Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಹಾಸ್ಯ ಕಲಾವಿದ ಶಿವಕುಮಾರ್ ಹಾಗೂ ಮಾನಸ ಗುರುಸ್ವಾಮಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇದೇ ನವೆಂಬರ್ 27ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮಾನಸ ಗುರುಸ್ವಾಮಿ ಹಾಗೂ ಶಿವಕುಮಾರ್ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
ಮಾನಸ ಗುರುಸ್ವಾಮಿ ಹಾಗೂ ಶಿವಕುಮಾರ್ ಗಿಚ್ಚಿ ಗಿಲಿಗಿಲಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಇಬ್ಬರ ಪ್ರೀತಿ ವಿಚಾರ ಹರಿದಾಡುತ್ತಲೇ ಇತ್ತು. ಆದರೆ ಶಿವು ಹಾಗೂ ಮಾನಸ ಅವರು ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರಲಿಲ್ಲ. ಇದೀಗ ಗಿಚ್ಚಿ ಗಿಲಿಗಿಲಿ ಮಾನಸ ಹಾಗೂ ಶಿವಕುಮಾರ್ ಜೋಡಿ ಸದ್ಯದಲ್ಲೇ ಮದುವೆ ಆಗಲಿದ್ದಾರೆ.
