Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮಿಲ್ಕ್‌ ಟೀ, ಗ್ರೀನ್‌ ಟೀ, ಬ್ಲ್ಯಾಕ್‌ ಟೀ; ಆರೋಗ್ಯಕ್ಕೆ ಯಾವ ಚಹಾ ಬೆಸ್ಟ್?
ಆರೋಗ್ಯ

ಮಿಲ್ಕ್‌ ಟೀ, ಗ್ರೀನ್‌ ಟೀ, ಬ್ಲ್ಯಾಕ್‌ ಟೀ; ಆರೋಗ್ಯಕ್ಕೆ ಯಾವ ಚಹಾ ಬೆಸ್ಟ್?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಭಾರತದಲ್ಲಿ ಜನ ಊಟ ಇಲ್ದೆ ಬೇಕಾದ್ರೂ ಹೇಗೋ ಒಂದು ದಿನ ಕಳಿತಾರೇ, ಆದ್ರೆ ಹೊತ್ತೊತ್ತಿಗೆ ಟೀ-ಕಾಫಿ ಇಲ್ದೆ ಇದ್ರೆ ಅದೇನೋ ಕಳಕೊಂಡು ಹಾಗೆ ಇರ್ತಾರೆ. ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಒಂದು ಲೋಟ ಬಿಸಿ ಬಿಸಿ ಚಹಾ ಅಥವಾ ಕಾಫಿ ಬೇಕು. ಇತ್ತೀಚೆಗೆ ಆರೋಗ್ಯದ ದೃಷ್ಟಿಯಿಂದ ಗ್ರೀನ್‌ ಟೀ, ಬ್ಲ್ಯಾಕ್‌ ಟೀ ಕೂಡ ಟ್ರೆಂಡಿಂಗ್‌ನಲ್ಲಿದೆ.
ಪ್ರತಿನಿತ್ಯ ಎರಡು ಮೂರು ಲೋಟ ಟೀ ಕುಡಿಯುವಾಗ ಸ್ವಲ್ಪ ಆರೋಗ್ಯದ ದೃಷ್ಟಿಯಿಂದ ಕೂಡ ಯೋಚನೆ ಮಾಡಬೇಕು. ಈ ನಿಟ್ಟಿನಲ್ಲಿ ದೇಹಕ್ಕೆ ಹಾಲಿನ ಟೀ, ಗ್ರೀನ್‌ ಟೀ, ಬ್ಲ್ಯಾಕ್‌ ಟೀ ಇವುಗಳಲ್ಲಿ ಯಾವುದು ಬೆಸ್ಟ್‌ ಅಂತಾ ತಿಳಿಯೋದು ಉತ್ತಮ.

ಆರೋಗ್ಯಕ್ಕೆ ಯಾವ ಚಹಾ ಉತ್ತಮ? ಯಾವುದನ್ನು ಯಾವಾಗ ಕುಡಿಬೇಕು?
ಹಾಲು ಹಾಕಿ ಮಾಡಿದ ಟೀ
ಮಿಲ್ಕ್ ಚಹಾ ಭಾರತೀಯ ಮನೆಗಳಲ್ಲಿ ಅತ್ಯಂತ ಜನಪ್ರಿಯ ಚಹಾ ರೂಪವಾಗಿದೆ. ಟೀ ಪೌಡರ್‌, ಹಾಲು, ಸಕ್ಕರೆ ಹಾಕಿ ಮಾಡುವ ಈ ಗಟ್ಟಿ ಚಹಾ ಪ್ರತಿಯೊಬ್ಬರ ಫೇವ್‌ರೇಟ್.‌ ಬಿಸಿ ಬಿಸಿ ಮಿಲ್ಕ್‌ ಟೀಯನ್ನು ಒಂದೊಂದೇ ಸಿಪ್‌ ಕುಡಿಯುತ್ತಿದ್ದರೆ ಅದರ ಮಜವೇ ಬೇರೆ.
ಆರೋಗ್ಯದ ವಿಷಯಕ್ಕೆ ಬಂದ್ರೆ ಇದು ಅಷ್ಟೇನೂ ಒಳ್ಳೆಯದಲ್ಲ. ಚಹಾಕ್ಕೆ ಹಾಲು ಸೇರಿಸುವುದರಿಂದ ಚಹಾದ ನೈಸರ್ಗಿಕ ಸಂಯುಕ್ತಗಳು ದೇಹದಿಂದ ಹೀರಿಕೊಳ್ಳುವ ವಿಧಾನವನ್ನು ಬದಲಾಯಿಸುತ್ತದೆ ಎನ್ನುತ್ತಾರೆ ತಜ್ಞರು. ಇದಕ್ಕೆ ಪರಿಹಾರ ಏನಪ್ಪಾ ಅಂದ್ರೆ ನೀವು ಊಟ, ತಿಂಡಿ ಜೊತೆಗೆ ಈ ಟೀಯನ್ನು ಕುಡಿಯಬಾರದು, ಬದಲಿಗೆ ಊಟದ ನಡುವೆ ಇದನ್ನು ಕುಡಿಯಬಹುದು. ಆಗ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುವುದಿಲ್ಲ.

ಬ್ಲ್ಯಾಕ್‌ ಟೀ
ಮಿಲ್ಕ್‌ ಟೀಗಿಂತ ಬೆಸ್ಟ್‌ ಈ ಚಹಾ. ಕಪ್ಪು ಚಹಾವನ್ನು ಸಂಪೂರ್ಣವಾಗಿ ಆಕ್ಸಿಡೀಕರಿಸಲಾಗುತ್ತದೆ, ಇದು ಬಲವಾದ ರುಚಿ ಮತ್ತು ಗಾಢ ಬಣ್ಣವನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಹಾಲು ಇಲ್ಲದೆ ಅಥವಾ ಕಡಿಮೆ ಹಾಲಿನೊಂದಿಗೆ ಸೇವಿಸಲಾಗುತ್ತದೆ.
ಇದನ್ನು ಕೂಡ ಊಟದ ಜೊತೆ ಕುಡಿಯಬಾರದು. ಊಟ ಮತ್ತು ಟೀ ನಡುವೆ ಎರಡು ಮೂರು ತಾಸು ಬ್ರೇಕ್‌ ತೆಗೆದುಕೊಂಡು ಕುಡಿಯುವುದರಿಂದ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ಗ್ರೀನ್‌ ಟೀ
ಗ್ರೀನ್‌ ಟೀಯನ್ನು ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಹಾಲು ಅಥವಾ ಸಕ್ಕರೆ ಇದಕ್ಕೆ ಅವಶ್ಯಕತೆ ಇಲ್ಲ. ಈ ಮೂಲಕ ಗ್ರೀನ್‌ ಟೀ ತನ್ನ ನೈಸರ್ಗಿಕ ಸಂಯುಕ್ತಗಳನ್ನು ಉಳಿಸಿಕೊಳ್ಳುತ್ತದೆ. ಆರೋಗ್ಯಕರ ಪಾನೀಯವನ್ನು ಹುಡುಕುವವರಿಗೆ ಈ ಟೀ ಬೆಸ್ಟ್‌ ನೋಡಿ.
ಹಸಿರು ಚಹಾದಲ್ಲಿ ಕಡಿಮೆ ಕೆಫೀನ್ ಇರುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಕಪ್ಪು ಅಥವಾ ಹಾಲಿನ ಚಹಾಕ್ಕಿಂತ ಭಿನ್ನವಾಗಿ, ಇದನ್ನು ಊಟದ ಜೊತೆ ಸೇವಿಸಬಹುದು.
ಆರೋಗ್ಯಕ್ಕೆ ಒಳ್ಳೆಯದು ಅಂತಾ ಹೆಚ್ಚು ಸೇವನೆ ಮಾಡಬಾರದು, ಇದನ್ನು ದಿನಕ್ಕೆ ಎರಡರಿಂದ ಮೂರು ಕಪ್‌ಗಳಿಗೆ ಸೀಮಿತಗೊಳಿಸುವಂತೆ ಪರಿಣಿತರು ಶಿಫಾರಸು ಮಾಡುತ್ತಾರೆ.

ನಿಯಮಿತ ಸೇವನೆಗೆ ಯಾವ ಚಹಾ ಆರೋಗ್ಯಕರ?
ಪ್ರತಿಯೊಂದು ವಿಧದ ಚಹಾವು ಸಮತೋಲಿತ ದಿನಚರಿಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ:
ಆಂಟಿಆಕ್ಸಿಡೆಂಟ್ ಪ್ರಯೋಜನಗಳಿಗಿಂತ ಹೆಚ್ಚಾಗಿ, ನಿಮಗೆ ಖುಷಿ, ಸಂತೃಪ್ತಿ ಬೇಕು ಎಂದರೆ ಊಟಗಳ ನಡುವೆ ಮಿಲ್ಕ್ ಚಾಯ್ ಸೂಕ್ತವಾಗಿದೆ.
ಇನ್ನು ಬ್ಲ್ಯಾಕ್‌ ಟೀ ಸುವಾಸನೆ ಮತ್ತು ಪೋಷಣೆಯ ಸಮತೋಲನವನ್ನು ನೀಡುತ್ತದೆ. ಹಸಿರು ಚಹಾವು ಅದರ ಉತ್ಕರ್ಷಣ ನಿರೋಧಕ ಅಂಶಕ್ಕೆ ಹೆಸರಾಗಿದ್ದು, ಮಿತವಾದ ಸೇವನೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಯಾವ್ಯಾವ ಟೀ ಏನ್‌ ಪ್ರಯೋಜನ ಅಂತಾ ಗೊತ್ತಾಯ್ತಲ್ವಾ? ಇನ್ನುಮುಂದೆ ಆಯ್ಕೆ ನಿಮ್ಮದು.

Actress Ragini Dwivedi ಕಷ್ಟ ಕಾಲದಲ್ಲಿ ಕನ್ನಡ ಚಿತ್ರರಂಗದವರು ಕೈಹಿಡಿಯಲಿಲ್ಲ: ರಾಗಿಣಿ‌ ಕಣ್ಣೀರು

TAGGED:black tea; which tea is better for health? When should you drink which?green teaMilk tea
Share This Article
Facebook Twitter Copy Link Print
Previous Article ತೆಲುಗು ಬಿಗ್‌ಬಾಸ್‌ ರನ್ನರ್ ಅಪ್ ಆದ ಕನ್ನಡತಿ ತನುಜಾ
Next Article ಮುಖದ ಮೇಲಿನ ಕೂದಲುಗಳು ತೆಗೆಯಲು ಜಸ್ಟ್ ಈ ರೀತಿ ಮಾಡಿ ಸಾಕು

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?