https://youtube.com/shorts/wcgOU8WO_jc?si=ko9vW9TLLev8Rg2l
newsics.com
ಚಿನ್ನಕ್ಕೆ ಇಂದು ಎಂದೆಂದಿಗಿಂತಲೂ ಹೆಚ್ಚಿನ ಬೆಡಿಕೆ ಬಂದಿದೆ. ಭಾರತ ಸೇರಿದಂತೆ ಹಲವು ದಿಗ್ಗಜ ರಾಷ್ಟ್ರಗಳು ತಮ್ಮ ಖಜಾನೆಗಳಲ್ಲಿ ಚಿನ್ನವನ್ನು ಖರೀದಿಸಿಡುತ್ತಿವೆ ಎಂಬುದು ಇನ್ನೊಂದು ವಿಚಾರ. ಭಾರತದಲ್ಲಂತೂ ಚಿನ್ನಕ್ಕೆ ಮೊದಲಿನಿಂದಲೂ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಚಿನ್ನದ ಬೆಲೆ, ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೂ ನೇರ ಪ್ರಭಾವ ಬೀರಿದ್ದು ಹೂಡಿಕೆದಾರರು ಮತ್ತೆ ಚಿನ್ನದತ್ತ ಮುಖ ಮಾಡುತ್ತಿದ್ದಾರೆ.
ನಿನ್ನೆ ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು ಮಂಗಳವಾರ ಗ್ರಾಮ್ಗೆ 185 ರೂಗಳಷ್ಟು ಏರಿಕೆಯಾಗಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,36,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,49,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,36,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,929 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,685 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,197 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,929 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,685 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
https://www.newsics.com/2026/03/31/credit-card-users-new-rules-will-come-into-effect-from-tomorrow/