Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > HEALTH CARE ಯುವತಿಯರೇ, ಈ ಕಾಯಿಲೆ ಬಂದರೆ ಭಯ ಬೀಳೋದು ಬೇಡ
ಆರೋಗ್ಯದೇಶಪ್ರಮುಖಲೈಫ್‌ಸ್ಟೈಲ್

HEALTH CARE ಯುವತಿಯರೇ, ಈ ಕಾಯಿಲೆ ಬಂದರೆ ಭಯ ಬೀಳೋದು ಬೇಡ

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

WOMEN HEALTH ಅನಾರೋಗ್ಯದ ಬಗೆಗಿನ ತಪ್ಪು ತಿಳಿವಳಿಕೆಯಿಂದ 22 ವರ್ಷದ ಆರುಷಿ ತೀರಾ ಸಂಕಷ್ಟಕ್ಕೆ ಸಿಲುಕಿ ಈಗ ವೈದ್ಯರ ನೆರವಿನಿಂದ ಬಚಾವಾಗಿದ್ದಾರೆ.

22 ವರ್ಷದ ಆರುಷಿ ತನ್ನ ಕೆಲಸ ಮತ್ತು ಕೆರಿಯರ್ ನಡುವೆ ತುಂಬಾ ಬಿಜಿಯಾಗಿದ್ರು. ಮೈ ತೂಕ ಜಾಸ್ತಿ ಆಗೋದು ಮತ್ತು ಪೀರಿಯಡ್ಸ್ ಸರಿಯಾಗಿ ಆಗದಿರುವುದು ಆಕೆಗೆ ಹೊಸದೇನಲ್ಲ.

ಆದ್ರೆ ಇತ್ತೀಚೆಗೆ ಆಕೆಗೆ ಪದೇ ಪದೇ ಬಾತ್ ರೂಮ್‌ಗೆ ಹೋಗೋದು ಮತ್ತು ಇದ್ದಕ್ಕಿದ್ದಂತೆ ವಿಪರೀತ ಹಸಿವು ಆಗೋದು ಶುರು ಆಯ್ತು. ಆರುಷಿ ಇದನ್ನ ಕೂಡ PCOD ಇಂದಾನೇ ಆಗ್ತಿದೆ ಎಂದು ಅಂದುಕೊಂಡಿದ್ರು.

ಆದ್ರೆ ಯಾವಾಗ ಆಕೆ ಡಾಕ್ಟರ್ ಹತ್ತಿರ ಹೋಗಿ ಟೆಸ್ಟ್ ಮಾಡಿಸಿದ್ರೋ, ಆಗ ಗೊತ್ತಾಗಿದ್ದು ಶಾಕಿಂಗ್ ವಿಷಯ. ಆಕೆಯ ಬ್ಲಡ್ ಶುಗರ್ ಲೆವೆಲ್ ಅತಿಯಾಗಿದೆ ಎಂದು ರಿಪೋರ್ಟ್ ಬಂತು. ಇದನ್ನೇ ‘ಪ್ರಿ-ಡಯಾಬಿಟಿಸ್’ ಎನ್ನುತ್ತಾರೆ.

ನಿಜ, ಇಂದಿನ ಆಧುನಿಕ ದಿನಗಳಲ್ಲಿ ಹೆಣ್ಣುಮಕ್ಕಳಲ್ಲಿ PCOD ಅಥವಾ PCOS ಸಮಸ್ಯೆ ಎಷ್ಟು ಕಾಮನ್ ಆಗ್ಬಿಟ್ಟಿದೆ ಅಂದ್ರೆ, ಏನಾದ್ರೂ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದ್ರೂ “ಇದು ಹಾರ್ಮೋನ್ ಪ್ರಾಬ್ಲಂ ಇರಬೇಕು” ಎಂದು ನಾವೇ ಡಿಸೈಡ್ ಮಾಡ್ಕೊಳ್ತೀವಿ.

ಥಿಂಕ್‌ ಗ್ಲೋಬಲ್‌ ಹೆಲ್ತ್‌ ಅನ್ನೋ ಸಂಸ್ಥೆಯ 2024 ರ ರಿಪೋರ್ಟ್ ಪ್ರಕಾರ, ಇಂಡಿಯಾದ ಪ್ರತಿ 5 ಯುವತಿಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಇದೆ. ಆದ್ರೆ ಅದರೊಂದಿಗೆ ಇಲ್ಲೊಂದು ದೊಡ್ಡ ಅಪಾಯವಿದೆ.

PCOD ಲಕ್ಷಣಗಳ ಹಿಂದೆ ಇನ್ನೊಂದು ಸೈಲೆಂಟ್ ಕಾಯಿಲೆ ಅಡಗಿರಬಹುದು ಅನ್ನೋದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಅದುವೇ ‘ಪ್ರಿ-ಡಯಾಬಿಟಿಸ್’ ಅಥವಾ ಆರಂಭಿಕ ಮಧುಮೇಹ.
22 ವರ್ಷದ ಆರುಷಿ ಅನ್ನೋ ಯುವತಿಯ ಸ್ಟೋರಿ ನಮಗೆಲ್ಲ ಎಚ್ಚರಿಕೆಯಾಗಿ ಹೊರಹೊಮ್ಮಿದೆ.

ಖ್ಯಾತ ವೈದ್ಯೆ ಡಾ. ಶೀತಲ್ ಪಂಜಾಬಿ ಪ್ರಕಾರ, ಹೆಣ್ಣುಮಕ್ಕಳಿಗೆ ತೂಕ ಜಾಸ್ತಿ ಆದ್ರೆ ಅದು PCOD ಇರಬಹುದು. ಆದ್ರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗೋದು ಮತ್ತು ಸಡನ್ ಆಗಿ ಹಸಿವು ಆಗೋದು ಮಧುಮೇಹದ ಲಕ್ಷಣ.

ಇವತ್ತಿನ ಹುಡುಗಿಯರು ಏನಾದ್ರೂ ಪ್ರಾಬ್ಲಂ ಆದ್ರೆ ಸಾಕು ಫಸ್ಟ್ ಗೂಗಲ್‌ನಲ್ಲಿ ಸರ್ಚ್ ಮಾಡ್ತಾರೆ. ಆದ್ರೆ ಗೂಗಲ್ ನೋಡಿ ನೀವೇ ಡಾಕ್ಟರ್ ಆಗ್ಬೇಡಿ, ಸರಿಯಾದ ಲ್ಯಾಬ್ ಟೆಸ್ಟ್ ಮಾಡಿಸಿಕೊಳ್ಳೋದು ತುಂಬಾ ಮುಖ್ಯ ಎನ್ನುತ್ತಾರೆ ಡಾ.ಶೀತಲ್.

ಡಾ. ಸೃಷ್ಟಿ ಝಾ ಅವರು ಹೇಳೋಲುವ ಪ್ರಕಾರ, ಅವರ ಹತ್ತಿರ ಬರುವ ಪ್ರತಿ ಮೂರನೇ ಮಹಿಳಾ ಪೇಷಂಟ್ ಡಯಾಬಿಟಿಸ್ ಬರುವ ಹಂತದಲ್ಲಿದ್ದಾರೆ. ಇದಕ್ಕೆ ಮೇನ್ ರೀಸನ್ ಅಂದ್ರೆ ಲೇಟ್ ನೈಟ್‌ವರೆಗೆ ಮೊಬೈಲ್ ನೋಡೋದು, ಟೈಮ್‌ಗೆ ಸರಿಯಾಗಿ ಊಟ ಮಾಡದಿರೋದು ಮತ್ತು ಎಕ್ಸರ್ಸೈಜ್ ಮಾಡದಿರೋದು.

ನಮ್ಮ ಶರೀರದ ಗಡಿಯಾರ ತಪ್ಪಿದ್ರೆ ಈ ಹಾರ್ಮೋನ್ ಸಮಸ್ಯೆಗಳು ಶುರುವಾಗುತ್ತವೆ. ಪ್ಯಾಕೇಟ್ ಫುಡ್ ಮತ್ತು ಫ್ರೋಜನ್ ಫುಡ್ ತಿನ್ನೋದ್ರಿಂದ ಇನ್ಸುಲಿನ್ ಸಮಸ್ಯೆ ಇನ್ನೂ ಜಾಸ್ತಿ ಆಗುತ್ತೆ.

ಡಾ. ಸ್ವಾತಿ ಅಜಿತ್ ಗಾಯಕವಾಡ್ ಅವರು, ಜಂಕ್ ಫುಡ್ ಮತ್ತು ಅತಿಯಾದ ಎಣ್ಣೆ ಪದಾರ್ಥಗಳನ್ನ ಇಂದೇ ಬಿಟ್ಟುಬಿಡಿ. ಪ್ರತಿದಿನ ಊಟ ಆದ ಮೇಲೆ ಕನಿಷ್ಠ 10 ಮಿನಿಟ್ಸ್ ಆದ್ರೂ ವಾಕ್ ಮಾಡಿ ಎನ್ನುತ್ತಾರೆ.
ಊಟದಲ್ಲಿ ಪ್ರೋಟೀನ್ ಮತ್ತು ಹಸಿರು ತರಕಾರಿ ಜಾಸ್ತಿ ಇರಲಿ.
ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆ ಚೆನ್ನಾಗಿ ನಿದ್ದೆ ಮಾಡಿ.

ನಮ್ಮ ದೇಹ ಕೊಡುವ ಸಣ್ಣ ಸಣ್ಣ ಸಿಗ್ನಲ್‌ಗಳನ್ನ ನಾವು ಯಾವತ್ತೂ ನೆಗ್ಲೆಕ್ಟ್ ಮಾಡ್ಬಾರದು. ಆರುಷಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಇವತ್ತು ಆರೋಗ್ಯವಾಗಿ ಇದ್ದಾರೆ.

ಪ್ರಿ-ಡಯಾಬಿಟಿಸ್ ಅಂದ್ರೆ ಹೆದರಬೇಕಾಗಿಲ್ಲ, ಆದ್ರೆ ಜಾಗರೂಕತೆ ಇರಬೇಕು ಅಷ್ಟೇ. ನಿಮ್ಮ ಲೈಫ್ ಸ್ಟೈಲ್ ಬದಲಿಸಿ. ಸಣ್ಣ ಸಣ್ಣ ಬದಲಾವಣೆಗಳು ನಿಮ್ಮನ್ನು ದೊಡ್ಡ ಕಾಯಿಲೆಗಳಿಂದ ಕಾಪಾಡುತ್ತವೆ.

TAGGED:don't panic if you get this disease.Young women
Share This Article
Facebook Twitter Copy Link Print
Previous Article ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: ಪಾಕ್‌ನ 3 ಜೈಶ್ ಉಗ್ರರನ್ನು ಸುತ್ತುವರಿದ ಭಾರತೀಯ ಸೇನೆ
Next Article ಇನ್ಮುಂದೆ ಇನ್‌ಸ್ಟಾಗ್ರಾಮ್ ರೀಲ್ಸ್‌ ಐದು ಭಾಷೆಗಳಿಗೆ ಟ್ರಾನ್ಸ್​ಲೇಟ್​

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?