newsics.com
ASTRO
ನಾವು ಮಾಡುವ ಕರ್ಮಗಳಿಗೆ ತಕ್ಕ ಫಲವನ್ನು ಶನಿದೇವ ನೀಡುತ್ತಾನೆ. ಇದೀಗ ಶನಿ ಮಹರ್ದಶೆ ಆರಂಭವಾಗಿದೆ. 19 ವರ್ಷಗಳ ಕಾಲ ನಡೆಯುವ ಈ ದೆಸೆಯು ಕೆಲವು ರಾಶಿಯವರಿಗೆ ಅದ್ಭುತ ಲಾಭಗಳನ್ನು ತಂದುಕೊಡಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.
ವ್ಯಕ್ತಿಯೊಬ್ಬ ತನ್ನ ಕರ್ಮಗಳಿಗೆ ಅನುಗುಣವಾಗಿ ಫಲ ಪಡೆಯುವ ಕಾಲವೇ ಶನಿ ಮಹರ್ದಶೆ. ಇದು ಬರೋಬ್ಬರಿ 19 ವರ್ಷಗಳ ಕಾಲ ಇರುತ್ತದೆ. ಈ ಸುದೀರ್ಘ ಅವಧಿಯಲ್ಲಿ ಶನಿದೇವನು ಮನುಷ್ಯನಿಗೆ ಶಿಸ್ತು, ತಾಳ್ಮೆ ಮತ್ತು ಜೀವನದ ಸತ್ಯಗಳನ್ನು ಕಲಿಸುತ್ತಾನೆ. ಹಾಗಾದರೆ ಈ ಶನಿ ಮಹರ್ದಶೆ ಯಾವ ರಾಶಿಗಳಿಗೆ ಲಾಭ ತರಲಿದೆ? ಯಾರಿಗೆ ಸಂಕಷ್ಟ ತರಲಿದೆ?
ಕೆಲವು ರಾಶಿಗಳಿಗೆ ಶನಿ ಅಧಿಪತಿಯಾಗಿದ್ದಾನೆ. ಇನ್ನು ಕೆಲವು ರಾಶಿಗಳಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ ಈ 19 ವರ್ಷಗಳು ಆ ರಾಶಿಗಳಿಗೆ ರಾಜಯೋಗ ತರಲಿದೆ. ಆ ರಾಶಿಗಳು ಯಾವುವೆಂದರೆ…
1. ತುಲಾ ರಾಶಿ:
ಶನಿಯು ತುಲಾ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುತ್ತಾನೆ. ಹಾಗಾಗಿ, ತುಲಾ ರಾಶಿಯವರಿಗೆ ಈ ದೆಸೆಯಲ್ಲಿ ಅಪಾರ ಕೀರ್ತಿ, ಪ್ರತಿಷ್ಠೆ, ಸಾಮಾಜಿಕ ಗೌರವ ಮತ್ತು ದೊಡ್ಡ ಯಶಸ್ಸು ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಇವರು ತೆಗೆದುಕೊಳ್ಳುವ ನಿರ್ಧಾರಗಳು ಅದ್ಭುತವಾಗಿ ಫಲ ನೀಡುತ್ತವೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುತ್ತಾರೆ.
2. ಮಕರ ರಾಶಿ:
ಮಕರ ರಾಶಿಗೆ ಶನಿಯೇ ಅಧಿಪತr. ಆದ್ದರಿಂದ ಈ ರಾಶಿಯವರಿಗೆ ಶನಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ಈ ಮಹರ್ದಶೆಯು ಈ ರಾಶಿ.ಯವರಿಗೆ ತುಂಬಾ ಅದ್ಭುತವಾಗಿರುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಾಣುತ್ತಾರೆ. ಜೀವನದಲ್ಲಿ ಸ್ಥಿರತೆ ಸಿಗುತ್ತದೆ. ಈ ರಾಶಿಯವರು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
3. ಕುಂಭ ರಾಶಿ:
ಕುಂಭ ರಾಶಿಗೂ ಶನಿಯೇ ಅಧಿಪತಿ. ಈ ಸಮಯದಲ್ಲಿ ಈ ರಾಶಿಯವರ ಜೀವನದಲ್ಲೂ ಅದ್ಭುತಗಳು ನಡೆಯಲಿವೆ. ವಿಶೇಷವಾಗಿ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒಳ್ಳೆಯ ಲಾಭ ಗಳಿಸುತ್ತಾರೆ.
ಕೆಲವು ರಾಶಿಯ ಅಧಿಪತಿಗಳೊಂದಿಗೆ ಶನಿಗೆ ಶತ್ರುತ್ವ ಇರುವುದರಿಂದ, ಅವರಿಗೆ ಈ ಸಮಯ ಸ್ವಲ್ಪ ಕಷ್ಟಕರವಾಗಿರುತ್ತದೆ.
ಮೇಷ ರಾಶಿ (Aries):
ಶನಿಯು ಮೇಷ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತಾನೆ. ಆದ್ದರಿಂದ ಇವರು ಮಾನಸಿಕ ಒತ್ತಡ, ಕೆಲಸಗಳಲ್ಲಿ ವಿಳಂಬ ಮತ್ತು ಆರ್ಥಿಕ ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಕರ್ಕಾಟಕ ರಾಶಿ (Cancer) & ಸಿಂಹ ರಾಶಿ (Leo):
ಈ ರಾಶಿಗಳ ಅಧಿಪತಿಗಳಾದ ಚಂದ್ರ ಮತ್ತು ಸೂರ್ಯನೊಂದಿಗೆ ಶನಿಗೆ ಆಗಿಬರುವುದಿಲ್ಲ. ಹಾಗಾಗಿ ಇವರಿಗೆ ಕುಟುಂಬದಲ್ಲಿ ಜಗಳ, ಸಂಬಂಧಗಳಲ್ಲಿ ಉದ್ವಿಗ್ನತೆ ಮತ್ತು ಅನವಶ್ಯಕ ನಿಂದನೆಗಳನ್ನು ಎದುರಿಸುವ ಸಾಧ್ಯತೆ ಇದೆ.
ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಈ ಪರಿಹಾರಗಳನ್ನು ಪಾಲಿಸಿ:
ಶನಿಯ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವು ಪರಿಹಾರಗಳನ್ನು ಅನುಸರಿಸಬೇಕು. ಮುಖ್ಯವಾಗಿ ಶನಿವಾರದ ನಿಯಮಗಳನ್ನು ಪಾಲಿಸಬೇಕು. ಅಂದರೆ, ಆ ದಿನ ಉಪವಾಸ ಇರುವುದು, ಶನೇಶ್ವರನಿಗೆ ತೈಲಾಭಿಷೇಕ ಮಾಡುವುದು ಮಾಡಿದರೆ ಒಳ್ಳೆಯದಾಗುತ್ತದೆ. ಶನಿಯ ಆಶೀರ್ವಾದ ಪಡೆಯಲು ಹನುಮಾನ್ ಚಾಲೀಸಾ ಪಠಿಸಬೇಕು. ಕಪ್ಪು ಎಳ್ಳು, ಕಪ್ಪು ಬಟ್ಟೆ ಮತ್ತು ಕಬ್ಬಿಣದ ವಸ್ತುಗಳನ್ನು ದಾನ ಮಾಡಬೇಕು.