newsics.com/ನ್ಯೂಸಿಕ್ಸ್
ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ನಡುವಿನ ಡಿವೋರ್ಸ್ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು . ಅಷ್ಟೇ ಅಲ್ಲದೆ ತಮ್ಮ ಪತ್ನಿ ಆರತಿಯಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ ಎಂದು ಆರೋಪಿಸಿ ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದ್ರು ನಟ ಜಯಂ ರವಿ. ಜೊತೆಗೆ ನನಗೆ ಪತ್ನಿ ಆರತಿಯಿಂದ ವಿಚ್ಛೇದನ ಸಿಗುವವರೆಗೂ ನಾನು ಸಿನಿಮಾ ಮಾಡೋದಿಲ್ಲ ಎಂದು ಹೇಳಿಕೊಂಡಿದ್ದರು.
ಈ ಎಲ್ಲಾ ಬೆಳವಣಿಗೆ ಮಧ್ಯೆ ಆರತಿ ಬೇಡಿಕೆ ಇಟ್ಟಿರುವ ಭಾರೀ ಮೊತ್ತದ ಜೀವನಾಂಶ. ಜಯಂ ರವಿ ವಿಚ್ಛೇದನ ಪಡೆಯಲು ಬಯಸಿದರೆ, ಆರತಿ ತನ್ನ ಜೀವನದುದ್ದಕ್ಕೂ ನಿರ್ವಹಣಾ ವೆಚ್ಚಕ್ಕಾಗಿ ತಿಂಗಳಿಗೆ 40 ಲಕ್ಷ ರೂಪಾಯಿ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ. ತಿಂಗಳಿಗೆ 40 ಲಕ್ಷ ರೂಪಾಯಿ ಅಂದರೆ ವರ್ಷಕ್ಕೆ 4.8 ಕೋಟಿ ರೂಪಾಯಿ ಆಗುತ್ತದೆ. ಜಯಂ ರವಿ ಜೀವನಾಂಶದ ರೂಪದಲ್ಲಿ ಮಾತ್ರ ಪಾವತಿಸಬೇಕಾಗುತ್ತದೆ.
ಒಂದು ತಿಂಗಳಿಗೆ 40 ಲಕ್ಷ ಅಂದರೆ, ಒಂದು ವರ್ಷಕ್ಕೆ ಬರೊಬ್ಬರಿ 4.8 ಕೋಟಿ ರೂಪಾಯಿ ಆಗುತ್ತದೆ. ಇದು ಕೇವಲ ಜೀವನ ನಿರ್ವಹಣಾ ವೆಚ್ಚಕ್ಕಾಗಿ ಎಂಬುದು ವಿಶೇಷ.
ಈ ಬೇಡಿಕೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಜಯಂ ರವಿ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. “ಜಯಂ ರವಿ ಅವರು ಒಂದು ಸಿನಿಮಾ ಮಾಡಲು ವರ್ಷಗಟ್ಟಲೆ ಸಮಯ ತಗೊಳ್ತಾರೆ. ಅವರ ಸಂಭಾವನೆಯೇ 5 ರಿಂದ 6 ಕೋಟಿ ರೂಪಾಯಿ ಇರುತ್ತದೆ. ಹೀಗಿರುವಾಗ ಇಡೀ ವರ್ಷ ದುಡಿದಿದ್ದನ್ನು ಹೆಂಡತಿಗೆ ಜೀವನಾಂಶ ರೂಪದಲ್ಲೇ ಕೊಟ್ಟರೆ, ಇವರು ತಿನ್ನುವುದಾದರೂ ಏನು?” ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಆರತಿಯ ಕುಟುಂಬವು ತನಗೆ ತೀವ್ರ ಕಿರುಕುಳ ನೀಡಿದೆ ಎಂದು ಜಯಂ ರವಿ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಪತ್ನಿ ಆರತಿಯೂ ಇದುವರೆಗೂ ತನ್ನ ಮಕ್ಕಳನ್ನು ಭೇಟಿಯಾಗಲು ಬಿಡುವುದಿಲ್ಲ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಖರ್ಚು ಮಾಡಲು ಆಗುತ್ತಿಲ್ಲ ಸೇರಿದಂತೆ ಹಲವು ಕಿರುಕುಳಗಳನ್ನು ನೀಡುತ್ತಿದ್ದಾರೆ ಎಂದು ಜಯಂ ರವಿ ಆರೋಪಿಸಿದ್ದಾರೆ. ಕೊನೆಗೆ ತನ್ನ ಸ್ವಂತ ಮನೆಯಿಂದಲೇ ನನ್ನನ್ನು ಹೊರಹಾಕಿದ್ದರಿಂದ ಚೆನ್ನೈ ಬಿಟ್ಟು ಮುಂಬೈಗೆ ಹೋಗಬೇಕಾಯಿತು ಎಂದು ಜಯಂ ರವಿ ಅವರು ಅವರು ನೋವು ತೋಡಿಕೊಂಡಿದ್ದಾರೆ.
What happened to TG Nandish? ನಿಜವಾಗ್ಲೂ ನಂದೀಶ್‌ಗೇನಾಗಿತ್ತು? ದಿಢೀರ್ ಸಾವಿಗೇನು ಕಾರಣ?