Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Parishat election ಪರಿಷತ್ ಚುನಾವಣೆ ವೇಳೆ ಯತ್ನಾಳ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’
ಕರ್ನಾಟಕಪ್ರಮುಖ

Parishat election ಪರಿಷತ್ ಚುನಾವಣೆ ವೇಳೆ ಯತ್ನಾಳ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

Share
1 Min Read
SHARE

newsics.com / ನ್ಯೂಸಿಕ್ಸ್

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಅವರ ಮತದಾನದ ವೇಳೆ ಹೈಡ್ರಾಮಾ ನಡೆಯಿತು.

ಚುನಾವಣೆಗೆ ಮುನ್ನವೇ ಯತ್ನಾಲ್ ಅವರು ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರಿಗೆ ಬೆಂಬಲ ಸೂಚಿಸಿ, ಅವರ ಪರ ಮತ ಚಲಾಯಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆದಿದ್ದರು. ಅಲ್ಲದೆ, ಆ ಪತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು.

ಪತ್ರದಲ್ಲಿ, “ನಾನು ಬಿಜೆಪಿ ನಾಯಕತ್ವವನ್ನು ವಿರೋಧಿಸುತ್ತಿಲ್ಲ. ಆದರೆ ಕರ್ನಾಟಕ ಬಿಜೆಪಿ ಘಟಕದಲ್ಲಿ ಕುಟುಂಬ ರಾಜಕಾರಣ ಹೆಚ್ಚುತ್ತಿರುವುದನ್ನು ವಿರೋಧಿಸುತ್ತಿದ್ದೇನೆ” ಎಂದು ಯತ್ನಾಲ್ ಉಲ್ಲೇಖಿಸಿದ್ದರು.

ಈ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ಹಾಗೂ ಚುನಾವಣಾ ಏಜೆಂಟ್ ಎನ್.ಎಸ್. ಉಗ್ರಪ್ಪ ಅವರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು. ಯತ್ನಾಲ್ ಅವರು ಸಾರ್ವಜನಿಕವಾಗಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವುದಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅವರ ಮತವನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಗ್ರಪ್ಪ, “ಮತದಾನದ ಗೌಪ್ಯತೆಯ ತತ್ವಕ್ಕೆ ವಿರುದ್ಧವಾಗಿ ಯತ್ನಾಲ್ ಅವರು ತಮ್ಮ ಮತದ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಆದ್ದರಿಂದ ಅವರ ಮತವನ್ನು ಪರಿಗಣಿಸದಂತೆ ನಾವು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ” ಎಂದು ತಿಳಿಸಿದರು.

ಯತ್ನಾಲ್ ಅವರ ಮತದ ಕುರಿತು ಚುನಾವಣಾಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

 

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

TAGGED:@news#BasanagoudaPatilYatnal#KarnatakaNews#KarnatakaPoliticsnewsics
Share This Article
Facebook Twitter Copy Link Print
Previous Article ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ
Next Article ಟೆಲಿಗ್ರಾಂ ಉಗ್ರವಾದ, ಸೈಬರ್ ಅಪರಾಧಗಳಿಗೆ ಅಡ್ಡೆ; ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಗಂಭೀರ ಮಾಹಿತಿ

Popular Posts

ಟೆಲಿಗ್ರಾಂ ಉಗ್ರವಾದ, ಸೈಬರ್ ಅಪರಾಧಗಳಿಗೆ ಅಡ್ಡೆ; ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಗಂಭೀರ ಮಾಹಿತಿ

2 Min Read

Parishat election ಪರಿಷತ್ ಚುನಾವಣೆ ವೇಳೆ ಯತ್ನಾಳ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

1 Min Read

ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ

1 Min Read

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

You Might Also Like

ವೈರಲ್

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read
ವೈರಲ್

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read
ವೈರಲ್

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read
ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?