newsics.com | ನ್ಯೂಸಿಕ್ಸ್
ನವದೆಹಲಿ: ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಿದ್ದು, ಈ ಹಿಂದೆ ಇದ್ದ 6 ತಿಂಗಳ ಶಿಕ್ಷೆಯನ್ನು ಕೋರ್ಟ್ ಈಗ 3 ತಿಂಗಳಿಗೆ ಕಡಿತ ಮಾಡಿದೆ.
ಪ್ರಕರಣದ ಹಿನ್ನೆಲೆ
ರಾಜ್‌ಪಾಲ್ ಯಾದವ್ ಮತ್ತು ಅವರ ಪತ್ನಿ ರಾಧಾ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ‘ಮುರಳಿ ಪ್ರಾಜೆಕ್ಟ್ಸ್’ ಕಂಪನಿಯಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಈ ಸಾಲದ ಮರುಪಾವತಿಗೆ ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಹಣ ಮರುಪಾವತಿಸಲು ಕೋರ್ಟ್ ಹಲವು ಬಾರಿ ಸಮಯ ನೀಡಿದ್ದರೂ, ನಟ ಹಣ ನೀಡದೆ ಭರವಸೆ ಉಲ್ಲಂಘಿಸಿದ್ದರು. ಇದರಿಂದಾಗಿ ನ್ಯಾಯಾಲಯ ಈ ಕಠಿಣ ಆದೇಶ ನೀಡಿದೆ.
ಕೋರ್ಟ್ ವಿಧಿಸಿದ ದಂಡದ ವಿವರ
- ಜೈಲು ಶಿಕ್ಷೆ: ಒಟ್ಟು 7 ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಲಾ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇವೆಲ್ಲವೂ ಏಕಕಾಲದಲ್ಲಿ ಜಾರಿಯಾಗಲಿವೆ.
- ಕೋಟಿ ಕೋಟಿ ದಂಡ: ಪ್ರತಿ ಪ್ರಕರಣದಲ್ಲೂ ದೂರುದಾರ ಕಂಪನಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸಬೇಕು. ಇದರೊಂದಿಗೆ ಹೆಚ್ಚುವರಿಯಾಗಿ ದೂರುದಾರರಿಗೆ 1.04 ಕೋಟಿ ರೂ. ಹಾಗೂ ಸರ್ಕಾರಕ್ಕೆ 25,000 ರೂ. ದಂಡ ಕಟ್ಟಲು ಆದೇಶಿಸಲಾಗಿದೆ.
- ಪತ್ನಿಗೂ ದಂಡ: ನಟನ ಪತ್ನಿ ರಾಧಾ ಯಾದವ್ ಅವರಿಗೂ ದೂರುದಾರರಿಗೆ ಪ್ರತಿ ಪ್ರಕರಣದಲ್ಲಿ 5.51 ಕೋಟಿ ರೂ. ಪಾವತಿಸಲು ಸೂಚಿಸಲಾಗಿದೆ.
ನಟ ಈಗಾಗಲೇ ಕೋರ್ಟ್‌ಗೆ ಪಾವತಿಸಿರುವ 2.25 ಕೋಟಿ ರೂಪಾಯಿಗಳನ್ನು ಈ ಒಟ್ಟು ಮೊತ್ತದಲ್ಲಿ ಕಡಿತಗೊಳಿಸಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Crime Case ವರದಕ್ಷಿಣೆ ಕಿರುಕುಳ, ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ವಿವಾಹಿತೆ ಆತ್ಮಹ*ತ್ಯೆ