Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಭಾರತಕ್ಕೆ ಶೇಕಡ 10 ರಷ್ಟು ಅಡುಗೆ ಅನಿಲವನ್ನು ಅಮೆರಿಕ ಪೂರೈಸಲಿದೆ. ಈ ಕುರಿತಾದ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಬೆಲೆ ನಿಯಂತ್ರಣಕ್ಕೆ ಬಲ ಬಂದಿದೆ. ಅಮೆರಿಕದಿಂದ ವಾರ್ಷಿಕ 2.2 ದಶಲಕ್ಷ ಟನ್ ಎಲ್ಪಿಜಿ ಪೂರೈಕೆ ಮಾಡಿಕೊಳ್ಳಲಾಗುವುದು.
ಮುಂದಿನ ವರ್ಷಕ್ಕೆ (2026) ಅಮೆರಿಕದಿಂದ 2.2 ಮಿಲಿಯನ್ ಟನ್ (ಎಂಟಿಪಿಎ) ಎಲ್ಪಿಜಿ (LPG) ಖರೀದಿಸಲು ಭಾರತ 1 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಆ ದೇಶದೊಂದಿಗೆ ಭಾರತ ಮಾಡಿಕೊಂಡ ಮೊದಲ ಎಲ್ಪಿಜಿ ಒಪ್ಪಂದ ಎನಿಸಿದೆ. ಇದು ಕೇವಲ ಕಮರ್ಷಿಯಲ್ ಡೀಲ್ ಅಲ್ಲ, ಎರಡೂ ದೇಶಗಳ ನಡುವಿನ ರಣತಂತ್ರಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ.
ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 2026ರ ಜನವರಿಯಿಂದ ಅಮೆರಿಕ ಕರಾವಳಿಯಿಂದ ವಾರ್ಷಿಕ ಸುಮಾರು 2.2 ದಶಲಕ್ಷ ಟನ್ ಎಲ್ಪಿಜಿ ಆಮದು ಮಾಡಿಕೊಳ್ಳಲಿವೆ. 40,000 ಕೋಟಿ ರೂ. ವ್ಯಯಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯ ಕಾರಣ ಸರ್ಕಾರದ ವೆಚ್ಚವೂ ಹೆಚ್ಚಾಗುತ್ತಿದೆ. ಎಲ್‌ಪಿಜಿ ಬೆಲೆ ಸ್ಥಿರತೆ ಸರ್ಕಾರದ ಸಬ್ಸಿಡಿ ವೆಚ್ಚವನ್ನು ಕಡಿಮೆ ಮಾಡಲಿದ್ದು, ಜನರಿಗೆ ಕಡಿಮೆ ದರದಲ್ಲಿ ಅಡಗೆ ಅನಿಲ ಪೂರೈಕೆಗೆ ಅನುಕೂಲವಾಗುತ್ತದೆ.