಸರ್ಕಾರಿ ನಿರ್ಧಾರಗಳಲ್ಲಿನ ಬದಲಾವಣೆಗಳಿಂದಾಗಿ ಯೋಜನೆಯು ಸ್ಥಗಿತಗೊಂಡಿತು.

2008ರಲ್ಲಿ ಆಗಿನ ಸರ್ಕಾರವು ಬ್ರಾಹ್ಮಣಿ ಇಂಡಸ್ಟ್ರೀಸ್ ವಾಣಿಜ್ಯ ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಮತ್ತು ವಾಯುಯಾನ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗಾಗಿ ಎಕರೆಗೆ 25 ಸಾವಿರ ರೂ.ಗಳಂತೆ 3,115.64 ಎಕರೆಗಳನ್ನು ಮಂಜೂರು ಮಾಡಿತ್ತು. ಭೂಮಿಯನ್ನು ಮಂಜೂರು ಮಾಡಲಾಗಿದ್ದರೂ, ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿಲ್ಲ. ಪ್ರಸ್ತುತ, ಸಂಪೂರ್ಣ ಭೂಮಿ ಬಳಕೆಯಾಗದೇ ಉಳಿದಿದೆ.

ಸಂಸ್ಥೆ ಉದ್ದೇಶಿತ ಕಾರ್ಯಕ್ಕೆ ಭೂಮಿ ಬಳಸದ ಕಾರಣ, ನಿಯಮಗಳ ಪ್ರಕಾರ ಮಂಜೂರಾತಿಯನ್ನು ರದ್ದುಗೊಳಿಸಿ ಸರ್ಕಾರದಿಂದ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳು ಜಮ್ಮಲಮಡುಗು ತಹಶೀಲ್ದಾರ್ ಅವರಿಗೆ 48 ಗಂಟೆಗಳೊಳಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸೂಚಿಸಿದ್ದರು. ವೆಬ್‌ಲ್ಯಾಂಡ್, ಅಡಂಗಲ್, 1-ಬಿ ದಾಖಲೆಗಳಲ್ಲಿ ಭೂಮಿಯನ್ನು ಮತ್ತೆ ಸರ್ಕಾರಿ ಭೂಮಿಯಾಗಿ ನೋಂದಾಯಿಸಲಾಗಿದೆ. ಸದ್ಯ ಯಾವುದೇ ನೋಂದಣಿ ಅಥವಾ ಗುತ್ತಿಗೆಗಳನ್ನು ನಡೆಸದಂತೆ ಜಿಲ್ಲಾ ನೋಂದಣಾಧಿಕಾರಿಗೆ ಆದೇಶಿಸಲಾಗಿದೆ.

Ceremonial Code ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ಗಾಯನಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಕಡ್ಡಾಯ ಪಾಲನೆಗೆ ಸೂಚನೆ

LPG Gas ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರೇ ಗಮನಿಸಿ: ಜಾರಿಗೆ ಬಂತು ಹೊಸ ನಿಯಮ; ಈ ಕೆಲಸ ಮಾಡದಿದ್ರೆ ಸಿಗಲ್ಲ ಎಲ್‌ಪಿಜಿ

Accident ಕಾರು‌ ಟ್ಯಾಂಕರ್ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಸಾವು

TAGGED:Andhra government acquired 14 thousand acres of land worth 5 thousand crores owned by Janardhana Reddy
Share This Article
Facebook Twitter Copy Link Print
Previous Article Ceremonial Code ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ಗಾಯನಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಕಡ್ಡಾಯ ಪಾಲನೆಗೆ ಸೂಚನೆ
Next Article Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!

Popular Posts

Babies ಮಕ್ಕಳಿಗೆ ಕನ್ನಡಿ ತೋರಿಸಿದ್ರೆ ಮಾತು ಬರಲ್ವಾ? ಹಿರಿಯರ ಆ ಮಾತಿನ ಹಿಂದಿರುವ ಅಸಲಿ ರಹಸ್ಯ ಮತ್ತು ವೈಜ್ಞಾನಿಕ ಸತ್ಯ ಇಲ್ಲಿದೆ

2 Min Read

Crime Case ಗುಂಡು ಹಾರಿಸಿಕೊಂಡು 24 ವರ್ಷದ ಯುವಕ ಸಾ*ವು

1 Min Read

Bollywood ಜುಲೈ 24 ಕ್ಕೆ ರಿಲೀಸ್‌ ಆಗಲಿದೆ ರಣಬೀರ್-ಯಶ್ ನಟನೆಯ ‘ರಾಮಾಯಣ’ ಟ್ರೇಲರ್

1 Min Read

Triple Crime ಮಾವ, ತಾಯಿ, ಅಜ್ಜಿಯನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹ*ತ್ಯೆಗೆ ಶರಣಾದ ಮಗ

2 Min Read

You Might Also Like

ಪ್ರಮುಖವಿದೇಶ

Plane Crash ಭೀಕರ ವಿಮಾನ ದುರಂತ: ಸ್ವಾತಂತ್ರ್ಯ ದಿನದಂದೇ 10 ಮಂದಿ ದುರ್ಮರಣ

1 Min Read
ಪ್ರಮುಖಕರ್ನಾಟಕ

Menstrual Leave ಆರೋಗ್ಯ ಇಲಾಖೆ ಮಹಿಳೆಯರಿಗೆ ಗುಡ್ ನ್ಯೂಸ್: ಸಿಗಲಿದೆ ವರ್ಷಕ್ಕೆ 12 ದಿನ ವೇತನಸಹಿತ ಋತುಚಕ್ರದ ರಜೆ

1 Min Read
ಪ್ರಮುಖಕರ್ನಾಟಕ

Air Show ಏರೋ ಇಂಡಿಯಾ 2027 ಡೇಟ್ಸ್ ಫಿಕ್ಸ್: ಯಲಹಂಕದಲ್ಲಿ ಮತ್ತೊಮ್ಮೆ ಭರ್ಜರಿ ಏರ್ ಶೋ ಸದ್ದು

1 Min Read
ಪ್ರಮುಖಜ್ಯೋತಿಷ್ಯ

Astrology ಈ 4 ರಾಶಿಯವರು ಸಾಲದ ವ್ಯವಹಾರ ಮಾಡಿದ್ರೆ ಕೈ ಸುಟ್ಟುಕೊಳ್ಳೋದು ಗ್ಯಾರಂಟಿ! ಜ್ಯೋತಿಷ್ಯದ ಮುನ್ನೆಚ್ಚರಿಕೆ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?