Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅಶ್ವಿನಿ ಗೌಡ ಹಾಗೂ ಆ್ಯಂಕರ್ ಜಾನ್ವಿ ಕಳೆದ ವಾರವಷ್ಟೇ ಸುದೀಪ್ ಅವರಿಂದ ಬೈಸಿಕೊಂಡಿದ್ದರು. ಇದಕ್ಕೆ ಕಾರಣ ಆಗಿದ್ದು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದು. ಸುದೀಪ್ ಬೈದು ಕೆಲವೇ ಗಂಟೆಗಳಲ್ಲಿ ಅಶ್ವಿನಿ ಹಾಗೂ ಜಾನ್ವಿ ಮತ್ತದೇ ತಪ್ಪು ಮಾಡಿದ್ದಾರೆ. ಸಾಮಾನ್ಯವಾಗಿ ತಪ್ಪು ಮಾಡಿದಾಗ ಕೆಲವರಿಗೆ ಪಶ್ಚಾತಾಪ ಆಗುತ್ತದೆ, ನಾಚಿಕೆ ಆಗುತ್ತದೆ. ಆದರೆ, ಇವರ ಮುಖದಲ್ಲಿ ಅದ್ಯಾವುದೂ ಕಾಣಿಸಲೇ ಇಲ್ಲ. ಇಬ್ಬರು ಹಾಯಾಗಿ ನಗುತ್ತಿದ್ದರು.
ಬಿಗ್ ಬಾಸ್ ಮನೆಯ ಒಳಗೆ ಯಾರೂ ಕೂಡ ಪಿಸುಧ್ವನಿಯಲ್ಲಿ ಮಾತನಾಡುವಂತಿಲ್ಲ. ಆದರೆ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಆರಂಭದಿಂದಲೂ ಈ ನಿಯಮವನ್ನು ಮುರಿಯುತ್ತಿದ್ದಾರೆ. ಡ್ರೆಸಿಂಗ್ ರೂಮ್ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ.
ಡ್ರೆಸಿಂಗ್ ರೂಮ್ಗೆ ಹೋಗಿ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂದು ಕಿಚ್ಚ ಸುದೀಪ್ ಅವರು ಕಳೆದ ವಾರಾಂತ್ಯದ ಸಂಚಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಅದರಿಂದ ಬಿಗ್ ಬಾಸ್ ಕೋಪಗೊಂಡರು. ‘50 ದಿನ ಕಳೆದರೂ ಸದಸ್ಯರು ಮನೆಯ ನಿಯಮ ಮುರಿಯುತ್ತಿದ್ದಾರೆ. ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆ ಮೀರಿಯೂ ಮತ್ತೆ ಪಿಸುದನಿಯಲ್ಲಿ ಮಾತನಾಡಿದ್ದಾರೆ’ ಎಂದು ಬಿಗ್ ಬಾಸ್ ಹೇಳಿದರು.
ತಪ್ಪು ಮಾಡಿದ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ವಿಡಿಯೋ ಪ್ರದರ್ಶಿಸಲಾಯಿತು. ಆ ವಿಡಿಯೋ ಪ್ಲೇ ಆಗುವಾಗಲೂ ಅಶ್ವಿನಿ ಗೌಡ ಮತ್ತು ಜಾಹ್ನವಿ ನಗುತ್ತಿದ್ದರು. ಅವರ ಮುಖದಲ್ಲಿ ತಪ್ಪು ಮಾಡಿದ ಭಾವನೆಯೇ ಕಾಣುತ್ತಿರಲಿಲ್ಲ. ಇದರಿಂದ ಬಿಗ್ ಬಾಸ್ ಇನ್ನಷ್ಟು ಅಸಮಾಧಾನಗೊಂಡರು. ‘ಈ ತಪ್ಪು ಮಾಡಿದ್ದಕ್ಕೆ ಹಾಗೂ ಉದ್ದಟತನ ತೋರಿದ್ದಕ್ಕೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ’ ಎಂದು ಬಿಗ್ ಬಾಸ್ ಘೋಷಿಸಿದರು.
https://www.newsics.com/2025/11/18/india-signs-deal-with-us-to-supply-10-of-cooking-gas/