newsics.com
ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಮಧ್ಯಪ್ರದೇಶದಿಂದ ಕೆಲ ಹುಲಿಗಳನ್ನು ಒಡಿಶಾ, ಛತ್ತೀಸಗಡ ಮತ್ತು ರಾಜಸ್ಥಾನಕ್ಕೆ ಸ್ಥಳಾಂತರಿಸಲು NTCA ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ತಿಳಿಸಿದೆ.
ಪ್ರಸ್ತುತ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ. ಇದು ಭಾರತದಲ್ಲೇ ಅತಿ ಹೆಚ್ಚು. ನಂತರದ ಸ್ಥಾನದಲ್ಲಿ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಹುಲಿಗಳು ಇದೆ.
ಹುಲಿಗಳನ್ನು ಸ್ಥಳಾಂತರಿಸಲು NTCA ತಾಂತ್ರಿಕ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಪ್ರದೇಶ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬರಾಜನ್ ಸೇನ್ ತಿಳಿಸಿದ್ದಾರೆ.
ಮೂರೂ ರಾಜ್ಯಗಳಿಗೂ ತಲಾ ಮೂರು ಗಂಡು ಹುಲಿ ಹಾಗೂ ತಲಾ ಒಂದು ಹೆಣ್ಣು ಹುಲಿಯನ್ನು ಕಳುಹಿಸಿಕೊಡಲಾಗುವುದು. ಆಯ್ಕೆ ಮಾಡಿದ ಸಂರಕ್ಷಿತಾರಣ್ಯದಲ್ಲಿ ಹುಲಿಗಳಿಗೆ ಅತಿಹೆಚ್ಚಿನ ಕಾಳಜಿಯನ್ನು ಆಯಾ ರಾಜ್ಯಗಳು ತೆಗೆದುಕೊಳ್ಳುವ ಭರವಸೆ ಇದೆ ಎಂದು ತಿಳಿಸಿದ್ದಾರೆ.