Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕಸ ಎಸೆಯಬೇಡಿ ಎಂದ ವಿದೇಶಿ ಯುವತಿಗೆ ಕಾಟ ಕೊಟ್ಟು ಮೊಂಡಾಟ ಮೆರೆದ ಮಕ್ಕಳು! ವೈರಲ್ ವೀಡಿಯೊ ನೋಡಿ
ದೇಶಪ್ರಮುಖವಿದೇಶವೈರಲ್

ಕಸ ಎಸೆಯಬೇಡಿ ಎಂದ ವಿದೇಶಿ ಯುವತಿಗೆ ಕಾಟ ಕೊಟ್ಟು ಮೊಂಡಾಟ ಮೆರೆದ ಮಕ್ಕಳು! ವೈರಲ್ ವೀಡಿಯೊ ನೋಡಿ

Share
2 Min Read
SHARE

Subscribe NewsicsKannada/YouTube

newsics.com
ಕಸ ಎಸೆಯಬೇಡಿ ಎನ್ನುವ ಪೌರ ಕಾರ್ಮಿಕರ ಮೇಲೆಯೇ ವಿದ್ಯಾವಂತರೆನಿಸಿಕೊಂಡವರು ಹಲ್ಲೆಗೆ ಮುಂದಾಗುತ್ತಾರೆ. ಜನರ ಈ ಮನಸ್ಥಿತಿಯಿಂದಾಗಿ ದೇಶದ ಮಾನ ವಿದೇಶದಲ್ಲಿ ಕಳೆಯುವಂತಾಗುತ್ತಿದೆ.

ಕೆಲ ದಿನಗಳ ಹಿಂದೆ ವಿದೇಶಿಗನೋರ್ವ ನಮ್ಮ ದೇಶದ ಸಾರ್ವಜನಿಕ ಸ್ಥಳವೊಂದರಲ್ಲಿ ಸ್ವಚ್ಛತೆ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು.

ಈಗ ವಿದೇಶಿ ಯುವತಿಯೊಬ್ಬಳ ಮತ್ತೊಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ನಮ್ಮ ದೇಶದ ಮಕ್ಕಳ ಮನಸ್ಥಿತಿ ನೋಡಿ ನಾವು ತಲೆತಗ್ಗಿಸುವಂತಾಗಿದೆ.
amina_finds ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೊ ವೈರಲ್ ಆಗಿದೆ. ಭಾರತೀಯ ಮಕ್ಕಳೊಂದಿಗೆ ಮಾತನಾಡಲು ಹೋಗಿ ತಪ್ಪಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.

ವೀಡಿಯೋದಲ್ಲಿ ಮಕ್ಕಳು ರಸ್ತೆಯಲ್ಲೇ ಕಸ ಎಸೆದಿದ್ದನ್ನು ನೋಡಿ ಆ ವಿದೇಶಿ ಯುವತಿ ಹೀಗೆ ಮಾಡಬೇಡಿ. ಈ ಕಸವನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ. ಇದು ನಿಮ್ಮ ದೇಶ ಎಂದು ಸೌಮ್ಯವಾಗಿ ಮನವಿ ಮಾಡುತ್ತಾರೆ. ಆದರೆ ಆ ಬಾಲಕರು ಅದಕ್ಕೆ ಒಪ್ಪುವುದಿಲ್ಲ. ಅದಕ್ಕೆ ವಿದೇಶಿ ಯುವತಿ ಇದು ಸರಿಯಲ್ಲ, ಕಸವನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಎಂಬಂತೆ ಮನವಿ ಮಾಡ್ತಾಳೆ. ಆದರೆ ಮಕ್ಕಳು ತಮ್ಮ ಮೊಂಡಾಟ ಮುಂದುವರಿಸಿದ್ದಾರೆ. ಮಕ್ಕಳ ವರ್ತನೆ ನೋಡಿ ಆ ವಿದೇಶಿ ಮಹಿಳೆ ಅಚ್ಚರಿಪಟ್ಟು ಸುಮ್ಮನಾಗಿದ್ದಾರೆ.
ಆದರೆ ಮಕ್ಕಳು ಸುಮ್ಮನಾಗಿಲ್ಲ, ಮಕ್ಕಳ ವರ್ತನೆಯಿಂದ ಬೇಸರಿಸಿಕೊಂಡು ತಿರುಗಿ ನಿಂತಿದ್ದ ಮಹಿಳೆಯನ್ನು ಎಕ್ಸ್‌ಕ್ಯೂಸ್‌ ಮಿ ಎಂದು ಕರೆದು ಡಾಲರ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯುವತಿ, ನಾನು ನಿಮಗೆ ಏನನ್ನೂ ಕೊಡುವುದಿಲ್ಲ. ನೀವು ಇಲ್ಲಿ ಕಸ ಎಸೆದಿದ್ದೀರಿ ಎಂದು ಅಲ್ಲಿ ಮಕ್ಕಳು ಎಸೆದ ಕಸವನ್ನು ತೋರಿಸುತ್ತಾರೆ.

ಇಷ್ಟಕ್ಕೇ ಸುಮ್ಮನಿರದ ಮಕ್ಕಳು ಕಿಡಿಗೇಡಿಗಳಂತೆ ವರ್ತಿಸುತ್ತಾ ಆಕೆಯ ಹಿಂದಿಂದೇ ಸಾಗುತ್ತಾ ಆಕೆ ಹೋದಲ್ಲೆಲ್ಲಾ ಕಸ ಎಸೆಯುತ್ತಾ ಹೋಗಿ ಆಕೆಯನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಮಹಿಳೆ ಇದು ನಿಮ್ಮ ದೇಶ, ನೀವು ಹೀಗೆಯೇ ಮಾಡುತ್ತಾ ಹೋದರೆ ನೀವು ಕಸದಲ್ಲೇ ಬದುಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಕಿಡಿಗೇಡಿ ಮಕ್ಕಳು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಆಕೆಯನ್ನು ಅಣಕಿಸಲು ನೋಡಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಅನೇಕ ಭಾರತೀಯ ನೆಟ್ಟಿಗರು ಮಕ್ಕಳ ವರ್ತನೆಗೆ ಆಕೆಯಲ್ಲಿ ಕ್ಷಮೆ ಕೇಳಿದ್ದಾರೆ. ಈ ರೀತಿಯ ಅನುಭವ ನಿಮಗಾಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಒಬ್ಬರು ಮನವಿ ಮಾಡಿದ್ದಾರೆ. ಅನೇಕರು ಮಕ್ಕಳಿಗೆ ಮಾರ್ಗದರ್ಶನದ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ತಿದ್ದಲು ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು ಎಂದು ಕಮೆಂಟ್ ಮಾಡಿದ್ದಾರೆ.

https://www.instagram.com/reel/DPnpQZUjIA5/?igsh=djN4czE4bXc5ZGlh

https://www.instagram.com/reel/DPsX9crksiO/?igsh=MTM2cmw0NWZ2c3JxNw==

ಬೀಚ್​ನಲ್ಲಿ ಹೆಲಿಕಾಪ್ಟರ್​ ಪತನ – ಹಲವರಿಗೆ ಗಾಯ; ವಿಡಿಯೋ ನೋಡಿ

TAGGED:Children show off their bravery by taunting a foreign woman who told them not to litter! Watch the viral video
Share This Article
Facebook Twitter Copy Link Print
Previous Article ತಂದೆಯ ಸಾವಿನ ನೋವಲ್ಲೇ ಮಗಳ ಆತ್ಮ*ಹತ್ಯೆ
Next Article Best Business Ideas : ಸ್ವಂತೂರಿನಲ್ಲೇ ಇದ್ದು ಈ ‘ಬ್ಯುಸಿನೆಸ್’ ಮಾಡಿ, ಲಕ್ಷಾಂತರ ಲಾಭಗಳಿಸಿ!

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?