newsics.com/ನ್ಯೂಸಿಕ್ಸ್
ನವದೆಹಲಿ : ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇನ್ಮುಂದೆ ಚೆಕ್ ಕ್ಲಿಯರ್ ಆಗಲು ಗ್ರಾಹಕರು ದಿನಗಟ್ಟಲೆ ಕಾಯುವ ಅಥವಾ ಬ್ಯಾಂಕ್‌ಗಳಲ್ಲಿ ಉದ್ದನೆಯ ಕ್ಯೂ ನಿಲ್ಲುವ ಅಗತ್ಯವಿರುವುದಿಲ್ಲ. ಎಚ್‌ಡಿಎಫ್‌ಸಿ ಲ್ಐ, ಸಿಐಸಿಐ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ಈ ಹೊಸ ವ್ಯವಸ್ಥೆಯನ್ನು ಈಗಾಗಲೇ ಸಂಪೂರ್ಣವಾಗಿ ಜಾರಿಗೆ ತಂದಿವೆ.
ವರದಿಗಳ ಪ್ರಕಾರ, ಆರ್‌ಬಿಐನ ಹೊಸ ನಿಯಮಗಳ ಅಡಿಯಲ್ಲಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯನ್ನು ಪ್ರಮುಖವಾಗಿ ಎರಡು ಹಂತಗಳಾಗಿ ವಿಂಗಡಿಸಲಾಗಿದೆ:
ಮೊದಲ ಹಂತ (ಸ್ಕ್ಯಾನಿಂಗ್): ಗ್ರಾಹಕರು ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯೊಳಗೆ ಬ್ಯಾಂಕ್‌ಗೆ ಬಂದು ಜಮೆ ಮಾಡುವ ಎಲ್ಲಾ ಚೆಕ್‌ಗಳನ್ನು ಬ್ಯಾಂಕ್ ಸಿಬ್ಬಂದಿ ಸ್ಕ್ಯಾನ್ ಮಾಡಿ, ತಕ್ಷಣವೇ ಕ್ಲಿಯರಿಂಗ್ ಹೌಸ್‌ಗೆ ರವಾನಿಸುತ್ತಾರೆ.
ಎರಡನೇ ಹಂತ (ದೃಢೀಕರಣ): ಯಾವ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳಬೇಕೋ, ಆ ಬ್ಯಾಂಕ್ ಸಂಜೆ 7:00 ಗಂಟೆಯೊಳಗೆ ತನ್ನ ಒಪ್ಪಿಗೆ ಅಥವಾ ದೃಢೀಕರಣವನ್ನು ನೀಡಬೇಕಾಗುತ್ತದೆ.
ಪ್ರತಿಯೊಂದು ಚೆಕ್‌ಗೂ ನಿರ್ದಿಷ್ಟ ‘ಗಡುವು ಸಮಯ’ ಇರುವುದರಿಂದ ಯಾವುದೇ ರೀತಿಯ ವಿಳಂಬಕ್ಕೆ ಇಲ್ಲಿ ಅವಕಾಶವಿರುವುದಿಲ್ಲ.
ಚೀನಾದಲ್ಲಿ 5.2 ತೀವ್ರತೆಯ ಭೀಕರ ಭೂಕಂಪ: ಕುಸಿದು ಬಿದ್ದ ಬಹುಮಹಡಿ ಕಟ್ಟಡಗಳು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ