Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?
ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಇತ್ತೀಚಿನ ಸೋಶಿಯಲ್ ಮೀಡಿಯಾ ಟ್ರೆಂಡ್ ನೋಡಿದರೆ,  ಸಾಮಾನ್ಯ ನೈಟಿಗೆ ಈಗ ಅನಿರೀಕ್ಷಿತವಾಗಿ ಎರಡನೇ ಜನ್ಮ ಸಿಕ್ಕಂತಾಗಿದೆ. ವಿಶೇಷವೆಂದರೆ, ಈ ಬಾರಿ ಜೆನ್-ಝಿ (Gen Z) ಹುಡುಗರು ಈ ಟ್ರೆಂಡ್ ಮುನ್ನಡೆಸುತ್ತಿದ್ದಾರೆ.

ವೈರಲ್​ ವಿಡಿಯೋಗಳಲ್ಲೇನಿದೆ?

ಇಂಟರ್ನೆಟ್​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋಗಳಲ್ಲಿ ಯುವಕರು ಬಣ್ಣ ಬಣ್ಣದ ನೈಟಿಗಳನ್ನು ಧರಿಸಿ ಪ್ರಯಾಣಿಸುತ್ತಿರುವುದು, ಶಾಪಿಂಗ್​ ಮಾಡುವುದು, ಬೈಕ್​ನಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ. ಒಂದು ಕಾಲದಲ್ಲಿ ಕೇವಲ ಮನೆಗೆಲಸಕ್ಕೆ ಸೀಮಿತವಾಗಿದ್ದ ಉಡುಪು, ಇಂದು ಇಂಟರ್ನೆಟ್‌ನ ಅತ್ಯಂತ ಜನಪ್ರಿಯ ಸಮ್ಮರ್ ಫ್ಯಾಷನ್ ಉಡುಪಾಗಿ ಹೊರಹೊಮ್ಮುತ್ತಿದೆ.

ನೈಟಿ ವಿಕಸನಗೊಂಡಿದ್ದೇಗೆ?

ಬ್ರಿಟನ್‌ನ ವಿಕ್ಟೋರಿಯನ್ ಯುಗದ ನೈಟ್‌ಗೌನ್‌ಗಳಿಂದ ಇದು ಪ್ರೇರಿತವಾಗಿದೆ. ಆರಂಭದಲ್ಲಿ ಈ ಬಟ್ಟೆಯನ್ನು ಕೇವಲ ಮಲಗುವಾಗ ಮಾತ್ರ ಧರಿಸುವ ಬಟ್ಟೆಯಾಗಿತ್ತು. ಆದರೆ, ಭಾರತದ ಉಷ್ಣವಲಯದ ಹವಾಮಾನ, ತೇವಾಂಶ ಮತ್ತು ಧಾವಂತದ ಬೇಸಿಗೆಗೆ ಇದು ಅತ್ಯಂತ ಸೂಕ್ತವಾಗಿ ಹೊಂದಿಕೊಂಡಿತು. ಇದರ ವಿನ್ಯಾಸ, ಸುಲಭವಾಗಿ ತೊಳೆಯಬಹುದಾದ ಮತ್ತು ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದ್ದ ಈ ಉಡುಪು ನಿಧಾನವಾಗಿ ಬೆಡ್​ರೂಂನಿಂದ ಹೊರಬಂದು, ಇಡೀ ದಿನ ಧರಿಸುವ ಮನೆ ಉಡುಪಾಗಿ ಬದಲಾಯಿತು. ಸಾಮಾನ್ಯ ಮಹಿಳೆಯರೇ ತಮ್ಮ ದಿನನಿತ್ಯದ ಅನುಕೂಲಕ್ಕಾಗಿ ಇದನ್ನು ಸೃಷ್ಟಿಸಿಕೊಂಡರು.

ಗಲ್ಫ್ ದೇಶಗಳ ಲಿಂಕ್ ಮತ್ತು ಕೇರಳದ ಕನೆಕ್ಷನ್

ನೈಟಿ ಮೂಲತಃ ಭಾರತೀಯ ಉಡುಪಲ್ಲ. 1960 ಮತ್ತು 1970 ರ ದಶಕದಲ್ಲಿ ಅಂತರರಾಷ್ಟ್ರೀಯ ಫ್ಯಾಷನ್ ಕ್ರಾಂತಿಯ ಸಮಯದಲ್ಲಿ ಇದು ಜಗತ್ತಿಗೆ ಪರಿಚಯವಾಯಿತು. ವಸಾಹತುಶಾಹಿ ಮತ್ತು ನಂತರದ ಅವಧಿಯಲ್ಲಿ ಪಾಶ್ಚಿಮಾತ್ಯ ಫ್ಯಾಷನ್ ಪ್ರಭಾವದಿಂದಾಗಿ ಇದು ಭಾರತವನ್ನು ಪ್ರವೇಶಿಸಿತು. ಸೀರೆ, ಸಲ್ವಾರ್ ಕಮೀಜ್ ಅಥವಾ ಲೆಹೆಂಗಾದಂತೆ ನೈಟಿ ಭಾರತದ ಸಾಂಪ್ರದಾಯಿಕ ಉಡುಪಾಗಿರಲಿಲ್ಲ.

ಭಾರತದಲ್ಲಿ ನೈಟಿಯ ಜನಪ್ರಿಯತೆಯ ಬಗ್ಗೆ ಮಾತನಾಡುವಾಗ ಕೇರಳದ ಪಾತ್ರ ಹೆಚ್ಚಿನದಿದೆ. 1970 ಮತ್ತು 1980 ರ ದಶಕದ ಗಲ್ಫ್​ ದೇಶಕ್ಕೆ ಕೆಲಸಕ್ಕಾಗಿ ತೆರಳುತ್ತಿದ್ದ ಮಲಯಾಳಿ ಪುರುಷರು ತಮ್ಮ ಕುಟುಂಬದ ಮಹಿಳೆಯರಿಗಾಗಿ ಅಲ್ಲಿನ ಸಡಿಲವಾದ ಮತ್ತು ಆರಾಮದಾಯಕವಾದ ಉಡುಪುಗಳನ್ನು ಉಡುಗರೆಯಾಗಿ ತರಲು ಪ್ರಾರಂಭಿಸಿದ್ದರು. ಅಲ್ಲಿಂದ ಇದು ಇಡೀ ದಕ್ಷಿಣ ಭಾರತ ಮತ್ತು ದೇಶಾದ್ಯಂತ ಮನೆ ಮನೆಗಳಿಗೆ ಹರಡಿತು.
“ಮಮ್ಮಿ ಡ್ರೆಸ್” ನಿಂದ ಇಂಟರ್ನೆಟ್ ಫ್ಯಾಷನ್ ವರೆಗೆ

ಚಲನಚಿತ್ರಗಳು, ಟಿವಿ ಶೋಗಳು ಮತ್ತು ಮೀಮ್‌ಗಳಲ್ಲಿ ನೈಟಿಯನ್ನು ಭಾರತೀಯ ಗೃಹಿಣಿಯರ ‘ಯೂನಿಫಾರ್ಮ್’ ಎಂಬಂತೆ ಬಿಂಬಿಸಲಾಗುತ್ತಿತ್ತು. ಇದನ್ನು ಫ್ಯಾಷನ್ ರಹಿತ ಉಡುಪು ಎಂದು ನೋಡಲಾಗುತ್ತಿತ್ತು. ಆದರೆ ಇಂದಿನ ಸೋಶಿಯಲ್ ಮೀಡಿಯಾ ಬಳಕೆದಾರರು ಈ ನೈಟಿಯನ್ನೇ ಬಳಸಿ ಟ್ರೆಂಡ್​ ಸೃಷ್ಟಿಸುತ್ತಿದ್ದಾರೆ.
ಇಂದಿನ ಯುವ ಪೀಳಿಗೆಯು ಫಾರ್ಮಾಲಿಟಿಗಿಂತ ಹೆಚ್ಚಾಗಿ ಆರಾಮಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಸಡಿಲವಾದ ಶರ್ಟ್‌ಗಳು, ಲೌಂಜ್‌ವೇರ್ ಮತ್ತು ಅಥ್ಲೀಷರ್ ಉಡುಪುಗಳ ಹವಾ ಇರುವ ಈ ಕಾಲದಲ್ಲಿ, ನೈಟಿಯ ಮರುಬರವು ಅಚ್ಚರಿಯೇನಲ್ಲ. ಅಂತಿಮವಾಗಿ, ತಂಪಾದ, ಗಾಳಿಯಾಡುವ ಮತ್ತು ಅತ್ಯಂತ ಅಗ್ಗದ ಬೆಲೆಯ ಈ ಉಡುಪು ಭಾರತೀಯ ಬೇಸಿಗೆಗೆ ಪರ್ಫೆಕ್ಟ್ ಮ್ಯಾಚ್ ಆಗಿದೆ.

 

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

TAGGED:Nightie craze taking over Instagram reels: What's the secret to this strange trend that's quietly spreading across India? Nightie Trend
Share This Article
Facebook Twitter Copy Link Print
Previous Article ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
Next Article ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

Popular Posts

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read

You Might Also Like

ವೈರಲ್

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?