newsics.com/ನ್ಯೂಸಿಕ್ಸ್
ಪ್ರಶಾಂತ್ ನೀಲ್ ಒಂದು ನಿರ್ಧಾರ ಮಾಡಿದ್ದಾರೆ. ತಮ್ಮ ಕಥೆಗಳನ್ನ ಡಾರ್ಕ್ ಟಿಂಟ್ ಇರೋ ಫಾರ್ಮ್ಯಾಟ್ ಅಲ್ಲಿಯೇ ಹೇಳುತ್ತಿದ್ದಾರೆ. ಆದರೆ, ಈ ಒಂದು ಫಾರ್ಮ್ಯಾಟ್ ಅಲ್ಲಿಯೇ ಇನ್ನೂ ಮೂರು ಚಿತ್ರಗಳನ್ನ ಇದೇ ಡಾರ್ಕ್ ಟಿಂಟ್ ಅಲ್ಲಿಯೇ ಹೇಳುತ್ತಿದ್ದಾರೆ.
ಡ್ರ್ಯಾಗನ್ ಚಿತ್ರದ ಕಥೆಯನ್ನ ಪ್ರಶಾಂತ್ ನೀಲ್ ಐದು ವರ್ಷದ ಹಿಂದೇನೆ ಹೇಳಿದ್ದರು. ಜೂನಿಯರ್ ಎನ್ಟಿಆರ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದು ಡಾರ್ಕ್ ಪಾತ್ರವೇ ಆಗಿದೆ.
ಇಲ್ಲಿವರೆಗೂ ಪ್ರಶಾಂತ್ ನೀಲ್ ಬರೆಯದೇ ಇರೋ ಡಾರ್ಕ್ ಕ್ಯಾರೆಕ್ಟರ್ ಇದಾಗಿದೆ. ಇದನ್ನ ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಇದನ್ನ ಬರೆಯೋಕೆ 3 ವರ್ಷ ಬೇಕಾಗಿದೆ. ಇದು ನಿಕ್ಕೂ ಡಾರ್ಕೆಸ್ಟ್ ರೋಲ್ ಆಗಿದೆ.
ಜೂ.ಎನ್ಟಿಆರ್ ಒಪ್ಪಿರೋದೇ ಗ್ರೇಟ್
ಡ್ರ್ಯಾಗನ್ ಚಿತ್ರದ ಪಾತ್ರ ನಿಜಕ್ಕೂ ತುಂಬಾನೆ ಡಾರ್ಕ್ ಆಗಿದೆ. ಈ ಪಾತ್ರವನ್ನ ಒಪ್ಪೋದು ತುಂಬಾನೆ ಕಷ್ಟವೇ ಬಿಡಿ. ಆದರೂ ಜೂನಿಯರ್ ಎನ್ಟಿಆರ್ ಇದನ್ನ ಸಾಕಷ್ಟು ಯೋಚನೆ ಮಾಡಿಯೇ ಒಪ್ಪಿದ್ದಾರೆ.
ಆದರೆ, ಕೆಜಿಎಫ್ ಚಿತ್ರದ ರಾಕಿ ಭಾಯ್, ಸಲಾರ್ ಚಿತ್ರದ ದೇವ, ಡ್ರ್ಯಾಗನ್ ಚಿತ್ರದ ಲೂಗರ್ ಈ ಮೂರು ಪಾತ್ರಗಳು ಡಾರ್ಕ್ ಪಾತ್ರಗಳೇ ಆಗಿವೆ. ಆದರೆ, ಇವುಗಳಿಗೆ ಎಮೊಷನ್ಸ್ ಇವೆ. ಯಾಕೆ ಈ ಪಾತ್ರಗಳು ವಿಲನ್ ಅನ್ನೋದಕ್ಕೂ ಒಂದೊಂದು ಸರಿಯಾದ ಅರ್ಥ ಇದೆ ಅಂತಲೇ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಪ್ರಶಾಂತ್ ನೀಲ್ಗೆ ಆ ಒಂದು ಪ್ರಶ್ನೆ
ಡ್ರ್ಯಾಗನ್ ಚಿತ್ರದ ಒಂದು ಲೈನ್ ಮಾತ್ರ ಪ್ರಶಾಂತ್ ನೀಲ್ ಹೇಳಿದ್ದರು. ಆದರೆ, ಆರಂಭದ ಮೂರು ವರ್ಷ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಈ ಕಥೆಯ ಮೇಲೆ ಚರ್ಚೆ ಮಾಡಿದ್ದಾರೆ.
ಐದು ವರ್ಷದ ಹಿಂದೆ ಹೇಳಿದ ಕಥೆ
ಆ ಚರ್ಚೆಯ ಸಮಯದಲ್ಲಿಯೆ ಪ್ರಶಾಂತ್ ನೀಲ್ ಅವರಿಗೆ ಜೂನಿಯರ್ ಎನ್ಟಿಆರ್ ಒಂದು ಪ್ರಶ್ನೆ ಕೇಳಿದ್ದರು. ಮಹಾಭಾರತದಲ್ಲಿ ಯಾರು ವಿನ್ನರ್ ಅಂತಲೇ ಪ್ರಶ್ನೆ ಮಾಡಿದ್ದರು.
ಮಹಾಭಾರತದಲ್ಲಿ ಶಕುನಿ ವಿನ್ನರ್
ಜೂನಿಯರ್ ಎನ್ಟಿಆರ್ ಕೇಳಿದ ಪ್ರಶ್ನೆಗೆ ಪ್ರಶಾಂತ್ ನೀಲ್ ಹೇಳಿದ್ದರು. ಕೃಷ್ಣ ಇಲ್ಲವೆ ಅರ್ಜುನ ಈ ಮಹಾಭಾರತದ ವಿನ್ನರ್ ಅಂತ ಹೇಳಿದ್ದಾರೆ.
ಆದರೆ, ಜೂನಿಯರ್ ಎನ್ಟಿಆರ್ ಹೇಳೊದೇ ಬೇರೆ. ಈ ಒಂದು ಮಹಾಭಾರತದ ರಿಯಲ್ ವಿನ್ನರ್ ಬೇರೆ ಯಾರೂ ಅಲ್ಲ. ಅದು ಶಕುನಿ ಅಂತಲೇ ಹೇಳ್ತಾರೆ. ಈ ಮಾತು ಹೇಳಿದ್ಮೇಲೆ ಪ್ರಶಾಂತ್ ನೀಲ್ ಆ ದಿಕ್ಕಿನಲ್ಲಿ ಯೋಚಿಸೋಕೆ ಶುರು ಮಾಡಿದ್ದಾರೆ. ಒಂದಷ್ಟು ಬದಲಾವಣೆ ಮಾಡಿಕೊಂಡು ಒಂದು ಸೀನ್ ಕೂಡ ವಿರಿಸಿದ್ದಾರೆ.
ಡ್ರ್ಯಾಗನ್ ಚಿತ್ರಕ್ಕೆ 6 ಜನ ರೈಟರ್ಸ್
ಪ್ರಶಾಂತ್ ನೀಲ್ ಅವರ ಈ ಡ್ರ್ಯಾಗನ್ ಚಿತ್ರಕ್ಕೆ 6 ಜನ ರೈಟರ್ಸ್ ಇದ್ದಾರೆ. ಆದರೆ, ಆರಂಭದಲ್ಲಿ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಚರ್ಚೆ ಮಾಡಿದ್ದಾರೆ.
ಇವರ ಹಲವಾರು ಚರ್ಚೆಗಳ ಬಳಿಕವೇ ಡ್ರ್ಯಾಗನ್ ಸಿನಿಮಾದ ಕಥೆ ಹುಟ್ಟಿಕೊಂಡಿದೆ. ಈ ಸಿನಿಮಾದ ಕಥೆ ಬರೆಯೋಕೆ ಮೂರು ವರ್ಷಗಳೇ ಕಳೆದಿದೆ. ಆದರೆ, ನಂತರ 6 ಜನ ರೈಟರ್ಸ್ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಎಲ್ಲ ವಿಷಯವನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು Galatta Plus ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.