Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಂಡ್ಯ: ಒಂಟಿ ಸಲಗವೊಂದು ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿಯ ಪಯನಿಯರ್ ಜಂಕೋ ಲಿಮಿಟೆಡ್ ಪವರ್ ಜನರೇಷನ್ ಯೂನಿಟ್‌ನ ನಾಲೆಯಲ್ಲಿ ಸಿಲುಕಿ ಪರದಾಡಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಯನ್ನು ನಾಲೆಯಿಂದ ಹೊರಕ್ಕೆ ತೆಗೆಯುವ ಪ್ರಯತ್ನ ನಡೆಸಿದ್ದಾರೆ.
ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಆನೆಯನ್ನು ನಾಲೆಯ ಗೇಟ್ ಮುಖಾಂತರ ಹೊರತೆಗೆಯಲು ಸಾಧ್ಯವಾಗಲಿಲ್ಲ.
ಕಾವೇರಿ ನದಿಯ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಕೆ ಆರ್ ಎಸ್ ಹಾಗೂ ಕಬನಿ ಜಲಾಶಯದ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಜಲಾಶಯದಿಂದ ನೀರಿನ ಪ್ರಮಾಣ ತಗ್ಗಿದ ನಂತರ ಆನೆಯನ್ನು ಹೊರೆತೆಗೆಯಲು ಯತ್ನಿಸಲಾಗುತ್ತದೆ.
ಆನೆಯ ಸುರಕ್ಷತೆ ದೃಷ್ಠಿಯಿಂದ ಆಹಾರ ಪೂರೈಸಲಾಗುತ್ತಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆ ಹೊರತೆಗೆಯುವ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೈನ್ ಮತ್ತು ಡ್ರೋನ್ ಸಹಾಯದಿಂದ ಆನೆಯನ್ನು ಗೇಟ್ ಮುಖಾಂತರ ಹೊರ ತೆಗೆಯಲು ಎಲ್ಲ ರೀತಿಯಲ್ಲೂ ಪ್ರಯತ್ನ ನಡೆಸಿದ್ದಾರೆ.
ಅತ್ಯಾಧುನಿಕ ಹಾಗೂ ಹೆಚ್ಚಿನ ಸಾಮರ್ಥ್ಯದ ಕ್ರೇನ್ ಬಳಸಿ ಆನೆಯನ್ನು ಹೊರತೆಗೆಯಲು ಚಿಂತನೆ ನಡೆಸಲಾಗಿದೆ.
Be careful ಕೆಲಸದ ವೇಳೆ ಹುಷಾರಾಗಿರಿ: ರೋಟೋವೇಟರ್ ಯಂತ್ರಕ್ಕೆ ಸಿಲುಕಿ ರೈತನ ದೇಹ ಛಿದ್ರ ಛಿದ್ರ
ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿದ ಅಶ್ವಿನಿ ಗೌಡ ಹಾಗೂ ಜಾಹ್ನವಿ – ತಾಳ್ಮೆ ಕಳೆದುಕೊಂಡ ಬಿಗ್ ಬಾಸ್
ದೆಹಲಿಯಲ್ಲಿ ಕಾರು ಸ್ಫೋಟ ಕೇಸ್ : ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ