Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube
newsics.com
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೊರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ವೆಂಕಟರಾಮಯ್ಯ ಎಂದು ಗುರುತಿಸಲಾಗಿದೆ. ವೆಂಕಟರಾಮಪ್ಪ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಮಡಿವಾಳ ಮಾರ್ಕೆಟ್ ರೋಡ್‌ಗೆ ತರಕಾರಿ ತರಲು ಹೋದಾಗ ಈ ಅಪಘಾತ ನಡೆದಿದೆ.
ಸದ್ಯ ವೆಂಕಟರಾಮಪ್ಪ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ. ಮಡಿವಾಳ ಬಸ್ ನಿಲ್ದಾಣದಲ್ಲಿ ತರಕಾರಿ ತೆಗೆದುಕೊಂಡು ಬಂದಿದ್ದ ವೆಂಕಟರಾಮಪ್ಪ ಬಸ್ ಹತ್ತಲು ನಿಂತಿದ್ದರು. ಈ ವೇಳೆ ಎಸ್‌ಎಂಬಿಟಿ ರೈಲ್ವೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್ಗೆ ಕಾರ್ಯಾಚರಣೆಗೊಳ್ಳುತ್ತಿದ್ದ ಬಿಎಂಟಿಸಿ ಬಸ್ ಫುಟ್‌ಪಾತ್‌ನಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದಿದೆ. ಮೊದಲು ಟಾಟಾ ಎಸಿ ಗಾಡಿಗೆ ಡಿಕ್ಕಿಯಾಗಿ ಬಳಿಕ ವೆಂಕಟರಾಮಪ್ಪಗೆ ಬಸ್ ಗುದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮಡಿವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸೆಕ್ಯೂರಿಟಿ ಡೆಪಾಸಿಟ್ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಮೇಲೆ ಪಿಜಿ ಮಾಲೀಕರಿಂದ ಹಲ್ಲೆ