newsics.com
ತಿರುವನಂತಪುರಂ(ಕೇರಳ): ನಿಫಾ ವೈರಸ್‌ಗೆ ಕೋಝಿಕ್ಕೋಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.
ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಬಾಲಕನ ಮಾದರಿಯನ್ನು ವಿಶ್ಲೇಷಿಸಿದ ನಂತರ ನಿಫಾ ಸೋಂಕನ್ನು ಸರ್ಕಾರ ದೃಢಪಡಿಸಿದೆ ಎಂದರು.
ಭಾನುವಾರ (ಜುಲೈ 21) ಬೆಳಗ್ಗೆ 10:50ಕ್ಕೆ ಪಾಂಡಿಕ್ಕಾಡ್‌ನ ಬಾಲಕನಿಗೆ ತೀವ್ರ ಹೃದಯಸ್ತಂಭನ ಸಂಭವಿಸಿದೆ; ಆತನನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಸಚಿವೆ ವೀಣಾ ಹೇಳಿದರು.
ಆತ ವೆಂಟಿಲೇಟರ್ ಬೆಂಬಲದಲ್ಲಿದ್ದ; ಭಾನುವಾರ ಬೆಳಗ್ಗೆ ಮೂತ್ರದ ಉತ್ಪಾದನೆ ಕಡಿಮೆಯಾಗಿದೆ. ಭಾರೀ ಹೃದಯಸ್ತಂಭನದ ನಂತರ, ಆತನನ್ನು ಉಳಿಸುವ ಪ್ರಯತ್ನಗಳು ವಿಫಲವಾದವು. ಅವನು 11.30ಕ್ಕೆ ಕೊನೆಯುಸಿರೆಳೆದ ಎಂದು ಸಚಿವರು ತಿಳಿಸಿದರು.
ಅಂತಾರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ಬಾಲಕನ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿ ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತ್ಯಕ್ರಿಯೆ ನಡೆಯಲಿದೆ ಎಂದರು.
2018, 2021, 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತು 2019 ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ನಿಫಾ ಸೋಂಕು ಪ್ರಕರಣ ವರದಿಯಾಗಿದೆ. ಕೇರಳದಲ್ಲಿ ಮಾರಣಾಂತಿಕ ವೈರಸ್ 17 ಜನರನ್ನು ಬಲಿ ತೆಗೆದುಕೊಂಡಿದ್ದರೆ, 2023ರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗಮನಾರ್ಹವಾಗಿ, ಕೋಝಿಕ್ಕೋಡ್, ವೈನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಫಾ ವೈರಸ್ ಪ್ರತಿಕಾಯಗಳ ಉಪಸ್ಥಿತಿಯು ಪತ್ತೆಯಾಗಿದೆ.
ಏನಿದು ನಿಫಾ?:
ನಿಫಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಝೂನೋಟಿಕ್ ವೈರಸ್ ಆಗಿದೆ. ಇದು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಜನರ ನಡುವೆ ಹರಡಬಹುದು.
ಈ ವೈರಸ್ ಅನ್ನು 1999 ರಲ್ಲಿ ಪ್ರತ್ಯೇಕಿಸಿ ಗುರುತಿಸಲಾಯಿತು. ಮಲೇಷ್ಯಾದ ಹಳ್ಳಿಯೊಂದರ ‘ಸುಂಗೈ ನಿಫಾ’ ಹೆಸರನ್ನು ಇಡಲಾಗಿದೆ.
ತಜ್ಞರ ಪ್ರಕಾರ ನಿಫಾ ಒಂದು ಪ್ಯಾರಾಮಿಕ್ಸೊ ವೈರಸ್. ಇದು ಸಾಮಾನ್ಯ ಶೀತವನ್ನು ಉಂಟುಮಾಡುವ ಬೆರಳೆಣಿಕೆಯಷ್ಟು ವೈರಸ್‌ಗಳಲ್ಲಿ ಒಂದಾದ ಹ್ಯೂಮನ್ ಪ್ಯಾರೆನ್‌ಫ್ಲುಯೆಂಜಾ ವೈರಸ್‌ಗೆ ಸಂಬಂಧಿಸಿದೆ.
ಬಾವಲಿಗಳು, ದೊಡ್ಡ ಮತ್ತು ಸಣ್ಣ ಹಾರುವ ಪಕ್ಷಿಗಳಿಂದ ಈ ರೋಗ ಹರಡುವ ಸಾಧ್ಯತೆ ಹೆಚ್ಚು. ಇವುಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಹರಡುತ್ತವೆ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ ನಿಫಾ ವೈರಸ್‌ನ ಮಾನವ ಸೋಂಕಿನ ಎಲ್ಲಾ ಪ್ರಕರಣಗಳು ಸೋಂಕಿತ ಬಾವಲಿಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಕಾರಣದಿಂದಾಗಿವೆ ಎಂದು ವರದಿಗಳು ವಿವರಿಸಿವೆ.
ಕೊರೋನಾದಿಂದ ಭಾರತೀಯರ ಆಯಸ್ಸು ಕಡಿತ ವರದಿಗೆ ಆರೋಗ್ಯ ಇಲಾಖೆ ಹೇಳಿದ್ದೇನು..?