newsics.com| ನ್ಯೂಸಿಕ್ಸ್
ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಅದರಷ್ಟೇ ತಮ್ಮ ಕುಟುಂಬಕ್ಕೂ ಸಮಯ ನೀಡಲು ಪ್ರಯತ್ನಿಸುತ್ತಾರೆ.
ಸಿಎಂ ರೇವಂತ್ ರೆಡ್ಡಿ ತಮ್ಮ ಮೊಮ್ಮಗನಿಗಾಗಿ ಪೂರಿ ತಯಾರಿಸಲು ಅಡುಗೆಮನೆ ಸೇರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಎಂ ರೇವಂತ್ ರೆಡ್ಡಿ ಸ್ವತಃ ಅಡುಗೆಮನೆಗೆ ಹೋಗಿ ತಮ್ಮ ಮೊಮ್ಮಗನನ್ನು ಅಡುಗೆಮನೆಯ ಕಟ್ಟೆಯ ಮೇಲೆ ಕೂರಿಸಿಕೊಂಡು ಪೂರಿಗಳನ್ನು ತಯಾರಿಸುವ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಮೊಮ್ಮಗನಿಗಾಗಿ ಸಮಯ ಮೀಸಲಿಟ್ಟ ಸಿಎಂ ರೇವಂತ್ ರೆಡ್ಡಿ ಸ್ವತಃ ಪೂರಿಗಳನ್ನು ಲಟ್ಟಿಸಿ, ಎಣ್ಣೆಯಲ್ಲಿ ಕರಿಯುತ್ತಿದ್ದರು. ಮೊಮ್ಮಗ ಅಲ್ಲೇ ಕುಳಿತುಕೊಂಡು ಅಜ್ಜನ ಜೊತೆ ಹರಟುತ್ತಾ ಎಂಜಾಯ್ ಮಾಡುತ್ತಿದ್ದ. ‘ಬ್ಯುಸಿ ಜೀವನದ ನಡುವೆ ಮೊಮ್ಮಗನೊಂದಿಗೆ ಪೂರಿ ಮಾಡಿ ಕಳೆದ ಕೆಲವು ಕ್ಷಣಗಳು ಇವು…’ ಎಂದು ಸಿಎಂ ರೇವಂತ್ ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
https://www.facebook.com/share/r/17tpUoNe5Q/
https://www.facebook.com/share/r/17tpUoNe5Q/
Medical seat fraud ಮೆಡಿಕಲ್ ಸೀಟ್ ವಂಚನೆ: ಮಾಜಿ ಸಚಿವ ಆರ್.ಎಲ್.ಜಾಲಪ್ಪ ಸೊಸೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ
Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ
Government Bus ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಧೂಮಪಾನ ಮಾಡಿದರೆ, ಗುಟ್ಕಾ ಜಗಿದರೆ, ಉಗುಳಿದರೆ ಭಾರೀ ದಂಡ!