Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube
newsics.com
ಪಿಜಿ ಬಿಟ್ಟು ಹೋಗುವ ವೇಳೆ ಡೆಪಾಸಿಟ್ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಮೇಲೆ ಪಿಜಿ ಮಾಲೀಕರು ಹಲ್ಲೆ ಮಾಡಿದಂತಹ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಮಹಿಳಾ ಪಿಜಿಯೊಂದರ ಆಪರೇಟರ್ ಯುವತಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲಿದ್ದ ಯುವತಿಯರಿಗೂ ಕೂಡ ಪಿಜಿ ಮಾಲಕಿಯ ವರ್ತನೆಯಿಂದ ಶಾಕ್ ಆಗಿದ್ದು, ಗಾಬರಿಯಾಗಿ ನೋಡುತ್ತಾ ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ವರದಿಗಳ ಪ್ರಕಾರ ಈ ಪಿಜಿಯಲ್ಲಿ ತನ್ನ ಕೊಠಡಿಯನ್ನು ಖಾಲಿ ಮಾಡಿದ ನಂತರ, ವಿದ್ಯಾರ್ಥಿನಿ ತನ್ನ ಭದ್ರತಾ ಠೇವಣಿಯನ್ನು ಮರಳಿ ಪಡೆಯಲು ಈ ಪಿಜಿ ಆಪರೇಟರ್ ಬಳಿ ಬಂದಿದ್ದಾಳೆ. ತಾನು ಪಿಜಿ ಖಾಲಿ ಮಾಡಿರುವುದರಿಂದ ಭದ್ರತಾ ಠೇವಣಿ ವಾಪಸ್ ನೀಡುವಂತೆ ಕೇಳಿದ್ದಾಳೆ. ಈ ವೇಳೆ ಅವರಿಬ್ಬರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪಿಜಿ ಆಪರೇಟರ್ ಹುಡುಗಿಯನ್ನು ಹೊಡೆಯಲು ಆರಂಭಿಸಿದ್ದಾರೆ. ವಿಡಿಯೊದಲ್ಲಿ, ಆಕೆ ಹುಡುಗಿಯ ಕೈ ಹಿಡಿದು ಮುಖಕ್ಕೆ ಹೊಡೆಯುವುದನ್ನು ಕಾಣಬಹುದು. ಅಲ್ಲದೇ ಹುಡುಗಿಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ.
ಇನ್ನು ಪಿಜಿ ಖಾಲಿ ಮಾಡಲು ಸಹಾಯ ಮಾಡುವುದಕ್ಕೆ ಹುಡುಗಿಯ ಜೊತೆ ಹೊರಗಿನಿಂದ ಬಂದ ಯುವಕನೊಬ್ಬ ಈ ವಿಡಿಯೊವನ್ನು ಹೊರಗಿನಿಂದ ರೆಕಾರ್ಡ್ ಮಾಡಿದ್ದಾನೆ. ಪುರುಷರಿಗೆ ಒಳಗೆ ಹೋಗಲು ಅವಕಾಶವಿಲ್ಲದ ಕಾರಣ ಆತ ಅಸಹಾಯಕನಾಗಿ ಹೊರಗೆ ನಿಂತಿದ್ದ. ವಿಡಿಯೊ ವೈರಲ್ ಆದ ನಂತರ, ಪಿಜಿ ಆಪರೇಟರ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದು, ಕೇಸ್ ದಾಖಲಿಸುವಂತೆ ಅನೇಕರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೆಕ್ಟರ್ 58 ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ಕಣ್ಣಿನ ಗಾಯಕ್ಕೆ ‘ಫೆವಿಕ್ವಿಕ್’ ಹಾಕಿದ ಡಾಕ್ಟರ್; ಆಗಿದ್ದೇನು?