Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಳೆದ ವಾರ ಬಿಗ್‌ಬಾಸ್‌ನಿಂದ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿ ಹೊರಗಡೆ ನಡೆದಿದ್ದರು. ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ.
ಈ ವಾರ ಯಾರು ಎಲಿಮಿನೇಟ್ ಆದವರು ಯಾರು?
ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್ ಈ 10 ಮಂದಿ ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಭಾನುವಾರದ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ಸ್ಪರ್ಧಿಗಳು ಎಲಿಮಿನೇಷ್‌ನ ಭಯದಲ್ಲಿದ್ದಾರೆ. ಸದ್ಯ ಈ ವಾರ ಘಟಾನುಘಟಿಗಳು ನಾಮಿನೇಟ್ ಆಗಿದ್ದು, ಯಾರು ಮನೆಯಿಂದ ಆಚೆ ಬರಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ.
ಸದ್ಯದ ಮಾಹಿತಿ ಪ್ರಕಾರ, ಈ ವಾರ ಬಿಗ್ ಬಾಸ್ ಮನೆಯಿಂದ ರಿಷಾ ಗೌಡ ಅವರು ಅವರು ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ.
ರಿಷಾ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಭಾರೀ ಸದ್ದು ಮಾಡಿದ್ದರು. ಆದರೆ ಆ ಬಳಿಕ ಸೈಲೆಂಟ್ ಆಗಿದ್ದರು. ಮನೆಯಲ್ಲಿ ಅನೇಕರ ಟಾರ್ಗೆಟ್ ಆಗಿದ್ದರು.
ಗೇಮ್‌ಗಿಂತ ಅವರ ದೊಡ್ಡ ಧ್ವನಿಯೇ ಮನೆಯಲ್ಲಿ ಸದ್ದು ಮಾಡುತ್ತಿತ್ತು. ಗಿಲ್ಲಿ ನಟನ ಜತೆ ಬಟ್ಟೆ ಮುಟ್ಟಿದ್ದ ವಿಚಾರಕ್ಕೆ ಹಲ್ಲೆ ಮಾಡಿದ್ದರು. ಇದಕ್ಕೆ ಕಣ್ಣೀರು ಹಾಕಿ ಕ್ಷಮೆ ಕೇಳಿದ್ದರು. ಈ ವಿಚಾರ ಬಿಗ್ ಬಾಸ್ ಮನೆಯ ಆಚೆಗೂ ಸುದ್ದಿ ಆಗಿತ್ತು.
ಇನ್ನು ಅಶ್ವಿನಿ, ಜಾನ್ವಿ, ಸೂರಜ್ ಜತೆನೂ ಅವರ ಜತೆನೂ ರಿಷಾ ವಾಗ್ವಾದ ನಡೆಸಿದ್ದರು. ಸ್ಪರ್ಧಿಗಳ ಮನೆಯಿಂದ ಬಂದ ಪತ್ರಗಳನ್ನು ಹರಿದು ಹಾಕಿದ್ದರು. ಇದಾದ ಬಳಿಕ ಸೂರಜ್ ಜತೆ ದೊಡ್ಡದಾಗಿ ಜಗಳ ಮಾಡಿಕೊಂಡಿದ್ದರು..
ನೈಜೀರಿಯಾ ಶಾಲೆ ಮೇಲೆ ಬಂದೂಕುಧಾರಿಗಳ ದಾಳಿ: 200ಕ್ಕೂ ಹೆಚ್ಚು ಮಕ್ಕಳು ಕಿಡ್ನಾಪ್