newsics.com
ಹಾಸನ: ಸನ್ನಿ ಲಿಯೋನ್‌ಗೆ ಕರ್ನಾಟಕವೇನೂ ಹೊಸದಲ್ಲ. ಈಗಾಗಲೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಕಾರ್ಯಕ್ಕೂ ಚಿತ್ರತಂಡಕ್ಕೆ ಸಾಥ್ ನೀಡಿದ್ದೂ ಇದೆ.
ಆದರೆ ಈಗ ತಮಿಳು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಕಬ್ಬಳಿ ಗ್ರಾಮದಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ.
ಕಬ್ಬಳಿ ಗ್ರಾಮಕ್ಕೆ ಆಗಮಿಸಿದ ಸನ್ನಿ, ಶಾಲೆಯಲ್ಲಿ ಶೂಟಿಂಗ್ ನಡೆಸಿದ್ದಾರೆ. ಬಳಿಕ ತರಗತಿಗೂ ಭೇಟಿ ನೀಡಿ ಅಲ್ಲಿನ ಮಕ್ಕಳ ಜತೆ ನಟಿ ಕಾಲ ಕಳೆದಿದ್ದಾರೆ. ಇದೇ ವೇಳೆ, ಮಕ್ಕಳ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಪ್ಪು ಬಣ್ಣ ಟೀ ಶರ್ಟ್ ಮತ್ತು ಪ್ಯಾಂಟ್‌ಗೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ.
ಅಂದಹಾಗೆ, ‘ಕೊಟೇಶನ್ ಗ್ಯಾಂಗ್’ ಚಿತ್ರದ ಬಹುತೇಕ ಚಿತ್ರೀಕರಣ ಕರ್ನಾಟಕದಲ್ಲಿ ಪೂರ್ಣಗೊಂಡಿದೆ. ಈ ವೇಳೆ, ಸಾಕಷ್ಟು ಅಭಿಮಾನಿಗಳು ಸನ್ನಿ ಲಿಯೋನ್ ಅವರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸನ್ನಿ ಜತೆ ಜಾಕಿ ಶ್ರಾಫ್, ಪ್ರಿಯಾ ಮಣಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.
ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್, ಕೋಟಿ ಕೋಟಿ ವೀಕ್ಷಣೆ