Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನನಗೀಗ 19, ಪತಿಗೆ 40 ವರ್ಷ, ಆತನ ಜತೆ ಬದುಕಲಾರೆ ಎಂದ ಯುವತಿಗೆ ಹೈಕೋರ್ಟ್ ಹೇಳಿದ್ದೇನು?
ದೇಶಪ್ರಮುಖ

ನನಗೀಗ 19, ಪತಿಗೆ 40 ವರ್ಷ, ಆತನ ಜತೆ ಬದುಕಲಾರೆ ಎಂದ ಯುವತಿಗೆ ಹೈಕೋರ್ಟ್ ಹೇಳಿದ್ದೇನು?

Share
2 Min Read
SHARE

newsics.com

ನನ್ನ ಪತಿಗೆ 40 ವರ್ಷ ವಯಸ್ಸಾಗಿದೆ. ನನಗೆ ಇನ್ನೂ 19 ವರ್ಷ. ನಾನು ಆತನ ಜತೆ ಬದುಕಲಾರೆ ಎಂದ ಯುವತಿ ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯ ಒದಗಿಸಿದೆ. ಆ ಯುವತಿಗೆ ಪ್ರಿಯಕರನ ಜತೆ ಜೀವನ ನಡೆಸಲು ಅವಕಾಶ ಮಾಡಿಕೊಟ್ಟು ಮಹತ್ವದ ಆದೇಶ ಹೊರಡಿಸಿದೆ. ಅವಧೇಶ್ ಎಂಬುವವರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತನ್ನ ಪತ್ನಿಯನ್ನು ಅನುಜ್ ಕುಮಾರ್ ಎಂಬ ವ್ಯಕ್ತಿ ಅಕ್ರಮವಾಗಿ ಕೂಡಿಟ್ಟಿದ್ದಾನೆ ಎಂದು ಅವರು ಆರೋಪಿಸಿದ್ದರು.

ನ್ಯಾಯಾಲಯದ ಸೂಚನೆಯಂತೆ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ, ಒಂದು ಸಾಂತ್ವನ ಕೇಂದ್ರದಲ್ಲಿರಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಪತಿ ನನಗಿಂತ 21 ವರ್ಷ ದೊಡ್ಡವರು

ನ್ಯಾಯಾಧೀಶರು ಆಕೆಯನ್ನು ಪ್ರಶ್ನಿಸಿದಾಗ ಆಕೆ ಮನಬಿಚ್ಚಿ ಮಾತನಾಡಿದಳು. ನನಗೆ ಈಗ 19 ವರ್ಷ, ನನ್ನ ಪತಿಗೆ 40 ವರ್ಷ. ಅಂದರೆ ನನಗಿಂತ ಅವರು 21 ವರ್ಷ ದೊಡ್ಡವರು. ನಮ್ಮಿಬ್ಬರ ಸಂಬಂಧದಲ್ಲಿ ಎಂದೂ ಸಾಮರಸ್ಯ ಇರಲಿಲ್ಲ. ನನ್ನ ವೈವಾಹಿಕ ಜೀವನ ಸುಖವಾಗಿರಲಿಲ್ಲ ಮತ್ತು ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ ಎಂದು ಆಕೆ ದೂರಿದಳು. ಅಂತಿಮವಾಗಿ ತಾನು ಪ್ರಿಯಕರ ಅನುಜ್ ಕುಮಾರ್ ಜೊತೆ ಇರುವುದಾಗಿ ಆಕೆ ಸ್ಪಷ್ಟಪಡಿಸಿದಳು.

ಕೌನ್ಸೆಲಿಂಗ್ ವಿಫಲ

ಯುವತಿಯ ಮನವೊಲಿಸಲು ನ್ಯಾಯಾಲಯವು ಕೌನ್ಸೆಲಿಂಗ್‌ಗೆ ಆದೇಶಿಸಿತ್ತು. ಆದರೆ ಕೌನ್ಸೆಲಿಂಗ್ ನಂತರವೂ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆಕೆಯ ಸುರಕ್ಷತೆ ಮತ್ತು ಜವಾಬ್ದಾರಿಯನ್ನು ಹೊರುವುದಾಗಿ ಪ್ರಿಯಕರ ಅನುಜ್ ಕೂಡ ನ್ಯಾಯಾಲಯಕ್ಕೆ ಭರವಸೆ ನೀಡಿದನು.

ಕೋರ್ಟ್ ನೀಡಿದ ತೀರ್ಪು ಏನು?

ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರಿದ್ದ ಪೀಠವು, ‘ಯುವತಿಯು ವಯಸ್ಕಳಾಗಿರುವುದರಿಂದ ಆಕೆಯ ಅಭಿಪ್ರಾಯವೇ ಇಲ್ಲಿ ಮುಖ್ಯವಾಗುತ್ತದೆ. ಆಕೆ ಯಾರದೇ ಒತ್ತಡ ಅಥವಾ ಅಕ್ರಮ ಬಂಧನದಲ್ಲಿ ಇಲ್ಲದಿರುವುದು ಸ್ಪಷ್ಟವಾಗಿದೆ’ ಎಂದು ಅಭಿಪ್ರಾಯಪಟ್ಟಿತು. ವಯಸ್ಕರಿಗೆ ಯಾರೊಂದಿಗೆ ಬದುಕಬೇಕು ಎಂಬುದನ್ನು ನಿರ್ಧರಿಸುವ ಹಕ್ಕಿದೆ ಎಂದು ಹೇಳಿ, ಆಕೆಯನ್ನು ಪ್ರಿಯಕರನ ಜೊತೆ ಹೋಗಲು ಅನುಮತಿಸಿತು.

ಆರು ತಿಂಗಳ ಕಾಲ ನಿಗಾಕ್ಕೆ ಸೂಚನೆ

ಯುವತಿಯ ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯವು ಒಂದು ವಿಶೇಷ ಸೂಚನೆ ನೀಡಿದೆ. ಮುಂದಿನ ಆರು ತಿಂಗಳ ಕಾಲ “ಶೌರ್ಯ ದೀದಿ” ಎಂಬ ಹೆಸರಿನ ಮಹಿಳಾ ಅಧಿಕಾರಿಗಳು ಯುವತಿಯೊಂದಿಗೆ ಸಂಪರ್ಕದಲ್ಲಿದ್ದು, ಆಕೆಯ ಕ್ಷೇಮ ಸಮಾಚಾರವನ್ನು ಗಮನಿಸಬೇಕು ಎಂದು ಆದೇಶಿಸಿದೆ.

ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್: 19 ಲಕ್ಷ ರೂಪಾಯಿ ಕಳೆದುಕೊಂಡ ಸಂತ್ರಸ್ತೆ

ವಿರಾಟ್ ಕೊಹ್ಲಿ ಬಯೋಪಿಕ್​​​​​​ ಮೇಲೆ ಸಿನಿ ಜಗತ್ತಿನ ಕಣ್ಣು!

ರೆಡಿಮೇಡ್ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವು

TAGGED:and she couldn't live with him?What did the High Court say to the young woman who said she was 19 and her husband was 40
Share This Article
Facebook Twitter Copy Link Print
Previous Article ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ, ತಕ್ಷಣದಿಂದಲೇ ಜಾರಿ
Next Article ಹೊಸ ಕಾರು ಕೊಡಿಸುತ್ತೇನೆ ಎಂಬ ಆಮಿಷವೊಡ್ಡಿ ಅಕ್ಕನ ಗಂಡನನ್ನ ಬರ್ಬರವಾಗಿ ಹತ್ಯೆ ಮಾಡಿದ ಬಾಮೈದ

Popular Posts

ರಾಹುಲ್ ಗಾಂಧಿ ಮಹತ್ವದ ಭರವಸೆ: ಐ ಆಯಮ್​ ಹ್ಯಾಪಿ ಎಂದ ಸಚಿವ ಕೆ.ಹೆಚ್​.ಮುನಿಯಪ್ಪ

2 Min Read

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

You Might Also Like

ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read
ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

Social Networks

Facebook-f Instagram Twitter
Welcome Back!

Sign in to your account

Lost your password?