Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಾವಣಗೆರೆ: ಟ್ರ್ಯಾಕ್ಟರ್ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ರೈತ ಮೃತಪಟ್ಟಿದ್ದು, ಅವರ ದೇಹ ಛಿದ್ರಛಿದ್ರವಾದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ದಿದ್ದಿಗಿ ಗ್ರಾಮದ ನಾರಪ್ಪ (30) ರೋಟವೇಟರ್ ಯಂತ್ರ ಸಿಲುಕಿ ಮೃತಪಟ್ಟ ರೈತ.
ಎಂದಿನಂತೆ ರೈತ ನಾರಪ್ಪ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ರೋಟೋವೇಟರ್ ಹೊಡೆಸುತ್ತಿದ್ದರು. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರೈತ ನಾರಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಏಕಾಏಕಿ ಆತನ ಮೇಲೆ ರೋಟೋವೇಟರ್ ಯಂತ್ರ ಹರಿದಿದೆ. ಪರಿಣಾಮ ರೋಟೋವೇಟರ್‌ಗೆ ಸಿಕ್ಕ ನಾರಪ್ಪ ದೇಹ ಛಿದ್ರವಾಗಿದೆ.
ತಕ್ಷಣವೇ ಟ್ರ್ಯಾಕ್ಟರ್ ನಿಲ್ಲಿಸಿ ನೋಡಿದಾಗ ಸ್ಥಳದಲ್ಲೇ ರೈತ ನಾರಪ್ಪ ಕೊನೆಯುಸಿರೆಳೆದಿದ್ದರು. ಮನೆಗೆ ಆಧಾರವಾಗಿದ್ದ ರೈತ ನಾರಪ್ಪರನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕು ಹಿಡಿದು ಟ್ಯಾಕ್ಸಿ ಚಾಲಕರನ್ನು ಅಟ್ಟಾಡಿಸಿ ಅಟ್ಯಾಕ್ – ವೈರಲ್ ವಿಡಿಯೋ ನೋಡಿ
ದೆಹಲಿಯಲ್ಲಿ ಕಾರು ಸ್ಫೋಟ ಕೇಸ್ : ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ
ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಕೊಲೆ – ಪೊಲೀಸರಿಗೆ ಶರಣಾದ ಯುವತಿ