Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Everything is for dad ಅಪ್ಪನಿಗಾಗಿ 55 ಅಡಿ ಎತ್ತರದ ತಾಳೆ ಮರಕ್ಕೇ ಮೆಟ್ಟಿಲು ನಿರ್ಮಿಸಿದ ಮಗ! ಯಾಕೆ ಹೀಗೆ?
ದೇಶಕೃಷಿಪ್ರಮುಖವೈರಲ್

Everything is for dad ಅಪ್ಪನಿಗಾಗಿ 55 ಅಡಿ ಎತ್ತರದ ತಾಳೆ ಮರಕ್ಕೇ ಮೆಟ್ಟಿಲು ನಿರ್ಮಿಸಿದ ಮಗ! ಯಾಕೆ ಹೀಗೆ?

Share
3 Min Read
SHARE

newsics.com | ನ್ಯೂಸಿಕ್ಸ್

ಅಪ್ಪ ಯಾವಾಗ್ಲೂ ಆಗಸದಲ್ಲೇ ಇರಬೇಕು ಅವನಿಗೆ ಯಾವುದೇ ತೊಂದರೆ, ಆಗಬಾರದು ಎಂಬ ಭಾವನೆಯಿಂದ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಸಾಲೈಪುತ್ತೂರು ಗ್ರಾಮದ 35 ವರ್ಷದ ದಿನಕರಾಜ್‌ ಎಂಬ ವ್ಯಕ್ತಿ ತನ್ನ ತಂದೆಗೆ ಇಳಿವಯಸ್ಸಿನ ತನ್ನ ತಂದೆಗೆ ಇಳುವರಿ ನೀಡುವಂತಹ ಮರಹತ್ತಲು ಕಷ್ಟ ಆಗಬಾರದು ಅಂತಾ ಅಪ್ಪನನ್ನೇ ಮೆಟ್ಟಿಲುಗಳ ಮೂಲಕ ಮರದ ತುದಿಗೆ ಒಯ್ಯುವಂತಹ ಆವಿಷ್ಕಾರ ಮಾಡಿದ್ದಾರೆ.‌

ಈ ದಿನಕರಾಜ್‌ ಕುಟುಂಬ ತಲೆಮಾರುಗಳಿಂದ ಎತ್ತರದ ಮರಹತ್ತಿ ತಾಳೆ ರಸ (ಪದನೀರ್) ಇಳಿಸುವ ಕಾಯಕ ನಂಬಿಕೊಂಡಿದೆ. ಈ ಹಿಂದೆ ಈ ಕೆಲಸವನ್ನು ಅವರ ತಂದೆ ಯೇಸುದಾಸನ್ ದಶಕಗಳ ಕಾಲ ಮಾಡುತ್ತಿದ್ದರು, ಈಗ ಅವರಿಗೆ ವಯಸ್ಸು 70. ಇದರಿಂದ ದೇಹದ ಶಕ್ತಿ ಕುಂದಿಹೋಗಿದ್ದು, ಮೊದಲಿನಂತೆ ಅಷ್ಟು ಎತ್ತರದ ಮರ ಹತ್ತಿ ತಾಳೆ ರಸ ತೆಗೆಯುವುದು ಸಾಧ್ಯವಿಲ್ಲ. ಇದರಿಂದಾಗಿ ಕಳೆದ 10 ವರ್ಷಗಳಿಂದ ಅವರಿಗೆ 55 ಅಡಿ ಎತ್ತರದ ಈ ಮರ ಹತ್ತಲು ಸಾಧ್ಯವಾಗಿರಲಿಲ್ಲ. ಪರಿಣಾಮ ದಿನಕ್ಕೆ ಬರೋಬ್ಬರಿ 20 ಲೀಟರ್‌ಗೂ ಹೆಚ್ಚು ರಸ ನೀಡುವ, ಸೀಸನ್‌ನಲ್ಲಿ 1 ಲಕ್ಷಕ್ಕೂ ಅಧಿಕ ಆದಾಯ ತರುತ್ತಿದ್ದ ಈ ಮರ ತಂದೆಯ ವಯೋಸಹಜ ಅಸಹಾಯಕತೆಯಿಂದಾಗಿ ಇಳುವರಿ ಇಲ್ಲದೆ ನಿಂತಿತ್ತು.ಇದರಿಂದ ಇಳುವರಿ ನೀಡುವ ಮರವನ್ನು ಹತ್ತಲು ಸಾಧ್ಯವಾಗದೆ ಚಿಂತಿತರಾಗಿದ್ದ ತಂದೆಯನ್ನು ಗಮನಿಸಿದ ದಿನಕರನ್‌ ಅವರಿಗೆ ತಂದೆಗೆ ಹೇಗಾದ್ರೂ ಮಾಡಿ ಸಹಾಯ ಮಾಡ್ಬೇಕು ಎಂಬ ಆಲೋಚನೆ ಹುಟ್ಟಿಕೊಂಡಿದ್ದು, ಮರಕ್ಕೆ ಮೆಟ್ಟಿಲು ಹಾಕಿದ್ರೆ ಹೇಗೆ ಎಂಬ ಉಪಾಯ ಹೊಳೆದಿದೆ. ಹೀಗೆ ಆಲೋಚನೆ ಮಾಡಿ ಸುಮ್ಮನೇ ಕೂರದ ಈತ ಸುರಕ್ಷಿತವಾಗಿ ಮರಹತ್ತಲು 60,000 ರೂ. ವೆಚ್ಚದಲ್ಲಿ ಸುಮಾರು 250 ಕೆಜಿ ಗಲ್ವನೈಸ್ಡ್ ಸ್ಟೀಲ್ ಪೈಪ್ ಬಳಸಿ, ಮರಕ್ಕೆ ಯಾವುದೇ ಮೊಳೆ ಹೊಡೆಯದೆ ಪ್ರಕೃತಿಗೂ ಹಾನಿಯಾಗದಂತೆ ಸುರುಳಿಯಾಕಾರದ (Spiral) 48 ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ.

ಈ ಮರವನ್ನು ಹತ್ತಲು ನಿಮಗೆ ಯಾವುದೇ ನಿಪುಣತೆ, ಶಕ್ತಿ ಅಥವಾ ಪೂರ್ವ ತರಬೇತಿಯ ಅಗತ್ಯವೇ ಇಲ್ಲ. ಈ ಸುರುಳಿಯಾಕಾರದ ಮೆಟ್ಟಿಲುಗಳ ಮೇಲೆ ಆರಾಮಾಗಿ ಚಿಕ್ಕವರಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಎಲ್ಲರೂ ಯಾವುದೇ ಕಷ್ಟವಿಲ್ಲದೆ ನಡೆದುಕೊಂಡೇ ಹೋಗಬಹುದು. ಅಲ್ಲದೆ, ಆಕಸ್ಮಿಕವಾಗಿ ಜಾರಿ ಬೀಳುವ ಅಥವಾ ಅಪಘಾತಕ್ಕೊಳಗಾಗುವ ಯಾವುದೇ ಆತಂಕವಿಲ್ಲದೆ ಸುರಕ್ಷಿತವಾಗಿ ತಾಳೆ ರಸವನ್ನು ಕೊಯ್ಲು ಮಾಡಬಹುದು. ಅಷ್ಟೇ ಅಲ್ಲದೆ, ಪ್ರಸ್ತುತ ದಿನಗಳಲ್ಲಿ ಜೀವದ ಹಂಗು ತೊರೆದು ಮರ ಹತ್ತುವ ಸಾಂಪ್ರದಾಯಿಕ ಕೃಷಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ಮೆಟ್ಟಿಲುಗಳು ಹೊರಗಿನ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತಪ್ಪಿಸುವಂತಿದೆ.

ದಿನಕರಾಜ್ ಅವರ ಪ್ರಕಾರ, ಈ ಮೆಟ್ಟಿಲುಗಳನ್ನು ನಿರ್ಮಿಸುವುದು ಆತನಿಗೆ ಖರ್ಚಲ್ಲ. ಬದಲಾಗಿ ಇದೊಂದು ದೀರ್ಘಕಾಲದ ಆಸ್ತಿಯಾಗಿದ್ದು, ನಿಯಮಿತವಾಗಿ ಯಾವುದೇ ಅಡೆತಡೆಯಿಲ್ಲದೆ ತಾಜಾ ತಾಳೆ ರಸವನ್ನು ಇಳಿಸಿ ಮಾರಾಟ ಮಾಡುವುದರಿಂದ ಮತ್ತು ಕರುಪಟ್ಟಿ (ತಾಳೆ ಬೆಲ್ಲ) ತಯಾರಿಸುವ ಮೂಲಕ ಮೊದಲ ವರ್ಷದಲ್ಲೇ ತಾವು ಹೂಡಿಕೆ ಮಾಡಿದ 60ಸಾವಿರ ರೂ. ಗಳಿಸುವ ನಂಬಿಕೆಯಿದೆ. ಇದರ ಜೊತೆಗೆ ಒಂದು ಆರೋಗ್ಯಕರ ತಾಳೆ ಮರವು ಹಲವು ದಶಕಗಳ ಕಾಲ ಇಳುವರಿ ನೀಡುವುದರಿಂದ, ಮುಂದಿನ ಕನಿಷ್ಠ 15 ವರ್ಷಗಳವರೆಗೆ ಯಾವುದೇ ಹೆಚ್ಚಿನ ನಿರ್ವಹಣಾ ವೆಚ್ಚವಿಲ್ಲದೆ ಈ ಮೆಟ್ಟಿಲುಗಳ ಮೂಲಕ ಆರ್ಥಿಕ ಲಾಭ ಪಡೆಯಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಿನಕರಾಜ್ ಅವರು ಮುಂದಿನ ದಿನಗಳಲ್ಲಿ ತಮ್ಮ ತೋಟದಲ್ಲಿರುವ ಇನ್ನುಳಿದ 25 ತಾಳೆ ಮರಗಳಿಗೂ ಇದೇ ರೀತಿಯ ಮೆಟ್ಟಿಲುಗಳನ್ನು ಅಳವಡಿಸಲು ಯೋಜಿಸುತ್ತಿದ್ದಾರೆ. ಸಾಂಪ್ರದಾಯಿಕ ವೃತ್ತಿಗೆ ಆಧುನಿಕ ಆಲೋಚನೆಯನ್ನು ಜೋಡಿಸಿ, ಕಷ್ಟವನ್ನು ಸುಲಭವಾಗಿಸಿಕೊಂಡ ದಿನಕರಾಜ್ ಅವರ ಈ ವಿಶಿಷ್ಟ ಆವಿಷ್ಕಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ಕೃಷಿ ವಿಜ್ಞಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

https://x.com/i/status/2074141128283074617

 

Ayodhya scam effect ರಾಜ್ಯದ ಎಲ್ಲ ಮುಜರಾಯಿ ದೇಗುಲಗಳ ಹುಂಡಿಗೆ ಸಿಸಿಟಿವಿ ಕಣ್ಗಾವಲು: ಸಿಎಂ ಡಿಕೆ

TAGGED:The son built a palm tree staircase for his father! Why is this?
Share This Article
Facebook Twitter Copy Link Print
Previous Article Ayodhya scam effect ರಾಜ್ಯದ ಎಲ್ಲ ಮುಜರಾಯಿ ದೇಗುಲಗಳ ಹುಂಡಿಗೆ ಸಿಸಿಟಿವಿ ಕಣ್ಗಾವಲು: ಸಿಎಂ ಡಿಕೆ
Next Article Cough Syrup ಇನ್ಮುಂದೆ ಡಾಕ್ಟರ್ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

Popular Posts

Kannada Novelist ಸಾಹಿತ್ಯ ಲೋಕದಲ್ಲಿ ಶೋಕದ ಛಾಯೆ: ಹಿರಿಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ಇನ್ನಿಲ್ಲ

1 Min Read

Bollywood ಚೆಕ್ ಬೌನ್ಸ್ ಕೇಸ್: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ

1 Min Read

Post Office Scheme ಶೇ. 7.4 ರಷ್ಟು ಬಡ್ಡಿಯ ಬಂಪರ್ ಆಫರ್: ಅಂಚೆ ಕಚೇರಿಯ ಈ ಖಾತೆಯಲ್ಲಿದೆ ತಿಂಗಳಿಗೆ ₹9,250 ಗಳಿಸುವ ಸುವರ್ಣಾವಕಾಶ

2 Min Read

Crime Case ವರದಕ್ಷಿಣೆ ಕಿರುಕುಳ, ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ವಿವಾಹಿತೆ ಆತ್ಮಹ*ತ್ಯೆ

1 Min Read

You Might Also Like

ಪ್ರಮುಖದೇಶ

Cough Syrup ಇನ್ಮುಂದೆ ಡಾಕ್ಟರ್ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

2 Min Read
ಕರ್ನಾಟಕಪ್ರಮುಖ

Ayodhya scam effect ರಾಜ್ಯದ ಎಲ್ಲ ಮುಜರಾಯಿ ದೇಗುಲಗಳ ಹುಂಡಿಗೆ ಸಿಸಿಟಿವಿ ಕಣ್ಗಾವಲು: ಸಿಎಂ ಡಿಕೆ

1 Min Read
ದೇಶಪ್ರಮುಖ

Covid tension ಮತ್ತೆ ಬಂತಾ ಕೊರೋನಾ? ಆಂಧ್ರದಲ್ಲಿ ಇಬ್ಬರ ಸಾವು, ನಾಲ್ವರಿಗೆ ಸೋಂಕು, ಜನರಲ್ಲಿ ಆತಂಕ

2 Min Read
ಕರ್ನಾಟಕಪ್ರಮುಖ

School van fell ಕಂದಕಕ್ಕೆ ಉರುಳಿದ ಶಾಲಾ ಬಸ್, 7 ವಿದ್ಯಾರ್ಥಿಗಳಿಗೆ ಗಾಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?