Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 9 ಮುಕ್ತಾಯಗೊಂಡಿದೆ. 106 ದಿನಗಳನ್ನು ಪೂರೈಸಿರುವ ತೆಲುಗು ಬಿಗ್‌ಬಾಸ್ ಸೀಸನ್ 9ರ ವಿಜೇತರಾಗಿ ಪವನ್ ಕಲ್ಯಾಣ್ ಪಡಲ ಹೊರ ಹೊಮ್ಮಿದ್ದಾರೆ. ಕನ್ನಡತಿ ತನುಜಾ ಪುಟ್ಟಸ್ವಾಮಿ ರನ್ನರ್ ಅಪ್ ಆಗಿದ್ದಾರೆ.
ಬಿಗ್‌ಬಾಸ್ ಫಿನಾಲೆಯವರೆಗೂ ತಲುಪಿದ ಇಬ್ಬರಿಗೂ ಕೊನೇ ಕ್ಷಣದಲ್ಲಿ ಅದೃಷ್ಟ ಕೈಕೊಟ್ಟಿದೆ. ಕೊನೆಯ ಹಂತದಲ್ಲಿ ತನುಜಾ ಪುಟ್ಟಸ್ವಾಮಿ ಅವರು ರನ್ನರ್ ಅಪ್ ಆಗಿದ್ದಾರೆ.
ಇನ್ನು, ಒಟ್ಟು ಐದು ಜನ ಸ್ಪರ್ಧಿಗಳು ಬಿಗ್‌ಬಾಸ್ ಫಿನಾಲೆಗೆ ಬಂದಿದ್ದರು. ಸಂಜನಾ ಗಲ್ರಾನಿ, ಕಲ್ಯಾಣ್, ಇಮಾನ್ಯುಯೆಲ್, ತನುಜಾ ಮತ್ತು ಪವನ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಐವರಲ್ಲಿ ಬಿಗ್‌ಬಾಸ್ ಸೀಸನ್ 9ರ ವಿಜೇತರು ಯಾರಾಗಲಿದ್ದಾರೆ ಎಂಬುವುದು ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿತ್ತು. ಭಾನುವಾರದ ಸಂಚಿಕೆಯಲ್ಲಿ (ಡಿಸೆಂಬರ್ 21) ವಿನ್ನರ್ ಹೆಸರನ್ನು ನಟ, ನಿರೂಪಕ ಅಕ್ಕಿನೇನಿ ನಾಗಾರ್ಜುನ್ ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಪಡಲ ಅವರು ₹40 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಮಾರುತಿ ಸುಜುಕಿ ವಿಕ್ಟೋರಿಸ್ ಕಾರನ್ನು ಗೆದ್ದುಕೊಂಡಿದ್ದಾರೆ.
https://www.instagram.com/p/DSiNNCBkqe2/?igsh=azdnMjVjNDc2YzNv
Actress Ragini Dwivedi ಕಷ್ಟ ಕಾಲದಲ್ಲಿ ಕನ್ನಡ ಚಿತ್ರರಂಗದವರು ಕೈಹಿಡಿಯಲಿಲ್ಲ: ರಾಗಿಣಿ ಕಣ್ಣೀರು