newsics.com
ಮುಂಬೈ: ಕ್ಯೂಟ್ ಬ್ಯೂಟಿ ಸಂಯುಕ್ತಾ ಮೆನನ್ ಕ್ಯಾರೆಕ್ಟರ್ ಬೇಸ್ಟ್ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿರೋ ಸಂಯುಕ್ತಾ ಇತ್ತೀಚೆಗೆ ಪಿಂಕ್ ಸೀರೆಯುಟ್ಟು ಮಿಂಚಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಂಯುಕ್ತಾ ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಟ್ರೆಂಡಿಂಗ್‌ಲ್ಲಿರೋ ನಟಿ. 2016ರಿಂದ ಮಲೆಯಾಳಂ ಸಿನಿರಂಗದಲ್ಲಿ ಮಿಂಚುತ್ತಿರುವ ಸಂಯುಕ್ತಾ ಟಾಲಿವುಡ್, ಕಾಲಿವುಡ್‌ನಲ್ಲಿ ಚಿರಪರಿಚಿತ ಹೆಸರು. ಮಲಯಾಳಂ, ತಮಿಳಿನ ಜೊತೆಗೆ ಕನ್ನಡದ ಗಾಳಿಪಟ 2 ಚಿತ್ರದಲ್ಲಿ ನಟಿಸಿ ಜನಮನ್ನಣೆ ಗಳಿಸಿರುವ ನಟಿ.
ಗುಲಾಬಿ ಬಣ್ಣದ ಸೀರೆಯಲ್ಲಿ ದೇವತೆಯಂತೆ ಸಂಯುಕ್ತಾ ಕಂಗೊಳಿಸಿದ್ದು, ಅದಕ್ಕೆ ಮ್ಯಾಚ್ ಆಗೋ ಹಾಗೆ ಬ್ಲೌಸ್ ತೊಟ್ಟಿದ್ದಾರೆ. ಜೊತೆಗೆ ಅವರು ಧರಿಸಿದ ದುಬಾರಿ ನೇಕ್ಲೇಸ್, ಸರಳವಾದ ಮೇಕಪ್, ಫ್ರೀ ಬಿಟ್ಟ ಹೇರ್ ಎಲ್ಲವೂ ಹೈಲೈಟ್ ಆಗಿತ್ತು.
ಸಂಯುಕ್ತಾ ಸೀರೆಯಲ್ಲಿ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು, ಸೋ ಬ್ಯೂಟಿಫುಲ್, ಸೌಂದರ್ಯ ದೇವತೆ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.
ಕೇರಳದಲ್ಲಿ ನಿಫಾಗೆ ಬಾಲಕ ಬಲಿ: ಹೃದಯಸ್ತಂಭನದಿಂದ ಸಾವು, ಹೆಚ್ಚಿದ ಆತಂಕ