newsics.com
ತುರ್ಕಮೆನಿಸ್ತಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರೀ ಮುಖಭಂಗ ಅನುಭವಿಸಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾಗಲು ಸುಮಾರು 40 ನಿಮಿಷಗಳ ಕಾಲ ಕಾದು ಸುಸ್ತಾದ ಶಹಬಾಜ್ ಷರೀಫ್ ಅವರ ವಿಡಿಯೋ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗುತ್ತಿದೆ.
ಹಿಂದಿನ ಸೋವಿಯತ್ ರಾಷ್ಟ್ರದ ತಟಸ್ಥತೆಯ 30ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ತುರ್ಕಮೆನಿಸ್ತಾನ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರಧಾನ ಮಂತ್ರಿ ಮುಜುಗರಕ್ಕೊಳಗಾಗಿದ್ದಾರೆ.
ಪುಟಿನ್ ಸಭೆಗೆ ನುಗ್ಗಿದ ಪಾಕ್ ಪ್ರಧಾನಿ!
ಪಾಕ್ ಪ್ರಧಾನಿ ಶಹಬಾಜ್ ಷರೀಫ್, ರಷ್ಯಾ ಅಧ್ಯಕ್ಷರ ಭೇಟಿಗಾಗಿ ಸುಮಾರು 40 ನಿಮಿಷ ಕಾಯುತ್ತ ಕುಳಿತಿದ್ದರು. ಈ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಟರ್ಕಿ ಅಧ್ಯಕ್ಷ ಪಕ್ಕದ ಹಾಲ್ನಲ್ಲಿ ಸಭೆ ನಡೆಸುತ್ತಿದ್ದರು. ಕಾದು ಕಾದು ಸುಸ್ತಾಗಿ ಹೋಗಿದ್ದ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಾಳ್ಮೆಗೆಟ್ಟು ಪುಟಿನ್ ಸಭೆಗೆ ಏಕಾಏಕಿ ನುಗ್ಗಿದ್ದಾರೆ. ಬಳಿಕ ಕೆಲ ನಿಮಿಷಗಳ ನಂತರ ಅಲ್ಲಿಂದ ಹೊರ ನಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಹಿಂದೆ ಕೂಡ ಪಾಕ್ ಪ್ರಧಾನಿ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದರು. ಉಜ್ಬೇಕಿಸ್ತಾನ್‌ನಲ್ಲಿ ನಡೆದಿದ್ದ ಪ್ರಾದೇಶಿಕ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೆಡ್ಫೋನ್ ಹಾಕಿಕೊಳ್ಳಲು ಬರದೆ ಪರದಾಡಿದ ಘಟನೆ ನಡೆದಿತ್ತು.
https://youtu.be/oeVrcLPs1uQ?si=TDGFVkevXJJkNwI1