Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Snakes escaped ಹಾವು ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ಮಳೆ ನೀರು, 900 ಹಾವುಗಳು ಎಸ್ಕೇಪ್! ವೈರಲ್ ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

Snakes escaped ಹಾವು ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ಮಳೆ ನೀರು, 900 ಹಾವುಗಳು ಎಸ್ಕೇಪ್! ವೈರಲ್ ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

ಗುವಾಂಕ್ಸಿ: ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದಲ್ಲಿರುವ ಹಾವು ಸಾಕಾಣಿಕೆ ಕೇಂದ್ರವೊಂದು ಪ್ರವಾಹದಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ನೂರಾರು ಹಾವುಗಳು ತಪ್ಪಿಸಿಕೊಂಡು ನೀರಿನಲ್ಲಿ ಈಜಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

‘ಮೇಸಕ್’ ಚಂಡಮಾರುತದಿಂದ ಉಂಟಾದ ಪ್ರವಾಹದಿಂದ ಈ ಅವಘಡ ಸಂಭವಿಸಿದ್ದು, ರಕ್ಷಣಾ ತಂಡಗಳು ಕಾರ್ಯಾಚರಣೆಗಿಳಿದಿವೆ.

ಈ ದೃಶ್ಯಗಳು ನೆಟ್ಟಿಗರಲ್ಲಿ ಭಯ ಮತ್ತು ಚರ್ಚೆಯನ್ನು ಹುಟ್ಟುಹಾಕಿವೆ. ಚೀನಾದ ದಕ್ಷಿಣ ಭಾಗದಲ್ಲಿ ನೂರಾರು ಹಾವುಗಳು ಪ್ರವಾಹದ ನೀರಿನಲ್ಲಿ ಈಜುತ್ತಿರುವ ಒಂದು ಭಯಾನಕ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ.

ಚೀನಾದ ಗುವಾಂಗ್‌ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ಹೆಂಗ್‌ಝೌ ನಗರದ ಡೆಂಗ್‌ವೇ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಹಾವು ಸಾಕಾಣಿಕೆ ಕೇಂದ್ರವೊಂದು ಭಾರಿ ಪ್ರವಾಹಕ್ಕೆ ಸಿಲುಕಿ ಜಖಂಗೊಂಡಿದೆ. ಇದರಿಂದಾಗಿ ಅಲ್ಲಿದ್ದ ಹಾವುಗಳು ತಪ್ಪಿಸಿಕೊಂಡಿವೆ.

‘ಮೇಸಕ್’ ಚಂಡಮಾರುತದ ಪರಿಣಾಮವಾಗಿ ಸುರಿದ ಭಾರಿ ಮಳೆಯಿಂದಾಗಿ ಈ ಪ್ರದೇಶದಲ್ಲಿ ಜಲಪ್ರಳಯ ಉಂಟಾಗಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಪ್ರವಾಹದ ನೀರು ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದ ನಂತರ ಸುಮಾರು 900 ಹಾವುಗಳು ತಪ್ಪಿಸಿಕೊಂಡಿವೆ. ಈ ಹಾವುಗಳು ಹತ್ತಿರದ ಜನವಸತಿ ಪ್ರದೇಶಗಳಿಗೆ ಹೋಗುವುದನ್ನು ತಡೆಯಲು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಶುರುಮಾಡಲಾಗಿದೆ.

ಹಾವುಗಳನ್ನು ಹಿಡಿಯಲು ರಕ್ಷಣಾ ತಂಡ

ತಪ್ಪಿಸಿಕೊಂಡ ಹಾವುಗಳನ್ನು ಹಿಡಿಯಲು ಅಧಿಕಾರಿಗಳು 10 ಸದಸ್ಯರ ರಕ್ಷಣಾ ತಂಡವನ್ನು ನಿಯೋಜಿಸಿದ್ದಾರೆ. ಈ ತಂಡವು ಮೀನು ಹಿಡಿಯುವ ಬಲೆಗಳು ಮತ್ತು ಸ್ಟನ್ ಗನ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳೀಯ ಅಧಿಕಾರಿ ವು ಝಿ ಅವರು ಚೀನಾದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಫಾರ್ಮ್‌ಗೆ ನೀರು ನುಗ್ಗಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು ಎಂದು ಅವರು ಹೇಳಿದ್ದಾರೆ.

ತಪ್ಪಿಸಿಕೊಂಡ ಹಾವುಗಳಲ್ಲಿ ವಿಷಕಾರಿ ನಾಗರಹಾವುಗಳಿವೆ ಎಂದು ಕೆಲವು ವರದಿಗಳು ಹೇಳಿದ್ದವು. ಆದರೆ, ರಕ್ಷಣಾ ತಂಡವು ಹಿಡಿಯುತ್ತಿರುವ ಹಾವುಗಳು ವಿಷಕಾರಿಯಲ್ಲ ಎಂದು ವು ಝಿ ಸ್ಪಷ್ಟಪಡಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹತ್ತಿರದ ಹಳ್ಳಿಗಳ ನಿವಾಸಿಗಳು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಕೆಲವು ಗ್ರಾಮಸ್ಥರಿಗೆ ಹಾವು ಕಚ್ಚಿರಬಹುದು ಎಂದು ಸಹ ವರದಿಯಾಗಿದೆ. ಆದರೆ, ಅಧಿಕಾರಿಗಳು ಇನ್ನೂ ಒಟ್ಟಾರೆ ಹಾನಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಗುವಾಂಗ್‌ಕ್ಸಿ ಪ್ರಾಂತ್ಯದಾದ್ಯಂತ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಧಿಕಾರಿಗಳು ಅತ್ಯುನ್ನತ ಮಟ್ಟದ ‘ರೆಡ್ ಅಲರ್ಟ್’ ಘೋಷಿಸಿದ್ದಾರೆ. ಡಜನ್‌ಗಟ್ಟಲೆ ಮಾನಿಟರಿಂಗ್ ಸ್ಟೇಷನ್‌ಗಳಲ್ಲಿ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟವನ್ನು ಮೀರಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರವಾಹಕ್ಕೆ ಚೀನಾದಲ್ಲಿ ಈಗಾಗಲೇ ಕನಿಷ್ಠ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಗುವಾಂಗ್‌ಕ್ಸಿಯಲ್ಲೇ 6 ಮಂದಿ ಸಾವನ್ನಪ್ಪಿದ್ದು, 11 ಜನರು ನಾಪತ್ತೆಯಾಗಿದ್ದಾರೆ. 1,30,000ಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪೂರ್ಣ ಪ್ರಮಾಣದ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಾಗತಿಕ ತಾಪಮಾನ ಮತ್ತು ಎಲ್ ನಿನೊ ಪರಿಣಾಮಗಳಿಂದಾಗಿ ಈ ವರ್ಷದ ಪ್ರವಾಹದ ಋತುವು ಇನ್ನಷ್ಟು ತೀವ್ರವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

📌 Hengzhou, #China 🇨🇳 July 6 /2026
After days of heavy rain 🌧️ and flooding across China, around 900 snakes 🐍 escaped from a breeding farm in Hengzhou. Reports say the reptiles included venomous cobras, with villagers attempting to catch them in the floodwaters. pic.twitter.com/cTcgAZ4nZd

— CAUGHTIN4KHQ (@CaughtIn4KHQ) July 9, 2026

Rain Alert ರಾಜ್ಯದ ಇನ್ನೆರಡು ದಿನ ಮಾತ್ರ ಭಾರೀ‌ ಮಳೆ: ಮುಂದೇನು? ಹವಾಮಾನ ತಜ್ಞೆ ಹೇಳಿದ್ದೇನು?

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ‌ ಬದಲಾವಣೆ ನಿರೀಕ್ಷೆ

BSNL ಕ್ರಾಂತಿಕಾರಕ ಮೊಬೈಲ್ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್! ಇದು ಅಂತಿಂಥ ಪೋನ್ ಅಲ್ಲ, ಬೆಲೆಯೂ ಕಡಿಮೆಯಿಲ್ಲ

TAGGED:900 snakes escaped! Watch the viral videoHeavy rains: water entered the snake breeding center
Share This Article
Facebook Twitter Copy Link Print
Previous Article Rain Alert ರಾಜ್ಯದ ಇನ್ನೆರಡು ದಿನ ಮಾತ್ರ ಭಾರೀ‌ ಮಳೆ: ಮುಂದೇನು? ಹವಾಮಾನ ತಜ್ಞೆ ಹೇಳಿದ್ದೇನು?
Next Article River connection ಕೃಷ್ಣ, ಕಾವೇರಿ, ಗೋದಾವರಿ ಜೋಡಣೆಗೆ ಸಮ್ಮತಿ, 1 ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ: ಸಿಎಂ

Popular Posts

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 10-07-2026 ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

River connection ಕೃಷ್ಣ, ಕಾವೇರಿ, ಗೋದಾವರಿ ಜೋಡಣೆಗೆ ಸಮ್ಮತಿ, 1 ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ: ಸಿಎಂ

1 Min Read

Snakes escaped ಹಾವು ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ಮಳೆ ನೀರು, 900 ಹಾವುಗಳು ಎಸ್ಕೇಪ್! ವೈರಲ್ ವಿಡಿಯೋ ನೋಡಿ

2 Min Read

Rain Alert ರಾಜ್ಯದ ಇನ್ನೆರಡು ದಿನ ಮಾತ್ರ ಭಾರೀ‌ ಮಳೆ: ಮುಂದೇನು? ಹವಾಮಾನ ತಜ್ಞೆ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

1 Min Read
ದೇಶಪ್ರಮುಖ

E85 fuel ಶೀಘ್ರದಲ್ಲೇ ಫ್ಲೆಕ್ಸ್-ಫ್ಯುಯೆಲ್ ಕಾರುಗಳಿಗಾಗಿ ಸಿಗಲಿದೆ ಇ85 ಎಥೆನಾಲ್ ಇಂಧನ

3 Min Read
ದೇಶಪ್ರಮುಖವೈರಲ್

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖವಿದೇಶ

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?