Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರೇ ನಾಳೆಯಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!
ಕರ್ನಾಟಕದೇಶಪ್ರಮುಖ

Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರೇ ನಾಳೆಯಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

Share
2 Min Read
SHARE

https://youtube.com/shorts/wcgOU8WO_jc?si=ko9vW9TLLev8Rg2l

newsics.com

ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ರೂಲ್ಸ್ ಬಿಸಿ ತಟ್ಟಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದು, ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಆದಾಯ ತೆರಿಗೆ ಇಲಾಖೆಯು ಇನ್ಮುಂದೆ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣಿಡಲಿದ್ದು, ನಿಮ್ಮ ಪ್ರತಿಯೊಂದು ದೊಡ್ಡ ಮೊತ್ತದ ಪಾವತಿಯೂ ತೆರಿಗೆ ಇಲಾಖೆಯ ರಾಡಾರ್‌ನಲ್ಲಿರಲಿದೆ

ಪ್ರಮುಖ ಬದಲಾವಣೆಗಳು ಇಲ್ಲಿವೆ:

1. 10 ಲಕ್ಷ ರೂ. ಮೀರಿದ ವಹಿವಾಟಿನ ಮೇಲೆ ನಿಗಾ

ಹೊಸ ನಿಯಮದ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ನೀವು 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಿದರೆ, ಬ್ಯಾಂಕುಗಳು ಈ ಮಾಹಿತಿಯನ್ನು ನೇರವಾಗಿ ತೆರಿಗೆ ಇಲಾಖೆಗೆ ನೀಡಲಿವೆ. ವಿದೇಶಿ ಪ್ರವಾಸದ ದೊಡ್ಡ ಖರ್ಚುಗಳು ಮತ್ತು 1 ಲಕ್ಷ ರೂಪಾಯಿಗೂ ಅಧಿಕ ನಗದು (Cash) ವಹಿವಾಟಿನ ಮೇಲೆಯೂ ವಿಶೇಷ ನಿಗಾ ಇರಿಸಲಾಗುವುದು. ನಿಮ್ಮ ಖರ್ಚು ನಿಮ್ಮ ಆದಾಯಕ್ಕಿಂತ ಹೆಚ್ಚಿದ್ದರೆ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.

 

2. ಪ್ಯಾನ್ ಕಾರ್ಡ್ (PAN Card) ಲಿಂಕ್ ಮಾಡುವುದು ಕಡ್ಡಾಯ

ಏಪ್ರಿಲ್ 1, 2026ರ ನಂತರ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹೊಸ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದಿಲ್ಲ.

ಹಳೆಯ ಕಾರ್ಡ್‌ದಾರರು ಕೂಡ ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕಡ್ಡಾಯವಾಗಿ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಬೇಕಾಗುತ್ತದೆ.

ಇದರಿಂದ ನಿಮ್ಮ ಎಲ್ಲಾ ಹಣಕಾಸಿನ ಚಟುವಟಿಕೆಗಳು ನೇರವಾಗಿ ನಿಮ್ಮ ಟ್ಯಾಕ್ಸ್ ರೆಕಾರ್ಡ್‌ಗೆ ಲಗತ್ತಾಗಲಿವೆ.

ವಿಶೇಷವೆಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ 3 ತಿಂಗಳಿಗಿಂತ ಹಳೆಯದಾಗಿರದಿದ್ದರೆ, ಅದನ್ನು ಪ್ಯಾನ್ ಕಾರ್ಡ್ ಮಾಡಿಸಲು ವಿಳಾಸದ ಪುರಾವೆಯಾಗಿ  ಬಳಸಬಹುದು.

3. ಕ್ರೆಡಿಟ್ ಕಾರ್ಡ್ ಮೂಲಕವೇ ತೆರಿಗೆ ಪಾವತಿ

ಇನ್ಮುಂದೆ ತೆರಿಗೆದಾರರು ತಮ್ಮ ಆದಾಯ ತೆರಿಗೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಲು ಅವಕಾಶವಿದೆ. ಆದರೆ, ಇದಕ್ಕೆ ಬ್ಯಾಂಕುಗಳು ಪ್ರೊಸೆಸಿಂಗ್ ಶುಲ್ಕ ವಿಧಿಸಬಹುದು ಮತ್ತು ಸಕಾಲದಲ್ಲಿ ಹಣ ಪಾವತಿಸದಿದ್ದರೆ ಬಡ್ಡಿ ಅನ್ವಯವಾಗುತ್ತದೆ.

4. ಕಂಪನಿ ಕ್ರೆಡಿಟ್ ಕಾರ್ಡ್ ಬಳಕೆಗೆ ಕಟ್ಟುನಿಟ್ಟಿನ ನಿಯಮ

ಒಂದು ವೇಳೆ ನೀವು ಕಂಪನಿ ನೀಡಿದ ಕಾರ್ಡ್ ಬಳಸುತ್ತಿದ್ದರೆ, ಅದರಲ್ಲಿ ಮಾಡುವ ವೈಯಕ್ತಿಕ ಖರ್ಚುಗಳನ್ನು ‘ತೆರಿಗೆಗೆ ಒಳಪಡುವ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಅಧಿಕೃತ ಕೆಲಸದ ಖರ್ಚುಗಳಿಗೆ ತೆರಿಗೆ ವಿನಾಯಿತಿ ಸಿಗಲಿದ್ದರೂ, ಅದಕ್ಕೆ ಪೂರಕವಾದ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಇನ್ಮುಂದೆ ಕಡ್ಡಾಯ.

https://www.newsics.com/2026/03/31/tollywood-star-says-he-prayed-to-god-that-his-son-would-die-sooner-than-him/

TAGGED:Credit card usersnew rules will come into effect from tomorrow!
Share This Article
Facebook Twitter Copy Link Print
Previous Article ನನ್ನ ಮಗ ನನಗಿಂತ ಬೇಗ ಸಾಯಬೇಕೆಂದು ದೇವರಿಗೆ ಪ್ರಾರ್ಥನೆ ಮಾಡಿದ್ದರಂತೆ ಟಾಲಿವುಡ್ ನ ಸ್ಟಾರ್ ನಟ!
Next Article ಬಂಗಾರದ ಹಾವು ಏಣಿಯಾಟಕ್ಕೆ ಗ್ರಾಹಕರು ಸುಸ್ತು! ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ

Popular Posts

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?