https://youtube.com/shorts/wcgOU8WO_jc?si=ko9vW9TLLev8Rg2l
newsics.com
ಟಾಲಿವುಡ್ ನ ಹಿರಿಯ ನಟ ತಮ್ಮ ಮಗ ತಾನಿಗಿಂತ ಮೊದಲು ಸಾಯಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದು, ಸಿಡಿಲು ಬಡಿದು ಮಗ ಸಾವು, ದುಃಖದ ನೆನಪು ಹಂಚಿಕೊಂಡಿದ್ದಾರೆ.
ಹಿರಿಯ ನಟ ಪ್ರಸಾದ್ ಬಾಬು ಇಂದಿನ ಯುವ ಪೀಳಿಗೆಗೆ ಈ ನಟನ ಬಗ್ಗೆ ಪರಿಚಯ ಇರೋದು ಕಡಿಮೆ. ಆದರೆ 90ರ ದಶಕದಲ್ಲಿ ಸಿನಿಮಾ ಪ್ರೇಮಿಗಳಿಗೆ ಈ ನಟನ ಎಂದರೇ ಬಹಳ ಇಷ್ಟ ಇತ್ತು. ಸಿನಿಮಾ ವೃತ್ತಿ ಜೀವನದ ಆರಂಭದಲ್ಲೇ ಹೀರೋ ಆಗಿ ಎಂಟ್ರಿ ಕೊಟ್ಟು, ಹಿಟ್ ಸಿನಿಮಾಗಳನ್ನು ನೀಡಿದ್ದ ಈ ಕಲಾವಿದ, ಆ ಬಳಿಕ ವಿಲನ್, ಹಾಸ್ಯ ನಟ ಸೇರಿದಂತೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಸುಮಾರು 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ನಟ ನಿರ್ದೇಶಕರಾಗಿಯೂ ಸಿನಿಮಾ ಮಾಡಿದ್ದಾರೆ.
ಇವರು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದರು. ಇದೇ ವೇಳೆ ತಮ್ಮ ಜೀವನದಲ್ಲಿ ಎದುರಿಸಿದ ಅತ್ಯಂತ ದುರಂತ ಘಟನೆಯನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಕಣ್ಣೀನಲ್ಲೂ ನೀರು ಬರುವಂತೆ ಮಾಡಿದ್ದರು.
ಹಿರಿಯ ನಟ ಪ್ರಸಾದ್ ಬಾಬು ಅವರ ಹಿರಿಯ ಮಗ ಹುಟ್ಟುತ್ತಲೇ ವಿಶೇಷ ಚೇತನರಾಗಿದ್ದರು. ಮಾತು ಕೂಡ ಬರ್ತಾ ಇರಲಿಲ್ಲವಂತೆ. ತಾನು ಸಂಬಂಧದಲ್ಲಿ ಮದುವೆಯಾಗಿದ್ದ ಕಾರಣದಿಂದಲೇ ವಿಶೇಷ ಚೇತನ ಮಗು ಜನಿಸಿತ್ತು ಎಂದು ನಟ ಕಣ್ಣೀರಿಟ್ಟಿದ್ದಾರೆ.
ಮಗನ ಆರೋಗ್ಯ ಸರಿ ಇಲ್ಲಿದ್ದರೂ ಕೂಡ ಅವರು ನಟಿಸುತ್ತಿದ್ದ ಪ್ರತಿ ಸಿನಿಮಾ ಶೂಟಿಂಗ್ ವೇಳೆಯೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರಂತೆ.
ಒಂದು ದಿನ ಬೇಸಿಗೆಯ ಸಮಯದಲ್ಲಿ ಪ್ರಸಾದ್ ಬಾಬು ಅವರ, 30 ವರ್ಷದ ಮಗ ಮನೆಯ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರಂತೆ. ಈ ವೇಳೆ ಸಿಡಿಲು ಬಡಿದು ಮೈದಾನದಲ್ಲೇ ಕುಸಿದುಬಿದ್ದರಂತೆ. ಆ ವೇಳೆಯೇ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರಂತೆ. ಈ ಕುರಿತು ತಿಳಿಯುತ್ತಿದ್ದಂತೆಯೇ ಪ್ರಸಾದ್ ಬಾಬು ಓರ್ವ ತಂದೆಯಾಗಿ ಶಾಕ್ಗೆ ಒಳಗಾಗಿದ್ದರಂತೆ.
ನಾನು ಬದುಕಿರೋ ವರೆಗೂ ಮಗನನ್ನು ಕಣ್ಣಿನಲ್ಲಿ ಕಣ್ಣನಿಟ್ಟು ನೋಡಿಕೊಳ್ಳುತ್ತಿದೆ. ಆದರೆ ನಾಳೆ ಸತ್ತು ಹೋದರೆ ಮಗನನ್ನು ಯಾರು ನೋಡಿಕೊಳ್ಳುತ್ತಾರೆ? ಬೇರೆಯವರು ಸರಿಯಾಗಿ ನೋಡಿಕೊಳ್ಳುತ್ತಾರಾ? ಸರಿಯಾದ ಊಟ ಕೊಡ್ತಾರಾ? ಎಂಬ ಯೋಚನೆಗಳು ನನಗೆ ಹಲವು ರಾತ್ರಿಗಳು ನಿದ್ದೆ ಮಾಡೋದಕ್ಕೆ ಬಿಟ್ಟಿರಲಿಲ್ಲ. ಓರ್ವ ಅನಾಥನಾಗಿ ನನ್ನ ಮಗ ಬದುಕೋದು ಬೇಡ ಎಂಬ ಉದ್ದೇಶದೊಂದಿಗೆ ನನ್ನ ಮಗ ನನಗಿಂತ ಬೇಗ ಕೊನೆಯುಸಿರೆಳೆಯಬೇಕು ಎಂದು ದೇವರಿಗೆ ಪ್ರಾರ್ಥನೆ ಮಾಡಿದ್ದೆ ಎಂದು ನಟ ಪ್ರಸಾದ್ ಬಾಬು ಕಣ್ಣೀರಿಟ್ಟಿದ್ದರು.