newsics.com
ನವದೆಹಲಿ: ಯಾವುದೇ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸೇವೆಯನ್ನು ದೀರ್ಘಕಾಲದವರೆಗೆ ಬಳಸಿಕೊಂಡರೆ, ಅಂತಹ ಹುದ್ದೆಯನ್ನು ‘ಕಾಯಂ’ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ.
ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ನೌಕರರನ್ನು ದಶಕಗಳ ಕಾಲ ಗುತ್ತಿಗೆ ಆಧಾರದ ಮೇಲೆ ಇರಿಸಿಕೊಂಡು, ನಂತರ ಅವರನ್ನು ಕಾಯಂ ಮಾಡದೆ ಇರುವುದು ಸರಿಯಲ್ಲ. ದೀರ್ಘಾವಧಿಯ ಅವಿರತ ಸೇವೆಯು ಆ ಹುದ್ದೆಯ ಅಗತ್ಯತೆಯನ್ನು ಸಾಬೀತುಪಡಿಸುತ್ತದೆ.
ದೀರ್ಘಕಾಲದವರೆಗೆ ಕೆಲಸ ಮಾಡುವ ನೌಕರರಿಗೆ ಕಾಯಂ ನೌಕರರಿಗೆ ಸಿಗುವ ಸೌಲಭ್ಯಗಳು ಮತ್ತು ಭದ್ರತೆಯನ್ನು ಒದಗಿಸುವುದು ಸಂಸ್ಥೆಗಳ ಜವಾಬ್ದಾರಿಯಾಗಿದೆ.ಕೇವಲ ‘ಗುತ್ತಿಗೆ’ ಎಂಬ ಕಾರಣ ನೀಡಿ ನೌಕರರನ್ನು ವರ್ಷಾನುಗಟ್ಟಲೆ ಅನಿಶ್ಚಿತತೆಯಲ್ಲಿ ಇಡುವುದು ಕಾರ್ಮಿಕ ನೀತಿಗಳಿಗೆ ವಿರುದ್ಧವಾದುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
https://www.newsics.com/2026/03/31/both-gold-and-silver-prices-rise/