newsics.com | ನ್ಯೂಸಿಕ್ಸ್
ಮೈಸೂರು: ಕನ್ನಡದ ಪ್ರಸಿದ್ಧ ಕಾದಂಬರಿಕಾರ್ತಿ ಹಾಗೂ ಲೇಖಕಿ ಸಿ.ಎನ್. ಮುಕ್ತಾ (77) ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ನಾಡಿನ ಸಾಹಿತ್ಯ ವಲಯ ಕಂಬನಿ ಮಿಡಿದಿದೆ.
1951 ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ಮುಕ್ತಾ ಅವರಿಗೆ ಮನೆಯಲ್ಲೇ ಸಾಹಿತ್ಯದ ಒಲವಿತ್ತು. ಇವರ ತಂದೆ ಹೆಡ್‌ಮಾಸ್ಟರ್ ಆಗಿದ್ದರು ಹಾಗೂ ಸಹೋದರ ರಂಗಭೂಮಿ ನಟರಾಗಿದ್ದರು. ಮೈಸೂರಿನಲ್ಲಿ ಪದವಿ ಮತ್ತು ಬಿ.ಎಡ್ ಶಿಕ್ಷಣ ಮುಗಿಸಿದ ಇವರು, ಪ್ರೌಢಶಾಲಾ ಶಿಕ್ಷಕಿಯಾಗಿ ಹಾಗೂ ಮುಖ್ಯೋಪಾಧ್ಯಾಯಿನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಬಾಲ್ಯದಲ್ಲಿ ಖ್ಯಾತ ಸಾಹಿತಿ ತ.ರಾ.ಸು ಅವರ ‘ಚಂದವಳ್ಳಿಯ ತೋಟ’ ಕಾದಂಬರಿ ಓದಿ ಪ್ರೇರಿತರಾಗಿದ್ದ ಮುಕ್ತಾ ಅವರು, ತಮ್ಮ ಅಕ್ಕನ ಪ್ರೋತ್ಸಾಹದಿಂದ ಬರೆಯಲು ಆರಂಭಿಸಿದರು. ಇವರು ಬರೆದ ‘ಆಶ್ರಯ’ ಕಾದಂಬರಿ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಇವರ ನೂರಾರು ಕಥೆಗಳು ನಾಡಿನ ಜನಪ್ರಿಯ ವಾರಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಮನಗೆದ್ದಿದ್ದವು.
Bollywood ಚೆಕ್ ಬೌನ್ಸ್ ಕೇಸ್: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ