https://youtube.com/shorts/JFDfzeRUAUw?si=UPiQjhCFAIkLXEhb
newsics.com
ವಿಜ್ಞಾನಿಗಳು ನೇರವಾಗಿ ನಾವು ಉಸಿರಾಡುವ ಗಾಳಿಯಿಂದಲೇ ನೀರು ತೆಗೆಯುವ ಅದ್ಭುತ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಗಾಳಿಯಲ್ಲಿರುವ ತೇವಾಂಶವನ್ನು ಬಳಸಿ, ಕುಡಿಯುವ ನೀರು ತಯಾರಿಸುವ ಈ ಹೊಸ ಐಡಿಯಾ ಸದ್ಯ ಜಗತ್ತಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
ಈ ರೋಚಕ ಸಂಶೋಧನೆಯ ಹಿಂದಿರುವ ಮಾಸ್ಟರ್ ಮೈಂಡ್ ಅಂದರೆ ಅಮೆರಿಕದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (MIT) ಪ್ರೊಫೆಸರ್ ಎವೆಲಿನ್ ಎನ್. ವಾಂಗ್. ಇವರು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, 2025ರ ಹೊತ್ತಿಗೆ ವಿಶ್ವವಿದ್ಯಾಲಯದ ಇಂಧನ ಮತ್ತು ಹವಾಮಾನ ವಿಭಾಗದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಮುಖ್ಯ ಫೋಕಸ್ ಇರುವುದೇ ‘ಹೀಟ್ ಟ್ರಾನ್ಸ್‌ಫರ್’ ಮತ್ತು ಸೌರ ಶಕ್ತಿಯ ಮೇಲೆ. ಇವರು ತಮ್ಮ ಡಿವೈಸ್ ರಿಸರ್ಚ್ ಲ್ಯಾಬ್‌ನಲ್ಲಿ, ನೈಜ ಪ್ರಪಂಚದ ನೀರಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾರೆ. ಭವಿಷ್ಯದಲ್ಲಿ ಪ್ರತಿ ಮನೆಯೂ ತಮ್ಮ ಸುತ್ತಲಿನ ಗಾಳಿಯಿಂದಲೇ ನೀರು ತಯಾರಿಸಿಕೊಳ್ಳುವಂತಹ ಅದ್ಭುತ ಡಿವೈಸ್ ಒಂದನ್ನು ಇವರ ತಂಡ ಸಿದ್ಧಪಡಿಸುತ್ತಿದೆ.
ಇದನ್ನು ವಾತಾವರಣದ ವಾಟರ್ ಹಾರ್ವೆಸ್ಟಿಂಗ್ (AWH) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಒಣ ಪ್ರದೇಶದ ಗಾಳಿಯಲ್ಲೂ ಯಾವಾಗಲೂ ಒಂದಷ್ಟು ನೀರಿನ ಆವಿ (ತೇವಾಂಶ) ಇದ್ದೇ ಇರುತ್ತದೆ. ನಾವೆಲ್ಲಾ ಚಳಿಗಾಲದಲ್ಲಿ ಬೆಳಿಗ್ಗೆ ಹುಲ್ಲಿನ ಮೇಲೆ ಇಬ್ಬನಿ ಬೀಳುವುದನ್ನು ನೋಡಿರುತ್ತೇವಲ್ಲ? ಅದು ಗಾಳಿಯಲ್ಲಿರುವ ತೇವಾಂಶ ತಂಪಾಗಿ ನೀರಾಗುವುದೇ ಆಗಿದೆ. ಅದೇ ರೀತಿ ದಟ್ಟವಾದ ಮಂಜಿನಿಂದ ಬಲೆಗಳನ್ನು ಬಳಸಿ ನೀರು ಕಲೆಹಾಕುವ ವಿಧಾನವೂ ಇದೆ. ಆದರೆ ಪ್ರೊಫೆಸರ್ ವಾಂಗ್ ಅವರ ಟೀಮ್ ಸ್ವಲ್ಪ ವಿಭಿನ್ನವಾಗಿ, ಗಾಳಿಯಿಂದ ನೀರಿನ ಅಣುಗಳನ್ನು ಸ್ಪಾಂಜ್ ತರಹ ಹೀರಿಕೊಳ್ಳುವ ವಿಶೇಷ ವಸ್ತುಗಳನ್ನು (Sorption materials) ಬಳಸಿ ಈ ಸಾಧನೆ ಮಾಡುತ್ತಿದೆ.
ಕರೆಂಟ್ ಬೇಡ, ಬರೀ ಸೂರ್ಯನ ಬಿಸಿಲೇ ಸಾಕು!
ಈ ಡಿವೈಸ್ ಕೆಲಸ ಮಾಡುವ ರೀತಿ ಕೇಳಿದರೆ ನೀವು ನಿಜಕ್ಕೂ ಥ್ರಿಲ್ ಆಗುತ್ತೀರಾ! ವಾಂಗ್ ಅವರ ತಂಡ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿವಿಯ ವಿಜ್ಞಾನಿಗಳ ಜೊತೆ ಸೇರಿ ಪರೀಕ್ಷಿಸಿದ ಈ ಡಿವೈಸ್‌ನಲ್ಲಿ, ರಾತ್ರಿಯ ಹೊತ್ತು ರಂಧ್ರವಿರುವ ವಿಶೇಷ ವಸ್ತುಗಳು (Porous material) ಗಾಳಿಯಲ್ಲಿರುವ ತೇವಾಂಶವನ್ನು ಎಳೆದುಕೊಂಡು ಸಂಗ್ರಹಿಸಿಕೊಳ್ಳುತ್ತವೆ. ಹಗಲಿನಲ್ಲಿ ಸೂರ್ಯನ ಬಿಸಿಲು ಇದರ ಮೇಲೆ ಬಿದ್ದ ತಕ್ಷಣ, ಆ ಹೀರಿಕೊಂಡ ಆವಿ ಬಿಡುಗಡೆಯಾಗಿ, ಕರಗಿ ಶುದ್ಧ ಕುಡಿಯುವ ನೀರಾಗಿ ಟ್ಯಾಂಕ್‌ನಲ್ಲಿ ಶೇಖರಣೆಯಾಗುತ್ತದೆ!
ನೀರಿಲ್ಲದ ಲಕ್ಷಾಂತರ ಜನರಿಗೆ ಇದೇ ಸಂಜೀವಿನಿ!
ಈ ಮ್ಯಾಜಿಕ್ ಡಿವೈಸ್‌ಗೆ ಯಾವುದೇ ಕರೆಂಟ್ (ವಿದ್ಯುತ್ ಶಕ್ತಿ) ಬೇಕಾಗಿಲ್ಲ, ಬರೀ ಸೂರ್ಯನ ಶಾಖವಿದ್ದರೆ ಸಾಕು. ಎಷ್ಟೇ ಒಣಗಿದ ಗಾಳಿಯಿದ್ದರೂ, ನೀರಿನ ಆವಿಯನ್ನು ಮ್ಯಾಗ್ನೆಟ್ ತರಹ ಆಕರ್ಷಿಸಿ ನೀರು ಮಾಡುವ ತಾಕತ್ತು ಈ ವಸ್ತುಗಳಿಗೆ ಇದೆ. ಈ ತಂತ್ರಜ್ಞಾನ ಸಂಪೂರ್ಣವಾಗಿ ಜನಸಾಮಾನ್ಯರಿಗೆ ಸಿಗುವಂತಾದರೆ, ಭವಿಷ್ಯದಲ್ಲಿ ನೀರಿನ ಕೊರತೆಯಿಂದ ನರಳುತ್ತಿರುವ ಲಕ್ಷಾಂತರ ಜನರಿಗೆ ಇದೊಂದು ದೊಡ್ಡ ವರದಾನವಾಗಲಿದೆ!
ಮಲಗುವ ಮುನ್ನ ಮುಖಕ್ಕೆ ಇದನ್ನ ಹಚ್ಚಿ, ನಿಮ್ಮ ಸ್ಕೀನ್ ಫಳಫಳ ಹೊಳೆಯುತ್ತೆ