Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > What happened to TG Nandish? ನಿಜವಾಗ್ಲೂ ನಂದೀಶ್‌ಗೇನಾಗಿತ್ತು? ದಿಢೀರ್ ಸಾವಿಗೇನು ಕಾರಣ?
ಕರ್ನಾಟಕಪ್ರಮುಖಮನರಂಜನೆ

What happened to TG Nandish? ನಿಜವಾಗ್ಲೂ ನಂದೀಶ್‌ಗೇನಾಗಿತ್ತು? ದಿಢೀರ್ ಸಾವಿಗೇನು ಕಾರಣ?

Share
2 Min Read
SHARE

newsics.com/ನ್ಯೂಸಿಕ್ಸ್

ಪ್ರತಿಭಾವಂತ ಬರಹಗಾರ, ಕಿರುತೆರೆ ಸಂಭಾಷಣೆಕಾರ ಟಿ.ಜಿ. ನಂದೀಶ್ ಬುಧವಾರ (ಮೇ 20) ಮಧ್ಯಾಹ್ನ  ಇಹಲೋಕ ತ್ಯಜಿಸಿದ್ದಾರೆ.

ಆರೋಗ್ಯವಂತರಾಗಿಯೇ ಇದ್ದ ನಂದೀಶ್ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದು ಹೇಗೆ ಎನ್ನುವ ಚರ್ಚೆ ಜೋರಾಗಿದ್ದು, ಹೃದಯಾಘಾತದಿಂದ ನಿಧನರಾದರು ಎಂದೇ ಸುದ್ದಿ ಹರಿದಾಡುತ್ತಿರುವಾಗ, ಧಾರಾವಾಹಿ ನಿರ್ಮಾಪಕ, ಸಂಭಾಷಣೆಕಾರ, ಲೇಖಕ ಡಿ.ಎಸ್. ಶ್ರೀನಿಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ವಿಚಾರ ಹೊಸ ಕಾರಣವನ್ನೇ ಹೇಳುತ್ತಿದೆ.

ಶ್ರೀನಿಧಿ ಪ್ರಕಾರ,‌ ನಂದೀಶ್ ಸಾವಿಗೆ ಹೃದಯಾಘಾತ ಕಾರಣವಲ್ಲ, ಗ್ಯಾಸ್ಟ್ರಿಕ್‌‌ನಿಂದ ವಾಂತಿಯಾಗಿದೆ. ಆಗ ಆಹಾರದ ಕಣ ಶ್ವಾಸಕೋಶಕ್ಕಿಳಿದು ನಂದೀಶ್ ಸಾವಾಗಿದೆ.

ಫೇಸ್‌ಬುಕ್‌ ಖಾತೆಯಲ್ಲಿ ಶ್ರೀನಿಧಿ ಅವರ ಬರವಣಿಗೆ ಹೀಗಿದೆ:

ಈ ಪೋಸ್ಟ್ ಬರೆಯಬೇಕೋ ಬೇಡವೋ ಎನ್ನುವ ಜಿಜ್ಞಾಸೆಯಲ್ಲೇ ಬರೆಯುತ್ತಿದ್ದೇನೆ.

ಕೇವಲ 36ರ ಹರೆಯದಲ್ಲೇ, ಇಬ್ಬರು ಪುಟ್ಟ ಮಕ್ಕಳನ್ನು ಹಾಗೂ ತುಂಬು ಕುಟುಂಬವನ್ನು ಅಗಲಿ ಹೋದ ನಂದೀಶ್ ಅಗಲಿಕೆ ನಮಗೆಲ್ಲ ತೀವ್ರ ಆಘಾತವನ್ನುಂಟು ಮಾಡಿದೆ. ಚೆನ್ನಾಗಿ ಬರೆಯುತ್ತಿದ್ದ ನಂದೀಶ್, ಬಹಳ ಒಳ್ಳೆಯ ಮನುಷ್ಯ. ಏನೇ ತಪ್ಪು ಕಂಡರೂ ಅದನ್ನ ಪ್ರಾಮಾಣಿಕವಾಗಿ- ವಿನೀತವಾಗಿ ಹೇಳುವ ಮತ್ತು ಅದನ್ನ ಸಾತ್ವಿಕವಾಗಿ ಪ್ರತಿಭಟಿಸುತ್ತಿದ್ದ ಮನುಷ್ಯ. ಹೀಗಾಗಿಯೇ ಈ ಹೊತ್ತಿನಲ್ಲಿ ಈ ಮಾಹಿತಿ ಹಂಚಿಕೊಳ್ಳದೇ ಹೋದರೆ ತಪ್ಪಾಗುತ್ತದೆ ಅನ್ನಿಸಿತು.

ನಂದೀಶ್ ಅವ್ರ ಹಠಾತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮಗಿಷ್ಟ ಬಂದ ಹಾಗೆ ಇಲ್ಲಸಲ್ಲದ ಊಹೆಗಳನ್ನು, ಸುಳ್ಳು ವದಂತಿಗಳನ್ನು ಹರಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ದಯವಿಟ್ಟು ಇಂತಹ ಸೂಕ್ಷ್ಮ ಸಮಯದಲ್ಲಿ ಯಾರಿಗೂ ನೋವುಂಟು ಮಾಡುವ ಬೇಜವಾಬ್ದಾರಿ ಮಾತುಗಳನ್ನಾಡಬೇಡಿ.

ಸತ್ಯ ಏನೆಂದರೆ: ನಂದೀಶ್ ಗೆ ಆಗಿದ್ದು ಯಾವುದೇ ರೀತಿಯ ಸಡನ್ ಆದ ಹೃದಯಾಘಾತವಲ್ಲ. ಅವರಿಗೆ ಯಾವ ಹೃದಯದ ಸಮಸ್ಯೆ ಕೂಡ ಇರಲಿಲ್ಲ. ಇತ್ತೀಚಿಗಷ್ಟೇ ಫುಲ್ ಬಾಡಿ ಚೆಕ್ ಅಪ್ ಮಾಡಿಸಿದ್ದ ನಂದೀಶ್ ಆರೋಗ್ಯವಾಗೇ ಇದ್ದರು. ಇವತ್ತು ಅವರಿಗೆ ಗ್ಯಾಸ್ಟ್ರಿಕ್ ಆಗಿತ್ತು. ಊಟ ಮಾಡಿ, ಇಂದು ಮಧ್ಯಾಹ್ನ ಮಲಗಿದ್ದಾಗ ಅದೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ವಾಂತಿಯಾಗಿ, ಆಹಾರದ ಕಣಗಳು ಆಕಸ್ಮಿಕವಾಗಿ ಶ್ವಾಸಕೋಶಕ್ಕೆ ಪ್ರವೇಶಿಸಿವೆ-. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ, ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿನಲ್ಲಿ.. ಈ ದುರಂತ ಸಂಭವಿಸಿದೆ. ಇದೊಂದು ದುರದೃಷ್ಟಕರ, ಆಕಸ್ಮಿಕ ದುರ್ಘಟನೆಯೇ ಹೊರತು ಬೇರೇನೂ ಅಲ್ಲ.

ಸಾವಿನಲ್ಲೂ ಮಸಾಲೆ ಹುಡುಕುವ ಜಗತ್ತಿನಲ್ಲಿ, ಒಳ್ಳೆಯ ಜೀವಕ್ಕೆ ಹಾಗೂ ಅವರ ಕುಟುಂಬದ ಖಾಸಗಿತನಕ್ಕೆ ಗೌರವ ಕೊಡೋದನ್ನ ಕಲಿಯೋಣ. ಸುಳ್ಳು ಸುದ್ದಿಗಳನ್ನು ಹರಡುವುದನ್ನು ದಯವಿಟ್ಟು ನಿಲ್ಲಿಸೋಣ. ಒಂದು ದುರಂತಮಯ ಸಾವನ್ನ ನಿಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಪ್ರಪಗಾಂಡ,ಅಜೆಂಡಾಗಳನ್ನ ಬೇರೆ ಹೊತ್ತಿನಲ್ಲಿ ಬಳಸಿ.

ಆ ಭಗವಂತ ಅವರ ಪತ್ನಿ ಹಾಗೂ ಪುಟ್ಟ ಮಕ್ಕಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ.

(ಅವರ ಕುಟುಂಬಸ್ಥರ ಕಡೆಯಿಂದಲೇ ಬಂದ ಮಾಹಿತಿ ಇದು)*

https://www.facebook.com/share/p/1CRk3c1ozA/

https://www.facebook.com/share/p/1CRk3c1ozA/

 

T G Nandeesh no more ಕಿರುತೆರೆ ಸಂಭಾಷಣೆಕಾರ, ಪ್ರತಿಭಾವಂತ ಬರಹಗಾರ ಟಿ.ಜಿ. ನಂದೀಶ್ ಇನ್ನಿಲ್ಲ

TAGGED:what-really-happened-to-nandish-what-caused-his-sudden-death
Share This Article
Facebook Twitter Copy Link Print
Previous Article T G Nandeesh no more ಕಿರುತೆರೆ ಸಂಭಾಷಣೆಕಾರ, ಪ್ರತಿಭಾವಂತ ಬರಹಗಾರ ಟಿ.ಜಿ. ನಂದೀಶ್ ಇನ್ನಿಲ್ಲ
Next Article GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 21-05-2026, ಗುರುವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?