Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬದಲಿ ನಿವೇಶನ ಕೇಳಿ ಸಿಎಂ ಸಿದ್ದರಾಮಯ್ಯ ಮುಡಾಗೆ ಬರೆದಿದ್ದ ಪತ್ರ ವೈರಲ್!
ಕರ್ನಾಟಕಪ್ರಮುಖವೈರಲ್

ಬದಲಿ ನಿವೇಶನ ಕೇಳಿ ಸಿಎಂ ಸಿದ್ದರಾಮಯ್ಯ ಮುಡಾಗೆ ಬರೆದಿದ್ದ ಪತ್ರ ವೈರಲ್!

Share
2 Min Read
SHARE

newsics.com

ಮೈಸೂರು: ಬದಲಿ‌ ನಿವೇಶನ ಕೇಳಿ‌ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಸಿಎಂ ಸಿದ್ದರಾಮಯ್ಯ ಬರೆದಿದ್ದ ಪತ್ರವೊಂದು ಭಾರೀ‌ ವೈರಲ್ ಆಗಿದೆ.

ತಮ್ಮ ಪತ್ನಿ ಪಾರ್ವತಿಯವರು ತಮ್ಮ ಜಮೀನಿನ ಸ್ವಾಧೀನಕ್ಕೆ ಬದಲಿಯಾಗಿ ಇಂತಹದ್ದೇ ಸ್ಥಳದಲ್ಲಿ ನಿವೇಶನಗಳನ್ನು ಕೊಡಿ ಎಂದು ನಾವು ಮುಡಾಗೆ ಕೇಳಿರಲಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯನವರು, ಶಾಸಕರಾಗಿದ್ದಾಗ ಇದೇ ಮುಡಾದಿಂದ ತಮಗೆ ನೀಡಿದ್ದ ನಿವೇಶನಕ್ಕೆ ಬದಲಾಗಿ ಬೇರೆ ಕಡೆ ಬದಲಿ ನಿವೇಶನ ಕೊಡಬೇಕೆಂದು ಅಂದಿನ ಮುಡಾ ಅಧ್ಯಕ್ಷರಿಗೆ ಬರೆದಿದ್ದ ಪತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಮುಡಾದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ವಿಜಯನಗರದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ನಿವೇಶನಗಳನ್ನು ಬದಲಿಯಾಗಿ ಪಡೆದಿರುವ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಆರೋಪಿಸಿ, ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸಿದಾಗ, ತಮ್ಮ ವಿರುದ್ಧ ಮಾಡಲಾಗುತ್ತಿದ್ದ ಆರೋಪಗಳಿಗೆಲ್ಲಾ ಸ್ಪಷ್ಟನೆ ನೀಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ನನಗೆ ಅಧಿಕಾರ, ಹಣದ ಮೇಲೆ ವ್ಯಾಮೋಹವೂ ಇಲ್ಲ. ನಾನು ನನ್ನ ಅಧಿಕಾರವನ್ನು ಶೋಷಿತರು, ದಲಿತರ ಏಳಿಗೆಗಾಗಿಯೇ ಮೀಸಲಿಟ್ಟಿದ್ದೇನೆ ಎಂಬುದಾಗಿ ಇತ್ತೀಚಿಗಷ್ಟೇ ಹೇಳಿದ್ದರು. ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಭಾಗಿಯಾಗಿಯೂ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದರು.

ಇದೇ ಸಂಬಂಧ ಮೈತ್ರಿ ಪಕ್ಷದ ವಿರುದ್ಧ ಜನಾಂದೋಲನ ಸಮಾವೇಶಗಳನ್ನೂ ಮಾಡಿದ್ದರು. ಮೈತ್ರಿ ಪಕ್ಷದವರ ಪಾದಯಾತ್ರೆಯ ಸಮಾರೋಪ ಸಮಾರಂಭ ಮುಗಿದ ಬೆನ್ನಲ್ಲೇ 1984ರಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾಗ ಮುಡಾಗೆ ಬದಲಿ ನಿವೇಶನಕ್ಕಾಗಿ ಖುದ್ದು ಬರೆದಿದ್ದ ಪತ್ರ ಈಗ ಸದ್ದು ಮಾಡುತ್ತಿದ್ದು, ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.

ಪತ್ರದಲ್ಲೇನಿದೆ?

1984ರಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದ ವೇಳೆ ಮೈಸೂರಿನ ಅಂದಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಿಗೆ ಬರೆದಿದ್ದ ಪತ್ರದಲ್ಲಿ, ಈ ಕೆಳಗೆ ರುಜು ಮಾಡಿರುವ ಸಿದ್ಧರಾಮಯ್ಯ, ಶಾಸಕರಾದ ನಾನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವೇದೆಂದರೆ, ನನಗೆ ಮೈಸೂರಿನ ಜಯನಗರ-ತೊಣಚಿಕೊಪ್ಪಲಿನ 2ನೇ ಹಂತ, ಎಂ ಬ್ಲಾಕ್‌ನಲ್ಲಿ ನಿವೇಶನ ಸಂಖ್ಯೆ-9, ಅಳತೆ 50 * 80 ಅನ್ನು ರೂ.30ರಂತೆ ಕೊಟ್ಟಿರುವುದು ಸರಿಯಷ್ಟೇ. ಸದರಿ ನಿವೇಶನಕ್ಕೆ ಬದಲಾಗಿ ಜಯನಗರ-ತೊಣಚಿಕೊಪ್ಪಲೆ ಜಿ ಮತ್ತು ಹೆಚ್ ಬ್ಲಾಕ್‌ನಲ್ಲಿ ಖಾಲಿ ಇರುವ 50* 80 ಅಳತೆಯುಳ್ಳ ನಿವೇಶನ ಸಂಖ್ಯೆ 1245 ಅನ್ನು ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂಬುದಾಗಿ ಬರೆಯಲಾಗಿದೆ.

ದಿನಾಂಕ 08-05-1984ರಂದು ಸಿದ್ಧರಾಮಯ್ಯ ಅವರು ಬರೆದಿರುವ ಪತ್ರವನ್ನು ರಿಸೀವ್ ಮಾಡಿಕೊಂಡಿರುವ ಮೈಸೂರಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಸದರಿ ಕ್ರಮಕ್ಕೆ ಸೂಚಿಸಿ ಹಿಂಬರಹವನ್ನು ಬರೆದಿರುವುದೂ ಪತ್ರದಲ್ಲಿ ಕಂಡುಬಂದಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಈಗ ಸಿದ್ದರಾಮಯ್ಯನವರ ಸಾಚಾತನ, ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿದೆ.

ಕೊಚ್ಚಿಹೋದ ಕಾರು: ಒಂದೇ ಕುಟುಂಬದ 11‌ ಮಂದಿ‌ ಪ್ರವಾಹ ಪಾಲು, ಮಗು ಬಚಾವ್, ವಿಡಿಯೊ ನೋಡಿ

ಸೆ.1ರಿಂದ ಹೊಸ ಟೆಲಿಕಾಂ ನಿಯಮ ಜಾರಿ! ನಕಲಿ ಸಿಮ್‌ಕಾರ್ಡ್ 2 ವರ್ಷದ ವರೆಗೆ ಬ್ಲಾಕ್‌ಲಿಸ್ಟ್‌ಗೆ ಸೇರ್ಪಡೆಯಾಗುವ ಸಾಧ್ಯತೆ

ಉದ್ಯೋಗದ ಆಫರ್ ತಿರಸ್ಕರಿಸಿದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್

ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಭತ್ತ ನಾಟಿ ಮಾಡಿದ ಹೆಚ್‍ಡಿಕೆ

90 ಸಾವಿರ ಕೋಟಿ ಒಡೆಯನ ಜೊತೆ  ಈ ನಟಿ ಬ್ರೇಕಪ್ ಮಾಡಿಕೊಂಡಿದ್ಯಾಕೆ..?

TAGGED:CM Siddaramaiahwho asked for an alternative site: The letter written to Muda went viral
Share This Article
Facebook Twitter Copy Link Print
Previous Article ಬಿಳಿ ಬಿಕಿನಿಯಲ್ಲಿ ಮಸ್ತ್ ಪೋಸ್ ಕೊಟ್ಟ ಹೀರೋಯಿನ್
Next Article ನಿತ್ಯ ಬಾಳೆಹಣ್ಣು ತಿನ್ನಿ, ಬೆಡ್‌ರೂಮ್‌ನಲ್ಲಿ ಫುಲ್ ಖುಷಿಯಾಗಿರಿ!

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?