newsics.com| ನ್ಯೂಸಿಕ್ಸ್
ಉಡುಪಿ: ಜಿಲ್ಲೆಯ ಕೊಡಂಗೆ ದೇವಸ್ಥಾನದ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕ್ರೈಸ್ಟ್ ಶಾಲೆಯ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ.
ಈ ಘಟನೆಯಲ್ಲಿ ಸುಮಾರು 7 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರಿಂದ ತಕ್ಷಣದ ರಕ್ಷಣೆ:
ಬೆಳಗ್ಗಿನ ಅವಧಿಯಲ್ಲಿ ಮಕ್ಕಳು ಎಂದಿನಂತೆ ಶಾಲೆಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ಬಸ್ ಕಂದಕಕ್ಕೆ ಉರುಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ಬಸ್ಸಿನೊಳಗೆ ಸಿಲುಕಿದ್ದ ಮುಗ್ಧ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಸ್ಥಳೀಯರ ಈ ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ.
ಆಸ್ಪತ್ರೆಗೆ ದಾಖಲು:
ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ. ಉಳಿದ ಮಕ್ಕಳು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು, ಪೋಷಕರು ನಿಟ್ಟುಸಿರುಬಿಡುವಂತಾಗಿದೆ.
Terrible encounter ಭೀಕರ ಎನ್‌ಕೌಂಟರ್‌ಗೆ ನಾಲ್ವರು ಶೂಟರ್ಸ್ ಬಲಿ, 3 ಪೊಲೀಸರಿಗೆ ಗಾಯ, 60 ಬಾರಿ ಗುಂಡು!
Court Order ಗಾಂಜಾ ಸೇವಿಸಿದ ಯುವಕನಿಂದಲೇ ಶಾಲೆಯಲ್ಲಿ ಜಾಗೃತಿ ಪಾಠ! ಗಮನ ಸೆಳೆದ ಕೋರ್ಟ್ ಆದೇಶ
Snakes escaped ಹಾವು ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ಮಳೆ ನೀರು, 900 ಹಾವುಗಳು ಎಸ್ಕೇಪ್! ವೈರಲ್ ವಿಡಿಯೋ ನೋಡಿ