Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ನ ಪೆಸಿಫಿಕ್ ಕೋಸ್ಟ್ ಹೆದ್ದಾರಿ ಮತ್ತು ಹಂಟಿಂಗ್ಟನ್ ಸ್ಟ್ರೀಟ್ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ವಾಟರ್ಫ್ರಂಟ್ ಬೀಚ್ ರೆಸಾರ್ಟ್ನ ಮುಂಭಾಗದಲ್ಲಿ ನಡೆಯುತ್ತಿದ್ದ ‘ಕಾರ್ಸ್ ಎನ್ ಕಾಪ್ಟರ್ಸ್ ಆನ್ ದಿ ಕೋಸ್ಟ್’ ಎಂಬ ಕಾರ್ಯಕ್ರಮದ ಸ್ಥಳದ ಬಳಿ ಸಂಭವಿಸಿದೆ. ಈ ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸ್ತಳೀಯರನ್ನು ಬೆಚ್ಚಿ ಬೀಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳ ಪ್ರಕಾರ, ಹೆಲಿಕಾಪ್ಟರ್ ಹಯಾತ್ ರೀಜೆನ್ಸಿ ಹೋಟೆಲ್ನ ಮುಂಭಾಗದ ಬಳಿ ಇಳಿಯುವಾಗ ಮರಗಳ ನಡುವೆ ಮತ್ತು ಹೋಟೆಲ್ನ ಮುಂಭಾಗದ ರಚನೆಯ ನಡುವೆ ಸಿಲುಕಿಕೊಂಡಿದೆ. ಅವಶೇಷಗಳು ಸಿಲುಕಿರುವ ದೃಶ್ಯವು ಈ ಘಟನೆಯ ಗಂಭೀರತೆಯನ್ನು ತೋರಿಸುತ್ತದೆ. ಈ ಹೆಲಿಕಾಪ್ಟರ್ ಪತನದಿಂದಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.