newsics.com
ವಿಜಯಪುರ: ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾರಿಗೆ ಬಸ್ ಹೊತ್ತಿ ಉರಿದಿದ್ದು, ಬೈಕ್ ಸವಾರ ಸಜೀವ ದಹನಗೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿಂಧಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ನಡೆದಿದೆ.
ಮೃತಪಟ್ಟವನನ್ನು ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಅಭಿಷೇಕ ಸಾಯಬಗೌಡ ನಾಗರಾಳ ಎಂದು ಗುರುತಿಸಲಾಗಿದೆ.
ಸಾರಿಗೆ ಬಸ್ ಹಾಗೂ ಬೈಕ್ ಡಿಕ್ಕಿಯ ರಭಸಕ್ಕೆ ಬೈಕ್ ಟ್ಯಾಂಕಿನ ಪೆಟ್ರೋಲ್ ಚೆಲ್ಲಿ, ಬಸ್ ಗೆ ಬೆಂಕಿ ತಗುಲಿದ್ದು, ಬೆಂಕಿ ಬಸ್ ಗೆ ಆವರಿಸಿಕೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಬಚಾವ್ ಆಗಿದ್ದು, ಬಸ್ ಅಡಿ ಸಿಲುಕಿದ್ದ ಬೈಕ್ ಸವಾರ ಸಜೀವ ದಹನವಾಗಿದ್ದಾನೆ.
ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದು, ಸ್ಥಳಕ್ಕೆ ಪೊಲೀಸ್ ರು ಭೇಟಿ ನೀಡಿ ಪರಿಶೀಲಿಸಿದರು.
ಬಂಗಾರದ ಹಾವು ಏಣಿಯಾಟಕ್ಕೆ ಗ್ರಾಹಕರು ಸುಸ್ತು! ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ
ದೀರ್ಘಕಾಲ ಸೇವೆ ಸಲ್ಲಿಸುವ ಗುತ್ತಿಗೆ ನೌಕರರ ಹುದ್ದೆ ಕಾಯಂ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.